ಬಾಕ್ಸಾಫೀಸಿನಲ್ಲಿ ಮ್ಯಾಜಿಕ್‌ ಮಾಡಿದ್ದ ರಕ್ಷಿತ್‌ ಶೆಟ್ಟಿಅಭಿನಯದ ‘ಕಿರಿಕ್‌ ಪಾರ್ಟಿ' ಚಿತ್ರತಂಡಕ್ಕೆ ಯುಗಾದಿಯ ಬಂಫರ್‌ ಕೊಡುಗೆ ಸಿಕ್ಕಿದೆ. 2017 ರ ‘ಐಫಾ' (ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಆವಾರ್ಡ್ಸ್) ಚಿತ್ರೋತ್ಸವದಲ್ಲಿ ಅಧಿಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ಗೆಲುವಿನ ನಗೆ ಬೀರಿದೆ ‘ಕಿರಿಕ್‌ ಪಾರ್ಟಿ' ಚಿತ್ರ ತಂಡ. ಯುಗಾದಿ ದಿನ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಐಫಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅತ್ಯುತ್ತಮ ಚಿತ್ರ, ಅತ್ಯುತ್ತಮ ಸಾಹಿತ್ಯ, ಅತ್ಯುತ್ತಮ ನೃತ್ಯ, ಅತ್ಯುತ್ತಮ ಸಂಗೀತ ನಿರ್ದೇಶನ ಹಾಗೂ ಅತ್ಯುತ್ತಮ ನಟ ಸೇರಿದಂತೆ ಒಟ್ಟು ಆರು ಪ್ರಶಸ್ತಿಗಳು ನಟ ರಕ್ಷಿತ್‌ ಶೆಟ್ಟಿಮತ್ತವರ ತಂಡದ ಪಾಲಾಗಿವೆ. ಯುವ ನಿರ್ದೇಶಕ ‘ಲೂಸಿಯಾ' ಪವನ್‌ ಕುಮಾರ್‌ ಕೂಡ ಎರಡು ಕೈಯಲ್ಲೂ ಒಂದೊಂದು ಪ್ರಶಸ್ತಿ ಬಾಚಿಕೊಂಡು ಗೆಲುವಿನ ನಗೆ ಬೀರಿದರು.
ಬೆಂಗಳೂರು(ಮಾ.31): ಬಾಕ್ಸಾಫೀಸಿನಲ್ಲಿ ಮ್ಯಾಜಿಕ್ ಮಾಡಿದ್ದ ರಕ್ಷಿತ್ ಶೆಟ್ಟಿಅಭಿನಯದ ‘ಕಿರಿಕ್ ಪಾರ್ಟಿ' ಚಿತ್ರತಂಡಕ್ಕೆ ಯುಗಾದಿಯ ಬಂಫರ್ ಕೊಡುಗೆ ಸಿಕ್ಕಿದೆ. 2017 ರ ‘ಐಫಾ' (ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಆವಾರ್ಡ್ಸ್) ಚಿತ್ರೋತ್ಸವದಲ್ಲಿ ಅಧಿಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ಗೆಲುವಿನ ನಗೆ ಬೀರಿದೆ ‘ಕಿರಿಕ್ ಪಾರ್ಟಿ' ಚಿತ್ರ ತಂಡ. ಯುಗಾದಿ ದಿನ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಐಫಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅತ್ಯುತ್ತಮ ಚಿತ್ರ, ಅತ್ಯುತ್ತಮ ಸಾಹಿತ್ಯ, ಅತ್ಯುತ್ತಮ ನೃತ್ಯ, ಅತ್ಯುತ್ತಮ ಸಂಗೀತ ನಿರ್ದೇಶನ ಹಾಗೂ ಅತ್ಯುತ್ತಮ ನಟ ಸೇರಿದಂತೆ ಒಟ್ಟು ಆರು ಪ್ರಶಸ್ತಿಗಳು ನಟ ರಕ್ಷಿತ್ ಶೆಟ್ಟಿಮತ್ತವರ ತಂಡದ ಪಾಲಾಗಿವೆ. ಯುವ ನಿರ್ದೇಶಕ ‘ಲೂಸಿಯಾ' ಪವನ್ ಕುಮಾರ್ ಕೂಡ ಎರಡು ಕೈಯಲ್ಲೂ ಒಂದೊಂದು ಪ್ರಶಸ್ತಿ ಬಾಚಿಕೊಂಡು ಗೆಲುವಿನ ನಗೆ ಬೀರಿದರು.
