ಅಂಬಿ ನಿಂಗೆ ವಯಸ್ಸಾಯ್ತು ಚಿತ್ರ ಮಾಡಲು ರಜನೀಕಾಂತ್ ಹೇಳಿದ್ದರಂತೆ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 3, Aug 2018, 12:02 PM IST
Rajanikanth suggest to Ambarish to make a film 'Ambi Ninge Vayassayto'
Highlights

ಜಾಕ್ ಮಂಜು ಅಂಬಿ ನಿಂಗೆ ವಯಸ್ಸಾಯ್ತೋ ಸಿನಿಮಾ ನಿರ್ಮಾಣಕ್ಕೆ ಕೈ ಹಾಕುವ ಮುನ್ನ ರಜನೀಕಾಂತ್ ಅವರೇ ನನಗೆ ಕಾಲ್ ಮಾಡಿ, ಈ ಸಿನಿಮಾ ಮಾಡಿ ಅಂದಿದ್ರು. ನಿರ್ಮಾಪಕ ಜಾಕ್ ಮಂಜು ಬಂದು ಈ ಸಿನಿಮಾ ಮಾಡ್ತೇನೆ ಅಂದಾಗ ಖುಷಿ ಆಯ್ತು. ಜತೆಗೆ ಸುದೀಪ್ ಇದ್ದಾರೆ ಎಂದಾಗ ನಂಬಿಕೆ ಹುಟ್ಟಿತು. ನಾನು ನಿರ್ಮಾಪಕರ ನಟ. ಅವರ ಕಷ್ಟ-ನಷ್ಟ ನನಗೂ ಗೊತ್ತಿವೆ. ಹಾಗಾಗಿ ಆರೋಗ್ಯ ಲೆಕ್ಕಿಸದೆ ಈ ಸಿನಿಮಾ ಮುಗಿಸಿಕೊಟ್ಟಿದ್ದೇನೆ ಎನ್ನುತ್ತಾರೆ ಅಂಬರೀಶ್.  

ಅಷ್ಟು ಸಣ್ಣ ಹುಡುಗ ಆತ. ಅವನ ಡೈರೆಕ್ಷನ್ ಸಿನಿಮಾದಲ್ಲಿ ನೀವ್ ಆ್ಯಕ್ಟ್ ಮಾಡ್ತಿರೋದಂದ್ರೆ ಸೋಜಿಗ..  - ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರ ಒಪ್ಪಿಕೊಂಡಾಗ ಅಂಬರೀಷ್ ಅವರಿಗೆ ತುಂಬಾ ಹತ್ತಿರದವರು ಹೀಗೆ ಹೇಳಿ ನಕ್ಕಿದ್ದರಂತೆ.

ಅಷ್ಟೇ ಯಾಕೆ, ಗುರುದತ್ ಗಾಣಿಗರನ್ನು ಮೊದಲ ಸಲ ನೋಡಿದಾಗ ಅಂಬರೀಷ್ ಕೂಡ ನಕ್ಕಿದ್ದರಂತೆ. ಗುರುದತ್ ಜತೆ ಸುದೀಪ್ ಅವರ ಮನೆಗೆ ಬಂದು ‘ಈತನೇ ಡೈರೆಕ್ಷನ್ ಮಾಡ್ತಿರೋದು’ ಅಂದಾಗ ‘ಸುಮ್ಕಿರಪ್ಪಾ ತಮಾಷೆ ಮಾಡ್ಬೇಡ’ ಅಂದಿದ್ದರಂತೆ . ಆದ್ರೆ, ಈಗ ಚಿತ್ರದ ಬಗ್ಗೆ ಮಾತನಾಡಲು ಕುಳಿತರೆ, ಗುರುದತ್ ಗಾಣಿಗ ಕೆಲಸವನ್ನು ಮನಸಾರೆ ಬಣ್ಣಿಸುತ್ತಾರೆ ಅಂಬರೀಷ್

