ಮಂತ್ರಾಲಯದ ಜೊತೆ ಪುನೀತ್ ರಾಜ್​ಕುಮಾರ್ ಅಷ್ಟೇ ಅಲ್ಲ. ಇಡೀ ದೊಡ್ಮನೆಗೆ ಒಂದು ಬಹುದೊಡ್ಡ ಬಾಂಧವ್ಯವಿದೆ.

ಬೆಂಗಳೂರು(ಅ.13): ದೊಡ್ಮನೆಯ ಪ್ರತಿಯೊಬ್ಬರಿಗೂ ಮಂತ್ರಾಲಯ ಎಂದರೆ, ತಲೆಬಾಗಿ ನಮಿಸ್ತಾರೆ. ಈ ಬಾರಿ ಆ ಸಂಭ್ರಮಕ್ಕೆ ನೆಪವಾಗಿದ್ದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ದೊಡ್ಮನೆ ಹುಡ್ಗ ಚಿತ್ರದ ಯಶಸ್ಸಿನ ವಿಜಯಾ ಯಾತ್ರೆ ಮಾಡ್ತಾ ಇರೋ ಪುನೀತ್ ರಾಜ್​ಕುಮಾರ್ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದಿದ್ದಾರೆ.

ಅಭಿಮಾನಿ ದೇವರುಗಳು ಹಾಗೂ ಚಿತ್ರತಂಡದವರ ಜೊತೆ ಪುನೀತ್ ರಾಜ್​ಕುಮಾರ್, ಗುರು ರಾಯರ ಸನ್ನಿಧಿಯಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಚಿಕ್ಕ ವಯಸ್ಸಿನಲ್ಲಿ ಬೃಂದಾವನಕ್ಕೆ ತಂದೆಯೊಂದಿಗೆ ಬರುತ್ತಿದ್ದ ದಿನಗಳನ್ನು ನೆನಪಿಸಿಕೊಂಡರು.

ಮಂತ್ರಾಲಯದ ಜೊತೆ ಪುನೀತ್ ರಾಜ್​ಕುಮಾರ್ ಅಷ್ಟೇ ಅಲ್ಲ. ಇಡೀ ದೊಡ್ಮನೆಗೆ ಒಂದು ಬಹುದೊಡ್ಡ ಬಾಂಧವ್ಯವಿದೆ. ಅದಕ್ಕೆ ಕಾರಣ ಕತೃ ಅಣ್ಣಾವ್ರು. ಯಾವಾಗ ರಾಜ್ ಕುಮಾರ್ ಗುರುರಾಯರ ಪಾತ್ರದಲ್ಲಿ ಮಂತ್ರಾಲಯ ಮಹಾತ್ಮೆ ಸಿನಿಮಾ ಮಾಡಿದರೋ ಅವಾಗ್ಲೇ ದೊಡ್ಮನೆ ಮೇಲೆ ರಾಯರ ಶ್ರೀರಕ್ಷೆ ಇದೆ. ಅಣ್ಣಾವ್ರು ಕೂಡ ತಮ್ಮ ಮಕ್ಕಳಾದ ಶಿವರಾಜ್​ ಕುಮಾರ್, ರಾಘವೇಂದ್ರ ರಾಜ್​ಕುಮಾರ್ , ಪುನೀತ್ ರಾಜ್​ಕುಮಾರ್ ವರ್ಷಕ್ಕೆ ಒಮ್ಮೆ ರಾಯರ ದರ್ಶನ ಪಡೆಯಬೇಕು ಅಂತಾ ಮಕ್ಕಳಿಗೆ ಡಾ.ರಾಜ್ ಹೇಳಿದ್ದರಂತೆ. ಅದರಂತೆ ಈ ಮೂರು ಜನ ಮಕ್ಕಳು ತಂದೆ ಮಾತನ್ನ ನಿಜ ಮಾಡುವ ಮೂಲಕ ಅದೇ ಮಾರ್ಗದಲ್ಲಿ ನಡೆಯುತ್ತಿದ್ದಾರೆ.