ಅಪ್ಪನ ದಿನದಂದು ಯಶ್ ಮಗಳನ್ನು ಮುದ್ದಾಡುತ್ತಿರುವ ವಿಶೇಷ ಫೋಟೋವನ್ನು ರಾಧಿಕಾ ಪಂಡಿತ್ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದು ಫುಲ್ ವೈರಲ್ ಆಗಿದೆ...

ರಾಕಿಂಗ್ ದಂಪತಿ ಮುದ್ದಾದ ಮಗಳನ್ನು ನೋಡಲು ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಅಭಿಮಾನಿಗಳಿಗೆ ಅಕ್ಷಯ ತೃತೀಯದಂದು ಲಕ್ಷ್ಮಿಯಂತೆ ಕೆಂಪು ಲಂಗ ಬ್ಲೌಸ್ ಧರಿಸಿದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು.

ಮಗಳಿಗೆ 6 ತಿಂಗಳು ತುಂಬಿದ ಸಂಭ್ರಮ ಶೇರ್ ಮಾಡಿಕೊಂಡ ರಾಧಿಕಾ

ಅದಾದ ನಂತರ ಮಗಳು 3 ತಿಂಗಳಾಗಿದ್ದಾಗಿನ ಫೋಟೋ ಶೂಟ್ ಹಾಗೂ ಸ್ಪೇಶಲ್ ವಿಡಿಯೋವನ್ನು ಬೇಬಿ ವೈಆರ್‌ಗೆ 6 ತಿಂಗಳು ತುಂಬುತ್ತಿರುವ ಸಂತಸದಲ್ಲಿ ರಾಧಿಕಾ ಪಂಡಿತ್ ಹಂಚಿಕೊಂಡಿದ್ದರು. ಈಗ ಅಪ್ಪಂದಿರ ದಿನದಂದೂ ಅಪ್ಪ- ಮಗಳ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ. ಅಪ್ಪನ ಕೊರಳ ತುಂಬಾ ಕೈ ಹಾಕಿ, ಆಶ್ಚರ್ಯ ಚಕಿತವಾಗಿ ನೋಡುತ್ತಿರುವ ಮುದ್ದು ಬಂಗಾರಿಯ ಫೋಟೋ ಎಂಥವರ ಹೃದಯವನ್ನು ಗೆಲ್ಲುತ್ತದೆ.

View post on Instagram

'ಈ ಎಳೆಯ ಮುದ್ದಾದ ಕೈಗಳು ಅವಳ ಮೊದಲ ಹಾಗೂ ಎಂದೆಂದಿನ ಸೂಪರ್‌ ಹೀರೋನ ಕೊರಳಿಗೆ ಹಾರವಾಗಿವೆ. ಆತ ಅವಳನ್ನೆಂದೂ ಕೆಳ ಬೀಳಲು ಬಿಡಲಾರ. ಎಲ್ಲ ಸೂಪರ್ ಹೀರೋಗಳಿಗೂ ಫಾದರ್ಸ್ ಡೇ ಶುಭಾಷಯಗಳು’ ಎಂಬ ಸಾಲುಗಳು ಈ ಪೋಸ್ಟ್‌ನೊಂದಿಗಿವೆ. ಯಶ್ ತನ್ನ ಎದೆಯ ಮೇಲೆ ಮುದ್ದು ಮಗಳನ್ನು ಹಾಕಿಕೊಂಡು ಮುದ್ದಿಸುತ್ತಿರುವ ಈ ಫೋಟೋ ಹಾಕಿದ ಕೆಲವೇ ಕ್ಷಣಗಳಲ್ಲಿ ಫೇಸ್‌ಬುಕ್‌ನಲ್ಲಿ ವೈರಲ್ ಆಗಿದೆ.

View post on Instagram