‘ಗಾತ್ರ ನೋಡಿ ಯಾರನ್ನೂ ಅಳೆಯಬಾರದು. ಅವರವರ ಸಾಮರ್ಥ್ಯ ಗಾತ್ರದಲ್ಲಿರುವುದಿಲ್ಲ, ಬುದ್ಧಿವಂತಿಕೆಯಲ್ಲಿ ಇರುತ್ತದೆ. ಕಳ್ಳನ್ನ ನಂಬಿದ್ರು, ಕುಳ್ಳನ್ನ ನಂಬಬಾರದು ಅಂತ ಸುಮ್ಕೆ ಹೇಳಿಲ್ಲ’ ಅಂತ ನಗ್ತಾರೆ ಅಂಬರೀಷ್. ಚಿತ್ರೀಕರಣ ಮುಗಿದಿದೆ. ಆಗಸ್ಟ್ ಕೊನೆ ವಾರ ಬಿಡುಗಡೆ ಸಿದ್ಧತೆ ನಡೆದಿದೆ. ನಿರ್ಮಾಪಕ ಜಾಕ್ ಮಂಜು ಈಗ ಚಿತ್ರದ ಪ್ರಮೋಷನ್ ಶುರುಮಾಡಿದ್ದಾರೆ. ಅದೇ ನೆಪದಲ್ಲಿ ಮೊದಲ ಬಾರಿಗೆ ಚಿತ್ರತಂಡ ಮಾಧ್ಯಮ ಮುಂದೆ ಬಂದಿತ್ತು.

ತುಂಬಾ ಮುದ್ದಾಗಿ ಕಾಣುತ್ತೆ ಚಿತ್ರ:

ಅಂಬರೀಷ್ ಜಾಕ್ ಮಂಜು ಈ ಸಿನಿಮಾ ನಿರ್ಮಾಣಕ್ಕೆ ಕೈ ಹಾಕುವ ಮುನ್ನ ರಜನೀಕಾಂತ್ ಅವರೇ ನನಗೆ ಕಾಲ್ ಮಾಡಿ, ಈ ಸಿನಿಮಾ ಮಾಡಿ ಅಂದಿದ್ರು. ನಿರ್ಮಾಪಕ ಜಾಕ್ ಮಂಜು ಬಂದು ಈ ಸಿನಿಮಾ ಮಾಡ್ತೇನೆ ಅಂದಾಗ ಖುಷಿ ಆಯ್ತು. ಜತೆಗೆ ಸುದೀಪ್ ಇದ್ದಾರೆ ಎಂದಾಗ ನಂಬಿಕೆ ಹುಟ್ಟಿತು. ನಾನು ನಿರ್ಮಾಪಕರ ನಟ. ಅವರ ಕಷ್ಟ-ನಷ್ಟ ನನಗೂ ಗೊತ್ತಿವೆ. ಹಾಗಾಗಿ ಆರೋಗ್ಯ ಲೆಕ್ಕಿಸದೆ ಈ ಸಿನಿಮಾ ಮುಗಿಸಿಕೊಟ್ಟಿದ್ದೇನೆ.

ಯಾವುದೇ ರೀತಿಯಲ್ಲೂ ತೊಂದರೆ ಮಾಡಿಲ್ಲ ಅಂತ ನಾನಂದುಕೊಂಡಿದ್ದೇನೆ. ಇಡೀ ಸಿನಿಮಾ ಮುದ್ದು ಮುದ್ದಾಗಿ ಬಂದಿದೆ. ನನ್ನ ಕೆರಿಯರ್‌ನಲ್ಲಿ ಇದು ಒಳ್ಳೆಯ ಸಿನಿಮಾ ಆಗುತ್ತೆ. ನನಗೆ ವಯಸ್ಸಾಗಿದೆಯೋ ಇಲ್ಲವೋ ಎನ್ನುವುದು ಚಿತ್ರ ನೋಡಿದಾಗ ಗೊತ್ತಾಗುತ್ತೆ ಎಂದರು ಅಂಬರೀಶ್.

