ಸದ್ಯಕ್ಕೆ 'ಯಜಮಾನ' ಚಿತ್ರದ ಬಿಡುಗಡೆಯಲ್ಲಿ ಬ್ಯೂಸಿಯಾಗಿರುವ ರಶ್ಮಿಕಾ ಮಂದಣ್ಣ ಪವರ್ ಸ್ಟಾರ್ ಹಾಡೊಂದಕ್ಕೆ ಕುಣಿದು ಕುಪ್ಪಳಿಸಿದ್ದಾರೆ. ಅದೂ ತನ್ನ 6 ವರ್ಷದ ತಂಗಿಯೊಂದಿಗೆ. ಇದರಲ್ಲಿ ಏನಪ್ಪಾ ವಿಶೇಷ ಅಂತೀರಾ?

ಸೋಷಿಯಲ್ ಮೀಡಿಯಾ ತುಂಬಾ ಸೆಲೆಬ್ರಿಟಿಗಳ #10YearsChallenge ಫೋಟೋ ಹರಿದಾಡುತ್ತಿದೆ. ಆದರೆ, ಕಿರಿಕ್ ಬೆಡಗಿ ರಶ್ಮಿಕಾ ಈ ಚಾಲೆಂಜ್ ಅನ್ನು ವಿಭಿನ್ನವಾಗಿ ಅಕ್ಸೆಪ್ಟ್ ಮಾಡಿದ್ದು, ತಮಗಿಂತ 16 ವರ್ಷದ ಕಿರಿಯ ತಂಗಿಯೊಂದಿಗೆ ಡ್ಯಾನ್ಸ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಅದಕ್ಕೆ #16YearsChallenge ಎಂಬ ಹ್ಯಾಷ್ ಟ್ಯಾಗ್ ನೀಡಿದ್ದಾರೆ.

ಟಿವಿಯಲ್ಲಿ ಪ್ರಸಾರವಾಗುತ್ತಿದ ಪುನೀತ್ ರಾಜ್‌ಕುಮಾರ್ ಹಾಗೂ ಲೂಸ್ ಮಾದ ಅಭಿನಯದ 'ಯಾರೆ ಕೂಗಾಡಲಿ..' ಚಿತ್ರದ 'ಪಡುವಾರಳ್ಳಿ ಪಾಂಚಾಲಿ' ಹಾಡಿಗೆ ರಶ್ಮಿಕಾ ಸಖತ್ ಸ್ಟೆಪ್ ಹಾಕಿದ್ದಾರೆ. ಪುಟಾಣಿ ತಂಗಿಯೊಂದಿಗೆ ಮಾಡಿದ ಡ್ಯಾನ್ಸ್‌ ರಶ್ಮಿಕಾಗೆ ತಮ್ಮ ಬಾಲ್ಯವನ್ನು ನೆನಪಿಸಿದೆಯಂತೆ.

"#16YearsChallenge... ನೀವು ನೋಡುತ್ತಿರುವುದು 6 ವರ್ಷದ ಒಲ್ಡ್ ಮಿ ಆ್ಯಂಡ್ 22 ವರ್ಷದ ಒಲ್ಡ್ ಮೀ, ಇಬ್ಬರೂ ಒಟ್ಟಾಗಿ ಕುಣಿಯುತ್ತಿರುವುದು. ನಾನು ಟಿವಿಯಲ್ಲಿ ಬರುತ್ತಿದ್ದ ಹಾಡೊಂದನ್ನು ನೋಡುತ್ತಲೇ ಡ್ಯಾನ್ಸ್ ಕಲಿತೆ ಹಾಗೂ ಈಗಲೂ ಅದನ್ನು ಮಾಡುತ್ತೇನೆ. ನಾನು ಮಾಡಿದ್ದನ್ನೇ ನನ್ನ ತಂಗಿಯೂ ಮಾಡುತ್ತಿದ್ದಾಳೆ,' ಎಂದಿದ್ದಾರೆ ರಶ್ಮಿಕಾ.

https://www.instagram.com/tv/Bs3KPUcAM3v/?utm_source=ig_share_sheet&igshid=1xyef9bsv13m1