ದುನಿಯಾ ವಿಜಿ ಜೊತೆ ಮತ್ತೆ ಬಂದ ಪದ್ಮಾವತಿ

First Published 5, Mar 2018, 12:52 PM IST
Rachita Ram Act with Dunia Viji
Highlights

ಊರಿಗೊಬ್ಳೆ ಪದ್ನಾವತಿ ಎನ್ನುವ ಹಾಡು ತುಂಬಾ ಹಿಟ್ ಆಗಿದ್ದು ಆ ಹಾಡಿನಲ್ಲಿ  ನಟಿ ರಮ್ಯಾ ಹೆಜ್ಜೆ ಹಾಕಿದ್ದೂ ಒಂದು ಕಾರಣ.  ದುನಿಯಾ ವಿಜಯ್ ನಾಯಕನಾಗಿ ನಟಿಸಿದ್ದ  ‘ಜಾನಿ’ ಚಿತ್ರದ ಈ ಪದ್ಮಾವತಿ ಮತ್ತೆ ಬಂದಿದ್ದಾಳೆ.

ಬೆಂಗಳೂರು (ಮಾ. 05):  ಊರಿಗೊಬ್ಳೆ ಪದ್ನಾವತಿ ಎನ್ನುವ ಹಾಡು ತುಂಬಾ ಹಿಟ್ ಆಗಿದ್ದು ಆ ಹಾಡಿನಲ್ಲಿ  ನಟಿ ರಮ್ಯಾ ಹೆಜ್ಜೆ ಹಾಕಿದ್ದೂ ಒಂದು ಕಾರಣ.  ದುನಿಯಾ ವಿಜಯ್ ನಾಯಕನಾಗಿ ನಟಿಸಿದ್ದ  ‘ಜಾನಿ’ ಚಿತ್ರದ ಈ ಪದ್ಮಾವತಿ ಮತ್ತೆ ಬಂದಿದ್ದಾಳೆ.

ಇವರು ಹೊಸ ಪದ್ಮಾವತಿ. ‘ಜಾನಿ ಜಾನಿ ಎಸ್ ಪಾಪ’ ಚಿತ್ರದಲ್ಲಿ ‘ಹೊಸ ಪದ್ಮಾವತಿ’ ಎಂದು  ಸಾಗುವ ಈ ಹಾಡಿನಲ್ಲಿ ಚಿತ್ರದ ನಾಯಕ ವಿಜಯ್ ಹಾಗೂ ನಾಯಕಿ ರಚಿತಾ ರಾಮ್ ಸಖತ್ ಹಾಟ್ ಹಾಕಿ ಸ್ಟೆಪ್ಸ್ ಹಾಕಿದ್ದಾರೆ. ಪ್ರೀತಮ್ ಗುಬ್ಬಿ
ನಿರ್ದೇಶನದ ಈ ಚಿತ್ರದ ಹೊಸ ಪದ್ಮಾವತಿಯ  ಹಾಡಿನ ಟೀಸರ್ ಈಗಷ್ಟೆ ಬಿಡುಗಡೆಯಾಗಿದೆ.  ‘ನಾವು ಜಾನಿ ಚಿತ್ರದಲ್ಲಿ ಊರಿಗೊಬ್ಳೆ ಪದ್ಮಾವತಿ  ಹಾಡನ್ನು ಮಾಡಿದಾಗ ತುಂಬಾ ಜನ ನೋಡಿ ಮೆಚ್ಚಿಕೊಂಡರು. ಅದರಷ್ಟೆ ಹಾಟ್ ಆಂಡ್
ಸ್ಪೈಸಿಯಾಗಿ ಈ ಹಾಡನ್ನು ಮಾಡಿದ್ದೇವೆ. ಚೆನ್ನಾಗಿದೆ. ಈ ಕಾರಣಕ್ಕೆ ಹಾಡಿನ ಟೀಸರ್ ಬಿಡುಗಡೆ ಮಾಡಿದ್ದೇವೆ’ ಎಂಬುದು ನಿರ್ದೇಶಕ  ಪ್ರೀತಮ್ ಗುಬ್ಬಿ ಮಾತು.

ಸದ್ಯ ಯೂಟ್ಯೂಬ್‌ನಲ್ಲಿ ಈ ಹಾಡಿಗೆ ಒಳ್ಳೆಯ  ಪ್ರತಿಕ್ರಿಯೆಗಳು ಬರುತ್ತಿವೆಯಂತೆ. ಎಲ್ಲದೆ ಹಾಡಿಗೆ  ತಕ್ಕಂತೆ ಹೊಸ ಹೊಸ ಸೆಟ್‌ಗಳನ್ನು ಹಾಕಿದ್ದಾರೆ. ಈ ಸೆಟ್‌'ಗಳಲ್ಲಿ ಹಾಡಿನ ಚಿತ್ರೀಕರಣ  ಮಾಡಿರುವುದರಿಂದ ಕಲರ್‌ಫುಲ್ಲಾಗಿ ಹಾಡು ಮೂಡಿಬಂದಿದೆಯಂತೆ.  

loader