‘ಆಗಸ್ಟ್ ಕೊನೆ ವಾರದಲ್ಲೇ ಚಿತ್ರವನ್ನು ತೆರೆಗೆ ತರಬೇಕೆನ್ನುವ ಚಿಂತನೆ ಇದೆ. ಆದ್ರೆ ಬೇರೆ ಸ್ಟಾರ್ ಸಿನಿಮಾಗಳು ರಿಲೀಸ್ ಆಗುವ ಹಂತದಲ್ಲಿವೆ. ಎಲ್ಲವನ್ನು ನೋಡಿಕೊಂಡೇ ಚಿತ್ರಮಂದಿರಕ್ಕೆ ಬರುತ್ತೇವೆ’ ಎಂದರು ನಿರ್ಮಾಪಕ ಜಾಕ್ ಮಂಜು. ಚಿತ್ರದಲ್ಲಿ ಅಭಿನಯಿಸಿರುವ ದಿಲೀಪ್ ರಾಜ್, ಅಭಿ, ಸಂಚಿತ್ ಹಾಜರಿದ್ದರು.

ಪ್ರೀತಿಯ ಕೊಡುಗೆ:

ಸುದೀಪ್ ಸಿನಿಮಾ ಶೂಟಿಂಗ್ ಮುಗಿದು ರಿಲೀಸ್‌ಗೆ ರೆಡಿ ಆಗಿದೆ. ಕಾಳಜಿಯಿಂದ ಮಾಡಿದ ಸಿನಿಮಾ. ಚಿತ್ರೀಕರಣದ ವೇಳೆ ಹಲವು ಬಾರಿ ಅಂಬರೀಷ್ ಮಾಮ ಡೈಲಿ ಚೆಕಪ್ಗೆ ಅಂತ ಆಸ್ಪತ್ರೆಗೆ ಹೋಗಿ ಬಂದಿದ್ದಾರೆ. ಆದ್ರೆ ಎಂದಿಗೂ ಶೂಟಿಂಗ್ ಸೆಟ್‌ನಲ್ಲಿ ಆಯಾಸವನ್ನು ತೋರಿಸಿಕೊಳ್ಳದೆ ಲವಲವಿಕೆಯಲ್ಲಿ ಚಿತ್ರೀಕರಣ ಮುಗಿಸಿಕೊಟ್ಟಿದ್ದಾರೆ. ಬಲವಂತವಾಗಿ ನಾವೇ ಅವರನ್ನು ಸುಸ್ತು ಮಾಡಿಸುತ್ತಿದ್ದೆವೋ ಎನ್ನುವ ನೋವು ನಮ್ಮನ್ನು ಕಾಡಿದೆ. ಆದರೂ, ಅವರು ತಮ್ಮ ಸುಸ್ತು ತೋರಿಸಿಕೊಂಡಿಲ್ಲ. ಅದೇ ನಮಗೆ ಸಾಕಷ್ಟು ಎನರ್ಜಿ ಕೊಟ್ಟಿದೆ. ಚಿತ್ರದಲ್ಲಿ ನಾನು ಅವರಿಗೆ ಮುಖಾಮುಖಿ ಆಗದಿದ್ದರೂ ಅವರದ್ದೇ ಪಾತ್ರದಲ್ಲಿ ನಾನು ಅವರಾಗಿ ಕಾಣಿಸಿಕೊಂಡಿದ್ದಕ್ಕೆ ಖುಷಿಯಿದೆ. ಅವರೇ ನಮಗೆ ಪ್ರೀತಿಯಿಂದ ಕೊಟ್ಟ ಕೊಡುಗೆಯಿದು ಎಂದಿದ್ದು ಸುದೀಪ್. 

loader