ಬೆಟ್ಟದ ಹೂವು ಚತ್ರ ನೆನೆದು ಬಾಲ್ಯಕ್ಕೆ ಜಾರಿದ ಪುನೀತ್ | ಶೂಟಿಂಗ್ ಸ್ಥಳಕ್ಕೆ ಹೋಗಿ ನೆನಪು ಮೆಲುಕು ಹಾಕಿದ ಪುನೀತ್ | 

ಬೆಂಗಳೂರು (ಡಿ. 17): ಬೆಟ್ಟದ ಹೂವು ಚಿತ್ರವನ್ನು ಯಾರು ತಾನೆ ಮರೆಯಲು ಸಾಧ್ಯ ಹೇಳಿ? ಈ ಸಿನಿಮಾದ ಬಿಸಿಲೇ ಇರಲಿ... ಮಳೆಯೇ ಬರಲಿ ಕಾಡಲ್ಲಿ ಮೇಡಲ್ಲಿ ಅಲೆವೇ.... ಹಾಡಲ್ಲಿ ಬಾಲನಟನಾಗಿ ಪುನೀತ್ ಅಭಿನಯಿಸಿದ್ದಂತೂ ಅದ್ಭುತ. 34 ವರ್ಷಗಳ ನಂತರ ಈ ಚಿತ್ರದ ಶೂಟಿಂಗ್ ನಡೆದ ಜಾಗಕ್ಕೆ ಪುನೀತ್ ಹೋಗಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈಗ ಅದೇ ಚಿತ್ರದ ಪೋಸ್ಟರ್ ಹಾಕಿ ಮರೆಯಲಾಗದ ನೆನಪುಗಳು ಎಂದು ಪೋಸ್ಟರ್ ಹಾಕಿದ್ದಾರೆ. 

ಪುನೀತ್ ರಾಜ್ ಕುಮಾರ್ ಬೆಟ್ಟದ ಹೂವು ಚಿತ್ರದಲ್ಲಿ ಬಾಲನಟನಾಗಿ ಅಭಿನಯಿಸಿದ್ದರು. ಈ ಚಿತ್ರದ ಬಿಸಿಲೇ ಇರಲಿ.... ಮಳೆಯೇ ಇರಲಿ... ಹಾಡು ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಈ ಚಿತ್ರದ ಅದ್ಭುತ ಅಭಿನಯಕ್ಕೆ ಪುನೀತ್ ಗೆ ರಾಷ್ಟ್ರ ಪ್ರಶಸ್ತಿ ಕೂಡಾ ಬಂದಿದೆ. 

ಬೆಟ್ಟದ ಹೂವು ಚಿತ್ರ 1985 ರಲ್ಲಿ ತೆರೆ ಕಂಡ ಚಿತ್ರ. ಚಿತ್ರ ಬಿಡುಗಡೆಯಾಗಿ 33 ವರ್ಷಗಳೇ ಕಳೆದಿವೆ. ಈಗ ಪುನೀತ್ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ನಟ ಸಾರ್ವಭೌಮ ಚಿತ್ರದ ಚಿತ್ರೀಕರಣಕ್ಕಾಗಿ ಚಿಕ್ಕಮಗಳೂರಿಗೆ ಹೋಗಿದ್ದಾಗ ಬೆಟ್ಟದ ಹೂವು ಚಿತ್ರೀಕರಣದ ಸ್ಥಳ ನೆನಪಾಗಿ ಅತ್ತಿಗುಂಡಿ ಕಡೆ ಹೋಗಿದ್ದಾರೆ. ಅಲ್ಲಿಂದ ವಿಡಿಯೋ ಮಾಡಿ ಶೂಟಿಂಗ್ ಸ್ಥಳದ ಬಗ್ಗೆ ವಿವರಿಸಿದ್ದರು.