ಸೋಶಿಯಲ್ ಮೀಡಿಯಾ ಮಾಸ್ಟರ್ ಗಳ ಕೈಗೆ ಸಿಕ್ಕಿಬಿದ್ದ ರಾಖಿ ಸಾವಂತ್/ ಇದು ಯುಕೆಯ ಮನೆಯಲ್ಲ ನಮ್ಮ ಬೆಂಗಳೂರು/ ವಿಡಿಯೋ ಶೇರ್ ಮಾಡಿ ಕೆಟ್ಟ ಬಾಲಿವುಡ್ ನಟಿ

ಬೆಂಗಳೂರು(ಸೆ. 27) ರಾಖಿ ಸಾವಂತ್ ಮತ್ತೊಮ್ಮೆ ಟ್ರೋಲ್ ಗೆ ಆಹಾರವಾಗಿದ್ದಾರೆ. ಯುಕೆಯಲ್ಲಿರುವ ಎನ್ ಆರ್ ಐ ಅವರನ್ನು ಮದುವೆಯಾಗಿ ಸುದ್ದಿ ಮಾಡಿದ್ದ ರಾಖಿ ಇದೀಗ ಬೀದಿಗೆ ಬಂದಿದ್ದಾರೆ.

ಮನೆಯ ಹೊರಗೆ ನಿಂತುಕೊಂಡಿರುವ ವಿಡಿಯೋ ಒಂದನ್ನು ರಾಖಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ನನ್ನ ಗಂಡ ಯುಕೆಯ ಈ ಮನೆಯನ್ನು ಗಿಫ್ಟ್ ಕೊಟ್ಟಿದ್ದಾರೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.#

ವಿಶ್ವಕಪ್ 2019: ಪಾಕಿಸ್ತಾನಕ್ಕೆ "ಅದನ್ನು" ಬಿಚ್ಚಿ ತೋರಿಸಿದ ಪೂನಂ ಪಾಂಡೆ

ಆದರೆ ಸೋಶಿಯಲ್ ಮೀಡಿಯಾದ ನೆಟ್ಟಿಗರು ಈ ಮನೆಯ ಅಸಲಿ ವಿಳಾಸ ಪತ್ತೆ ಮಾಡಿದ್ದಾರೆ. ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಯಲ್ಲಿರುವ ಮನೆ ಇದು ಎಂಬುದನ್ನು ಸಾಕ್ಷಿ ಸಮೇತ ವಿವರಿಸಿದ್ದಾರೆ.

ಆದರೆ ಕತೆ ಇಲ್ಲಿಗೆ ನಿಲ್ಲುವುದಿಲ್ಲ. ಈ ಮನೆಯ ಅಸಲಿ ಮಾಲೀಕರು ಯಾರು ಎಂಬುದನ್ನು ಸೋಶಿಯಲ್ ಮೀಡಿಯಾ ತಿಳಿಸಿದೆ. ಬೆಂಗಳೂರಿನ ಫ್ಯಾಷನ್ ಡಿಸೈನರ್ ಅವಿವಾ ಬಿದ್ದಪ್ಪ ಈ ಮನೆಯ ಮಾಲೀಕರು ನನಗೆ ಪರಿಚಯವಿದ್ದಾರೆ. ನಿಮ್ಮ ಮನೆಯ ಮುಂದೆ ಯಾರೋ ಇದ್ದಾರೆ ಗಮನಿಸಿ ಎಂದು ಮಾಲೀಕರಿಗೆ ಟ್ಯಾಗ್ ಮಾಡಿದ್ದಾರೆ.

NRI ಮದುವೆಯಾದ ರಾಖಿ, ಹನಿಮೂನ್ ಪೋಟೋಗಳು ವೈರಲ್!

ರಾಖಿ ಸಾವಂತ್ ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ನಾನು ಬೆಂಗಳೂರಿನ ಇಂದಿರಾನಗರದಲ್ಲಿ ಇದ್ದೇನೆ. ಬೆಂಗಳೂರಿನಲ್ಲಿಯೇ ನೆಲಸುವ ಯೋಜನೆ ಮಾಡುತ್ತಿದ್ದು ನೃತ್ಯ ಶಾಲೆಯೊಂದನ್ನು ತೆರೆಯುವ ಸಿದ್ಧತೆಯಲ್ಲಿದ್ದೇನೆ ಎಂದಿದ್ದಾರೆ. ಒಟ್ಟಿನಲ್ಲಿ ಸೋಶಿಯಲ್ಲಿ ಮೀಡಿಯಾದ ನೆಟಟ್ಟಿಗರು ಫ್ಯಾಕ್ಟ್ ಚೆಕ್ ಮಾಡಿದ್ದಾರೆ.

ಇಂಗ್ಲಿಷ್ ನಲ್ಲಿಯೂ ಓದಿ

View post on Instagram