ಇವರಿಬ್ಬರ ಸಾರಥ್ಯದಲ್ಲಿ 'ದಂಧೆ' ಎಂಬ ಚಿತ್ರ ತಯಾರಾಗುತ್ತಿತ್ತು.
ಬೆಂಗಳೂರು(ಸೆ.29):ಸಿನಿಮಾ ನಿರ್ಮಾಪಕನೊಬ್ಬ ನಿರ್ದೇಶಕನ ಮೇಲೆ ಹಲ್ಲೆ ನಡೆಸಿದ ಘಟನೆ ನಗರದ ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶಂಕರ್ ನಾಗ್ ಹಲ್ಲೆಗೊಳಗಾದ ನಿರ್ದೇಶಕ. ಶಂಕರ್ ನಾಗ್ ಮೇಲೆ ನಿರ್ಮಾಪಕ ಆರಾಧ್ಯ ಹಲ್ಲೆ ನಡೆಸಿದ್ದಾನೆ. ಇವರಿಬ್ಬರ ಸಾರಥ್ಯದಲ್ಲಿ 'ದಂಧೆ' ಎಂಬ ಚಿತ್ರ ತಯಾರಾಗುತ್ತಿತ್ತು. ಹಣಕಾಸಿನ ತೊಂದರೆಯಿಂದ ಚಿತ್ರ ಅರ್ಧದಲ್ಲೇ ನಿಂತು ಹೋಗಿತ್ತು. ಬಂಡವಾಳ ನಷ್ಟವಾದ ಕಾರಣ ಹಣ ವಾಪಸ್ ನೀಡುವಂತೆ ನಿರ್ಮಾಪಕ ಆರಾಧ್ಯ ನಿರ್ದೇಶಕ ಶಂಕರ್ ನಾಗ್'ನನ್ನು ಮೇಲೆ ಹಲ್ಲೆ ನಡೆಸಿದ್ದಾನೆ.
ಹಲ್ಲೆಗೊಳಗಾದ ನಿರ್ದೇಶಕನನ್ನು ಕೆಸಿ ಜೆನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿರ್ಮಾಪಕ ಪ್ರಸಾದ್ ಆರಾಧ್ಯ ವಿರುದ್ಧ ದೂರು ನೀಡಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
