ಡ್ರೋನ್​ ಪ್ರತಾಪ್​ ಮತ್ತು ಗಗನಾ ಭರ್ಜರಿ ಬ್ಯಾಚುಲರ್ಸ್​ ರಿಯಾಲಿಟಿ ಷೋನಲ್ಲಿ ಹವಾ ಸೃಷ್ಟಿಸುತ್ತಿದ್ದಾರೆ. ಇದೀಗ ಗುಳಿಕೆನ್ನೆ ಚೆಲುವೆ ರಚಿತಾ ರಾಮ್​ ಪ್ರತಾಪ್​ಗೆ ಕಣ್ಣುಹೊಡೆಯುವುದನ್ನು ಕಲಿಸಿಕೊಟ್ಟಿದ್ದಾರೆ. 

ಡ್ರೋನ್​ ಪ್ರತಾಪ್​ ಸದ್ಯ ಭರ್ಜರಿ ಬ್ಯಾಚುಲರ್ಸ್​ ರಿಯಾಲಿಟಿ ಷೋನ ಖುಷಿಯಲ್ಲಿದ್ದಾರೆ. ಈ ಷೋನ ಭಾಗವಾಗಿ ಗಗನಾ ಅವರ ಹುಟ್ಟೂರಿಗೆ ಡ್ರೋನ್ ಪ್ರತಾಪ್ ಕಳೆದ ವಾರ ತೆರಳಿದ್ದರು. ಈ ವೇಳೆ ಅಡುಗೆಯ ಮನೆಯಲ್ಲಿ ನಡೆದ ಒಂದು ಘಟನೆ ಬಗ್ಗೆ ಪ್ರಸ್ತಾಪಿಸುತ್ತಲೇ ‘ಅಡುಗೆ ಮನೆಯಲ್ಲಿ ಗಗನನ ತಬ್ಬಿಕೊಳ್ಳೋ ಆಸೆ ನನಗೆ ಮೂಡಿತು’ ಎಂದು ಹೇಳಿದ್ದರು. ಇದನ್ನು ಕೇಳಿ ರಚಿತಾ ರಾಮ್​ ಸಕತ್​ ಖುಷಿಪಟ್ಟಿದ್ದರು. ರವಿಚಂದ್ರನ್​ ಕೂಡ ಜೋರಾಗಿ ನಕ್ಕಿದ್ದರು. ಇಂತಿಪ್ಪ ಡ್ರೋನ್​ ಪ್ರತಾಪ್​, ತಮ್ಮ ಆಸೆಯನ್ನು ರೀಲ್ಸ್​ ಮೂಲಕ ತೀರಿಸಿಕೊಂಡಿದ್ದರು. ಗಗನಾ ಜೊತೆ ರೀಲ್ಸ್ ಮಾಡುತ್ತಲೇ ಅವರನ್ನು ತಬ್ಬಿಕೊಂಡಿದ್ದರು. ಡ್ರೋನ್​ ಪ್ರತಾಪ್​ ಮಾಡುತ್ತಿರುವ ಕಾರ್ಯಗಳನ್ನು ನೋಡಿ ಗಗನಾ ಇದಾಗಲೇ ಫುಲ್​ ಫಿದಾ ಆಗಿದ್ದಾರೆ. ಇವರನ್ನು ಮದ್ವೆಯಾಗೋಳು ತುಂಬಾ ಲಕ್ಕಿ ಎಂದೇ ಹೇಳುತ್ತಾ ಬಂದಿದ್ದಾರೆ. ಕೊನೆಗೆ ಪ್ರತಾಪ್​ ತಬ್ಬಿಕೊಳ್ಳುವ ಆಸೆ ವ್ಯಕ್ತಪಡಿಸುತ್ತಲೇ ಗಗನಾ ಜೊತೆ ಸ್ಟೆಪ್​ ಹಾಕಿದ್ದರು.

ಇದೀಗ ಗಾಳಿಯೋ ಗಾಳಿಯೋ ಹಾಡಿಗೆ ಡ್ರೋನ್​ ಪ್ರತಾಪ್​ ಮತ್ತು ಗಗನಾ ಸಕತ್​ ಸ್ಟೆಪ್​ ಹಾಕಿದ್ದಾರೆ. ಇದೇ ಮೊದಲ ಬಾರಿಗೆ ಪ್ರತಾಪ್​ ಕೂಡ ಗಾಳಿಯಲ್ಲಿ ಹಾರಾಡುತ್ತಾ ಡಾನ್ಸ್​ ಮಾಡಿದ್ದಾರೆ. ಇವರ ಈ ಡಾನ್ಸ್​ಗೆ ಗುಳಿಕೆನ್ನೆ ಚೆಲುವೆ ರಚಿತಾ ರಾಮ್​ ಸಕತ್​ ಇಂಪ್ರೆಸ್​ ಆಗಿದ್ದಾರೆ. ಕೊನೆಗೆ ಕಣ್ಣು ಹೊಡೆಯುವಂತೆ ಹೇಳಿದಾಗ ಡ್ರೋನ್​ ಪ್ರತಾಪ್​ ಕಣ್ಣು ಹೊಡೆದಿದ್ದಾರೆ. ಆಗ ರಚಿತಾ ಹಾಗಲ್ಲ ಕಣೋ, ಹೀಗೆ ಎಂದು ಕಣ್ಣು ಮಿಟುಕಿಸುವ ಮೂಲಕ ಕಣ್ಣು ಹೊಡೆಯುವ ಪಾಠ ಮಾಡಿದ್ದಾರೆ. ಇದನ್ನು ನೋಡಿ ಡ್ರೋನ್​ ಪ್ರತಾಪ್​ ನಿಂತಲ್ಲೇ ನಾಚಿ ನೀರಾಗಿದ್ದಾರೆ. ಇದರ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿದ್ದು, ಈ ಎಪಿಸೋಡ್​ ನೋಡಲು ಕಾತರದಿಂದ ಕಾಯುತ್ತಿರುವುದಾಗಿ ನೆಟ್ಟಿಗರು ಹೇಳುತ್ತಿದ್ದಾರೆ.

