Dharman Movie: ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್, ರಜನಿಕಾಂತ್ ಅವರ ಬಹುನಿರೀಕ್ಷಿತ 'ಧರ್ಮನ್ - ದಿ ಡೆಡ್ಲಿ ಡಾಕ್ಟರ್' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ.

ರಜನಿಕಾಂತ್ ಅವರ ಬಹುನಿರೀಕ್ಷಿತ 'ತಲೈವರ್ 173' ಚಿತ್ರಕ್ಕೆ 'ಧರ್ಮನ್' ಎಂದು ಹೆಸರಿಡಲಾಗಿದೆ. ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ಸ್ ನಿರ್ಮಿಸುತ್ತಿರುವ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು, ರಕ್ತಸಿಕ್ತ ಕೈಯಲ್ಲಿ ಸ್ಕಾಲ್ಪೆಲ್ ಹಿಡಿದ 'ಡೆಡ್ಲಿ ಡಾಕ್ಟರ್' ಅವತಾರದಲ್ಲಿ ಸೂಪರ್‌ಸ್ಟಾರ್ ಕಾಣಿಸಿಕೊಂಡಿದ್ದಾರೆ. ಸೂಪರ್‌ಸ್ಟಾರ್ ರಜನಿಕಾಂತ್ ಅವರ ಮುಂದಿನ ಸಿನಿಮಾ, ಅಂದ್ರೆ 'ತಲೈವರ್ 173'ಗೆ ಈಗ ಅಧಿಕೃತವಾಗಿ 'ಧರ್ಮನ್' ಅಂತ ಟೈಟಲ್ ಫಿಕ್ಸ್ ಆಗಿದೆ. ಈ ಘೋಷಣೆ, ತಲೈವಾ ಮುಂದಿನ ಪ್ರಾಜೆಕ್ಟ್‌ ಬಗ್ಗೆ ಅಪ್‌ಡೇಟ್‌ಗಾಗಿ ಕಾಯುತ್ತಿದ್ದ ಅಭಿಮಾನಿಗಳಲ್ಲಿ ಸಖತ್ ಕ್ರೇಜ್ ಸೃಷ್ಟಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

'ಧರ್ಮನ್' ಫಸ್ಟ್-ಲುಕ್ ಪೋಸ್ಟರ್

ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್, ರಜನಿಕಾಂತ್ ಅವರ ಬಹುನಿರೀಕ್ಷಿತ 'ಧರ್ಮನ್ - ದಿ ಡೆಡ್ಲಿ ಡಾಕ್ಟರ್' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ಈ ಪೋಸ್ಟರ್‌ನಲ್ಲಿ ರಜನಿಕಾಂತ್ ಡಾಕ್ಟರ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಕೈಯಲ್ಲಿ ರಕ್ತಸಿಕ್ತ ಸ್ಕಾಲ್ಪೆಲ್ ಇದೆ. ಮುಖದಲ್ಲಿನ ನಗು, ಸಿಗ್ನೇಚರ್ ಸನ್‌ಗ್ಲಾಸ್ ಮತ್ತು ಆಪರೇಷನ್ ಥಿಯೇಟರ್‌ನ ಹಿನ್ನೆಲೆ ನೋಡಿದ್ರೆ, ಈ ಪಾತ್ರ ಅಧಿಕಾರ ಮತ್ತು ರಹಸ್ಯ ಎರಡನ್ನೂ ಹೊಂದಿದೆ ಅನ್ನೋ ಸುಳಿವು ಸಿಗುತ್ತೆ. ಚಿತ್ರತಂಡವು ಸದ್ಯಕ್ಕೆ ಸಿನಿಮಾದ ಹೆಚ್ಚಿನ ವಿವರಗಳನ್ನು ಗೌಪ್ಯವಾಗಿಟ್ಟಿದ್ದರೂ, ಈ ಪೋಸ್ಟರ್ ಅಭಿಮಾನಿಗಳಲ್ಲಿ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

ರಜನಿಕಾಂತ್ ಬಗ್ಗೆ

ತಮ್ಮ ಕೋಟ್ಯಂತರ ಅಭಿಮಾನಿಗಳಿಂದ 'ತಲೈವಾ' (ನಾಯಕ) ಎಂದು ಪ್ರೀತಿಯಿಂದ ಕರೆಸಿಕೊಳ್ಳುವ ರಜನಿಕಾಂತ್, ಭಾರತೀಯ ಚಿತ್ರರಂಗದ ಅತ್ಯಂತ ಪ್ರಭಾವಿ ನಟರಲ್ಲಿ ಒಬ್ಬರು. ನಾಲ್ಕು ದಶಕಗಳಿಗೂ ಹೆಚ್ಚು ಕಾಲದ ತಮ್ಮ ವೃತ್ತಿಜೀವನದಲ್ಲಿ, ಅವರು ತಮಿಳು, ತೆಲುಗು, ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ನಟಿಸಿದ್ದಾರೆ. ರಜನಿಕಾಂತ್ ಅವರ ಪ್ರಭಾವ ಕೇವಲ ತೆರೆಯ ಮೇಲಿನ ಪಾತ್ರಗಳಿಗೆ ಸೀಮಿತವಾಗಿಲ್ಲ. ಹಲವು ಜಾನರ್‌ ಮತ್ತು ಭಾಷೆಗಳ ಸಿನಿಮಾಗಳ ಮೂಲಕ ಸಾಗಿಬಂದ ಅವರ ಪಯಣ, ಚಿತ್ರರಂಗದಲ್ಲಿ ಅಳಿಸಲಾಗದ ಛಾಪು ಮೂಡಿಸಿದೆ.

ರಜನಿಕಾಂತ್ ಅವರ ಇತ್ತೀಚಿನ ಚಿತ್ರ

ರಜನಿಕಾಂತ್ ಇತ್ತೀಚೆಗೆ 'ಕೂಲಿ' ಎಂಬ ಆ್ಯಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರವನ್ನು ಲೋಕೇಶ್ ಕನಗರಾಜ್ ನಿರ್ದೇಶಿಸಿದ್ದರು. ವಿಶಾಖಪಟ್ಟಣಂ ಡಾಕ್ಸ್‌ನ ಹಿನ್ನೆಲೆಯಲ್ಲಿ ಸಾಗುವ ಈ ಕಥೆಯಲ್ಲಿ, ದೇವ ಎಂಬ ಮಾಜಿ ಕೂಲಿ, ತನ್ನ ಸ್ನೇಹಿತನ ಅನುಮಾನಾಸ್ಪದ ಸಾವಿನ ತನಿಖೆ ನಡೆಸುವಾಗ, ದೊಡ್ಡ ಕಳ್ಳಸಾಗಾಣಿಕೆ ಜಾಲವನ್ನು ಬಯಲಿಗೆಳೆಯುತ್ತಾನೆ.