ಬೆಂಗಳೂರು(ಸೆ.21): ಸೈನೈಡ್, ವೀರಪ್ಪನ್ ಅಟ್ಟಹಾಸದಂತಹ ಸಿನಿಮಾ ಮಾಡಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದರು ಎ.ಎಂ.ಆರ್.ರಮೇಶ್. ಅದೇ ರಮೇಶ್ ಈಗ ರಾಜೀವ ಗಾಂಧಿ ಹತ್ಯೆ ಮೇಲೆ ಚಿತ್ರ ಮಾಡ್ತಿದ್ದಾರೆ. ಆ ಸ್ಫೋಟ ದಿ ಹ್ಯೂಮನ್ ಬಾಂಬ್ ಅಂತಲೂ ಹೆಸರಿಸಿದ್ದಾರೆ. ಸೈನೈಡ್ ಚಿತ್ರದ ಕಥೆ ಏನಿದೆ. ಅದು ರಾಜೀವ ಗಾಂಧಿ ಹತ್ಯೆ ಆದಮೇಲೆ ಕಥೆ ಹೇಳಿದೆ.
ಆದರೆ, ಆ ಸ್ಫೋಟ ಹತ್ಯೆ ಆಗುವ ಮುಂಚಿನ ಹಲವು ಸತ್ಯ ಹೇಳುತ್ತಿದೆ. ರಾಜೀವ ಗಾಂಧಿ ಹತ್ಯೆ ಪ್ರಕರಣ ಭೇದಿಸಿದ ರಿಯಲ್ ಪೊಲೀಸ್ ಆಫೀಸರ್ ಕಾರ್ತಿಕೇನ್, ರಾಮಲಿಂಗಮ್ಮ, ಕುಚ್ಚಣ್ಣ ಶ್ರೀನಿವಾಸ್, ಗೋಪಾಲ್ ಹೊಸೂರು ಪಾತ್ರಗಳಲ್ಲಿ ಪ್ರಮುಖರು ಅಭಿನಯಿಸಲಿದ್ದಾರೆ. ಚಿತ್ರ ಮುಂದಿನ ನವೆಂಬರ್'ನಿಂದ ಶುರುವಾಗಲಿದೆ. ರಾಜೀವ ಗಾಂಧಿ ಹತ್ಯೆ ಆದ ದಿನ ಮೇ.21 ರಂದೇ ಚಿತ್ರ ಬಿಡುಗಡೆಯಾಗುವ ಸಾಧ್ಯತೆಯಿದೆ.