ಕೆಲ ವಾರಗಳ ಹಿಂದಷ್ಟೇ ಡ್ರೋನ್‌ ಪ್ರತಾಪ್‌ ಗಗನಾ ಅವರಿಗೆ ತಾಳಿ ಕಟ್ಟಿದ್ದರು. ಕ್ರೇಜಿ ಸ್ಟಾರ್‌ ರವಿಚಂದ್ರನ್‌ ಹಾಗೂ ನಟಿ ರಚಿತಾ ರಾಮ್‌ ಅವರ ಸಮ್ಮುಖದಲ್ಲಿ ತಾಳಿ ಕಟ್ಟಲಾಗಿತ್ತು. ಮದುಮಗನ ಗೆಟಪ್‌ನಲ್ಲೇ ಬಂದು ಮದುವೆ ಮಾಡಿಕೊಂಡಿದ್ದರು. ಅಷ್ಟಕ್ಕೂ ಇದು ರವಿಚಂದ್ರನ್​ ಅವರ ರಾಮಾಚಾರಿ ಸಿನಿಮಾದ ಮದುವೆ ಸೀನ್‌ ರಿಕ್ರೇಟ್​ ಮಾಡಲಾಗಿತ್ತು. ಡ್ರೋನ್​ ಪ್ರತಾಪ್‌ ಅವರ ರವಿಚಂದ್ರನ್‌ ಗೆಟಪ್‌ನಲ್ಲಿ ಮದುಮಗ ಆಗಿದ್ರೆ, ಮಾಲಾಶ್ರೀ ಗೆಟಪ್‌ನಲ್ಲಿ ಗಗನಾ ವಧುವಿನಂತೆ ಬಂದಿದ್ದರು. ಸಿನಿಮಾದಲ್ಲಿ ಥೇಟ್‌ ರವಿಚಂದ್ರನ್‌ ಅವರು ಪೆದ್ದನಂತೆ ಬಂದು ಮಾಲಾಶ್ರೀ ಕೊರಳಿಗೆ ತಾಳಿ ಕಟ್ಟಿದಂತೆಯೇ, ಪ್ರತಾಪ್‌ ಕೂಡ ಗಗನಾ ಕೊರಳಿಗೆ ತಾಳಿ ಕಟ್ಟಿ ಭೇಷ್​ ಭೇಷ್​ ಎನ್ನಿಸಿಕೊಂಡಿದ್ದರು.

ಬಳಿಕ, ಗಗನಾ ಅವರಿಗಾಗಿ ಡ್ರೋನ್​ ಪ್ರತಾಪ್​ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದರು. ಗಗನಾ ಅವರಿಗೆ ಸಿನಿಮಾದಲ್ಲಿ ಛಾನ್ಸ್​ ಸಿಕ್ಕು ಆಕೆಯ ಆಸೆ ನೆರವೇರಲಿ ಎನ್ನುವ ಸಲುವಾಗಿ, ಹರಕೆ ಹೊತ್ತುಕೊಂಡು ಅದನ್ನು ತೀರಿಸಿದ್ದರು ಡ್ರೋನ್​ ಪ್ರತಾಪ್​. ತಣ್ಣೀರು ಸುರಿದುಕೊಂಡು, ಉರುಳುಸೇವೆ ಮಾಡಿ, ನೆಲದಲ್ಲಿ ಊಟ ಮಾಡುವ ಮೂಲಕ ಹರಕೆ ತೀರಿಸಿದ್ದರು. ವೇದಿಕೆ ಮೇಲೆ ಇದನ್ನು ನೋಡಿ ಗಗನಾ ಗಳಗಳನೇ ಅತ್ತುಬಿಟ್ಟರು. ಗಗನಾ ಅವರಿಗೆ ಯಾರೋ, ಆದರೂ ಬೆಸ್ಟ್​ ಫ್ರೆಂಡ್​ ಆಗಿ ಹೀಗೆ ಮಾಡಿದ್ದಾರೆ ಎಂದರೆ ಅದು ಅವರಲ್ಲಿ ಇರುವ ಒಳ್ಳೆಯತನವನ್ನು ತೋರಿಸುತ್ತದೆ ಎಂದಿದ್ದರು.