ಪ್ರಶಸ್ತಿ ಪಟ್ಟಿ
ಅತ್ಯುತ್ತಮ ಚಿತ್ರ- ಕಿರಿಕ್ ಪಾರ್ಟಿ
ಅತ್ಯುತ್ತಮ ಕತೆ- ಪವನ್ ಕುಮಾರ್ (ಯುಟರ್ನ್)
ಅತ್ಯುತ್ತಮ ನಿರ್ದೇಶಕ- ಪವನ್ ಕುಮಾರ್(ಯುಟರ್ನ್)
ಅತ್ಯುತ್ತಮ ನಟ- ರಕ್ಷಿತ್ ಶೆಟ್ಟಿ(ಕಿರಿಕ್ ಪಾರ್ಟಿ)
ಅತ್ಯುತ್ತಮ ನಟಿ- ಪಾರೂಲ್ ಯಾದವ್(ಕಿಲ್ಲಿಂಗ್ ವೀರಪ್ಪನ್)
ಅತ್ಯುತ್ತಮ ಹಾಸ್ಯ ನಟ- ಚಿಕ್ಕಣ್ಣ(ಕೋಟಿಗೊಬ್ಬ 2)
ಅತ್ಯುತ್ತಮ ಗೀತೆ ರಚನೆ- ರಕ್ಷಿತ್ ಶೆಟ್ಟಿ( ಕಿರಿಕ್ ಪಾರ್ಟಿ)
ಅತ್ಯುತ್ತಮ ನೃತ್ಯ ನಿರ್ದೇಶನ- ರಕ್ಷಿತ್ ಶೆಟ್ಟಿ(ಕಿರಿಕ್ ಪಾರ್ಟಿ)
ಅತ್ಯುತ್ತಮ ಸಂಗೀತ ನಿರ್ದೇಶನ- ಬಿ. ಅಜನೀಶ್ ಲೋಕನಾಥ್(ಕಿರಿಕ್)
ಅತ್ಯುತ್ತಮ ಖಳನಟ- ವಶಿಷ್ಟಸಿಂಹ( ಗೋಧಿ ಬಣ್ಣ ಸಾಧಾರಣ ಮೈಕಟ್ಟು)
ಅತ್ಯುತ್ತಮ ಹಿನ್ನೆಲೆ- ಗಾಯಕ ವಿಜಯ್ ಪ್ರಕಾಶ್ (ಕಿರಿಕ್ ಪಾರ್ಟಿ)
ಅತ್ಯುತ್ತಮ ಹಿನ್ನೆಲೆ ಗಾಯಕಿ- ಇಂಚರಾ ರಾವ್(ಗೋ)
ಅತ್ಯುತ್ತಮ ಪೋಷಕ- ನಟ ರಕ್ಷಿತ್ ಶೆಟ್ಟಿ(ಗೋಧಿ ಬಣ್ಣ ಸಾಧಾರಣ ಮೈಕಟ್ಟು)
ಅತ್ಯುತ್ತಮ ಪೋಷಕ ನಟಿ- ಯಜ್ಞಾ ಶೆಟ್ಟಿ( ಕಿ.ವೀರಪ್ಪನ್)
ವರದಿ: ಕನ್ನಡ ಪ್ರಭ
