ಇದೊಂದು ಹೈ ಬಜೆಟ್ ಸಿನಿಮಾ ಎನ್ನುವುದರ ಜತೆಗೆ ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆನ್ನುವುದು ಕೂಡ ಅದರ ಬಗೆಗಿನ ಕುತೂಹಲಕ್ಕೆ ಕಾರಣ. ಇಂತಹದೊಂದು ಪಾತ್ರ ಮತ್ತು ಚಿತ್ರದಲ್ಲಿ ಅಭಿನಯಿಸಲು ರಾಧಿಕಾ ಕುಮಾರಸ್ವಾಮಿ ಪಡೆದ ಸಂಭಾವನೆ ಬರೋಬ್ಬರಿ ₹ 1 ಕೋಟಿ ಎನ್ನುವ ಕುತೂಹಲದ ಸಂಗತಿ ಈಗ ಹೊರಬಿದ್ದಿದೆ. ಈಗಾಗಲೇ ಅವರಿಗೆ ಚಿತ್ರತಂಡದಿಂದ ₹ ೮೦ ಲಕ್ಷ ಸಂಭಾವನೆ ಸಂದಾಯವೂ ಆಗಿದೆಯಂತೆ. ಚಿತ್ರತಂಡವೇ ನೀಡುವ ಈ ಮಾಹಿತಿ ನಿಜವೇ ಆಗಿದ್ದರೆ ಸ್ಯಾಂಡಲ್‌ವುಡ್ ಮಟ್ಟಿಗೆ ಅದು ದಾಖಲೆ.

ನಿರ್ಮಾಣದ ಜತೆಗೆ ನವರಸನ್‌ರವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಚಿತ್ರವಿದು. ಇದಕ್ಕೆ ಈಗಾಗಲೇ ಶೇ. 80ರಷ್ಟು ಚಿತ್ರೀಕರಣವೂ ಮುಗಿದಿದೆ. ಚಿತ್ರೀಕರಣಕ್ಕಾಗಿ ಚಿತ್ರತಂಡ ಮೈಸೂರು, ಮಂಡ್ಯ ಸುತ್ತಮುತ್ತಲ ಹಲವು ತಾಣಗಳಿಗೆ ಹೋಗಿ ಬಂದಿದೆ. ಈಗ ಕೊನೆಯ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಸಿದ್ಧತೆ ನಡೆಸಿದ್ದು,ಹೊಸ ವರ್ಷದಲ್ಲಿ ಚಿತ್ರವನ್ನು ತೆರೆಗೆ ತರುವ ಚಿಂತನೆ ಚಿತ್ರತಂಡದ್ದು. ಉಳಿದಂತೆ, ಚಿತ್ರದ ಶೀರ್ಷಿಕೆಯೇ ಹೇಳುವ ಪ್ರಕಾರ ಇದೊಂದು ಮಹಿಳಾ ಪ್ರಧಾನ ಚಿತ್ರ. ತೆಲುಗಿನ ‘ಆರುಂಧತಿ’, ‘ಭಾಗಮತಿ’ ಚಿತ್ರಗಳ ಹಾಗೆಯೇ ಕನ್ನಡದಲ್ಲಿ ‘ಧಮಂಯತಿ’ಚಿತ್ರವನ್ನು ತೆರೆಗೆ ತರುವ ಇರಾದೆ ನಿರ್ಮಾಪಕರದ್ದು. ಈಗಾಗಲೇ ಚಿತ್ರದ ನಿರ್ದೇಶಕರು ನೀಡಿದಗೆ ಇವತ್ತಿನ ವಾಸ್ತವೂ ಕತೆಯೊಳಗೆ ಮಿಶ್ರಣವಾಗಿದೆಯಂತೆ ಮಾಹಿತಿ ಪ್ರಕಾರ ಇದು ಎಂಭತ್ತರ ದಶಕದ ಕತೆ. ಜತೆಗೆ ಇವತ್ತಿನ ವಾಸ್ತವೂ ಕತೆಯೊಳಗೆ ವಿಶ್ರಣವಾಗಿದೆಯಂತೆ.

ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳಲಿರುವ ಚಿತ್ರದ ನಾಯಕಿ ಪಾತ್ರಕ್ಕೆ ಆರಂಭದಲ್ಲಿ ‘ಬಾಹುಬಲಿ’ ಖ್ಯಾತಿಯ ಕನ್ನಡದ ಚೆಲುವೆ ಅನುಷ್ಕಾ ಶೆಟ್ಟಿ ಬರುತ್ತಿದ್ದಾರೆಂದು ಹೇಳಲಾಗಿತ್ತು. ಅನುಷ್ಕಾ ಶೆಟ್ಟಿ ಅವರನ್ನು ನಿರ್ದೇಶಕ ನವರಸನ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾಗಿಯೂ ಸುದ್ದಿಯಾಗಿತ್ತು. ಆ ಸಂದರ್ಭದಲ್ಲಿ ಚಿತ್ರದ ಪಾತ್ರದ ಬಗ್ಗೆಯೂ ಮಾತನಾಡಿ, ಪಾತ್ರಕ್ಕಾಗಿತಾವು ಸಣ್ಣಗಾಗಬೇಕಾಗುತ್ತದೆ ಅಂತಲೂ ಅನುಷ್ಟಾ ಶೆಟ್ಟಿ ಅವರಿಗೆ ಹೇಳಿದ್ದರಂತೆ ನವರಸನ್. ಆದರೆ, ಸೆಂಬರ್ ತಿಂಗಳೊಳಗಾಗಿಯೇ ಚಿತ್ರದ ಚಿತ್ರೀಕರಣ ಮುಗಿಸಿಕೊಡಬೇಕೆನ್ನುವ ನವರಸನ್ ಬೇಡಿಕೆಯನ್ನು ತಿರಸ್ಕರಿಸಿದ ಅನುಷ್ಕಾ ಶೆಟ್ಟಿ, ಎರಡು ವರ್ಷ ಕಾಲ್‌ಶೀಟ್ ಇಲ್ಲ ಅಂತ ಹೇಳಿ ಕಳುಹಿಸಿದ್ದರಂತೆ ಎನ್ನುವ ಇಂಟೆರೆಸ್ಟಿಂಗ್ ಸಂಗತಿಗಳು ಈಗ ಬೆಳಕಿಗೆ ಬಂದಿವೆ. ಅನುಷ್ಕಾ ನಂತರ ಚಿತ್ರ ತಂಡ ಭೇಟಿ ಮಾಡಿದ್ದು ರಾಧಿಕಾ ಕುಮಾರಸ್ವಾಮಿ ಅವರನ್ನು. ಪಾತ್ರಕ್ಕೆ ಅವರೇ ಸೂಕ್ತ ಅಂತ ಚಿತ್ರತಂಡ ರಾಧಿಕಾ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ, ಕೇಳಿದಾಗ ಮೊದಲು ಒಪ್ಪಿಕೊಂಡಿರಲಿಲ್ಲ. ಚಿತ್ರಕ್ಕೆ ತಾವೇ ಬೇಕು ಅಂತ ಡಿಮ್ಯಾಂಡ್ ಮಾಡಿದಾಗ ಅತೀ ಹೆಚ್ಚು ಸಂಭಾವನೆ ಪಡೆಯುವುದರೊಂದಿಗೆ ಈ ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ಅಭಿನಯಿಸುತ್ತಿದ್ದಾರೆಂಬುದು ಈಗ ಗೊತ್ತಾಗಿದೆ.