ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌, ಅಲ್ಲಿಂದ ಹಾಲಿವುಡ್‌ ಎಲ್ಲಾ ಕಡೆಯಲ್ಲೂ ನಟ ನಟಿಯರಿಗೆ ತಮ್ಮ ದೇಹದ ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಅನಿವಾರ್ಯ. ಇಲ್ಲದೇ ಇದ್ದರೆ ಅವಕಾಶಗಳು ನೀರಿನಂತೆ ಜಾರಿ ಹೋಗುತ್ತವೆ. ಇದಕ್ಕೆ ಬೆಸ್ಟ್‌ ಎಕ್ಸಾಂಪಲ್‌ ನಮ್ಮ ಕಣ್ಣ ಮುಂದೆಯೇ ಇರುವ ರಾಧಿಕಾ ಆಪ್ಟೆ.

ರಾಧಿಕಾ ಈಗ ತುಂಬಾ ತೆಳ್ಳಗೆ ಇದ್ದರೂ, ನಾವೀಗ ಹೇಳುತ್ತಿರುವುದು 2012ರ ಸಮಾಚಾರ. ಆಗ ಆಗಿದ್ದು ಏನೆಂದರೆ, ರಾಧಿಕಾಗೆ ಆಯುಷ್ಮಾನ್‌ ಖುರಾನ ಜೊತೆಗೆ ನಾಯಕಿಯಾಗಿ ನಟಿಸಲು ‘ವಿಕಿ ಡೋನರ್‌’ ಚಿತ್ರದ ಆಫರ್‌ ಬಂದಿರುತ್ತದೆ. ಇದನ್ನು ರಾಧಿಕಾ ಒಪ್ಪಿರುತ್ತಾರೆ ಕೂಡ.

ರಾಧಿಕಾ ಆಪ್ಟೆ ಹೊಟ್ಟೆಪಾಡಿನ ಕಥೆ!

ಚಿತ್ರ ಒಪ್ಪಿಕೊಂಡ ನಂತರ ಒಂದು ತಿಂಗಳು ವಿದೇಶಕ್ಕೆ ಹಾರಿದ್ದ ರಾಧಿಕಾ ಅಲ್ಲಿ ಮೋಜು-ಮಸ್ತಿಗೆ ಇಳಿದು ಸಿಕ್ಕಾಪಟ್ಟೆಬಿಯರ್‌ ಹೀರಿದ್ದಾರೆ. ಪರಿಣಾಮ ಒಂದೇ ತಿಂಗಳಿನಲ್ಲಿ ರಾಧಿಕಾ ತೂಕ ಹೆಚ್ಚಾಗಿದೆ. ಚಿತ್ರ ಒಪ್ಪಿಕೊಂಡ ಬಳಿಕ ರಾಧಿಕಾ ಇಷ್ಟೊಂದು ದಪ್ಪ ಆಗಿರುವುದನ್ನು ಕಂಡ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರು ರಾಧಿಕಾರನ್ನು ತಿರಸ್ಕರಿಸಿದ್ದಾರೆ. ಇದೇ ಪಾತ್ರ ಮುಂದೆ ಯಾಮಿ ಗೌತಮ್‌ ಪಾಲಾಗಿದ್ದು ಇತಿಹಾಸ.

ಪತಿಯಿಂದ ದೂರ ಇರೋ ರಾಧಿಕಾ: ಪುಕ್ಸಟೆ ಸಲಹೆ ಬೇಡ ಎಂದ ನಟಿ

ಹೀಗೆ ವಿದೇಶದಲ್ಲಿ ಕುಡಿದ ಬಿಯರ್‌ ಹೇಗೆ ಒಂದು ಚಿತ್ರದ ಅವಕಾಶವನ್ನೇ ಕಸಿದುಕೊಂಡಿತು. ಅಂದಿನಿಂದ ತಾನು ತೂಕದ ವಿಚಾರದಲ್ಲಿ ಸಾಕಷ್ಟುಎಚ್ಚರ ವಹಿಸಿರುವುದಾಗಿಯೂ ಹೇಳಿಕೊಂಡಿದ್ದಾರೆ.