ಬೆಂಗಳೂರು (ಡಿ. 12):  ನಟಿ‌ ರಾಧಿಕಾ ಕುಮಾರಸ್ವಾಮಿ ದಮಯಂತಿ ಚಿತ್ರದ ಜೊತೆಗೆ ಇನ್ನೊಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ದಮಯಂತಿ ಆಯ್ತು, ಈಗ ಅಘೋರಿಯಾಗಿದ್ದಾರೆ. 

ದಮಯಂತಿಗೆ 1 ಕೋಟಿ ಸಂಭಾವನೆ ಪಡೆದ್ರಾ ರಾಧಿಕಾ ಕುಮಾರಸ್ವಾಮಿ?

ರಾಧಿಕಾ ’ಭೈರಾದೇವಿ’ ಎನ್ನುವ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು ಸಾಂಗ್ ಶೂಟಿಂಗ್ ವೊಂದರಲ್ಲಿ  ಮೊದಲ‌ ಬಾರಿಗೆ ಅಘೋರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಯುತ್ತಿದೆ.  ಸಾಂಗ್ ಶೂಟ್ ಗಾಗಿ ಅದ್ದೂರಿ ಗುಹೆ,  90 ಲಕ್ಷದ ಸೆಟ್ ಹಾಕಲಾಗಿದೆ.  200 ಕ್ಕೂ ಹೆಚ್ಚು ಡ್ಯಾನ್ಸ್ ರ್ ಗಳನ್ನು ಬಳಸಿಕೊಳ್ಳಲಾಗಿದೆ. 

ರಾಧಿಕಾ ಕುಮಾರಸ್ವಾಮಿ ಈ ಫೋಟೋಗಳನ್ನು ನೋಡಿದ್ರೆ ಎದೆಯಲ್ಲಿ ತಕಧಿಮಿತ ಶುರು!

ಶಮಿಕಾ ಎಂಟರ್ ಪ್ರೈಸಸ್ ನಲ್ಲಿ ಭೈರಾದೇವಿ‌ ಸಿನಿಮಾ  ಮೂರು ಭಾಷೆಯಲ್ಲಿ ನಿರ್ಮಾಣವಾಗುತ್ತಿದೆ.  ನಿರ್ದೇಶಕ ಶ್ರೀ ಜೈ ಆಕ್ಷನ್ ಕಟ್ ಹೇಳುತ್ತಿದ್ದಾರೆ.