ಪುನೀತ್ ಹೊಸ ಸಿನಿಮಾಗೆ ಇವರೇ ನಾಯಕಿ

entertainment | Thursday, March 1st, 2018
Suvarna Web Desk
Highlights

ಆಕೆಯ ಹೆಸರು ಪ್ರಿಯಾಂಕ ಜವಾಲ್‌ಕರ್. ಪುನೀತ್ ರಾಜ್‌ಕುಮಾರ್ ಅಭಿನಯದ ಹೊಸ ಚಿತ್ರದ ಇಬ್ಬರು ನಾಯಕಿಯರಲ್ಲಿ ಒಬ್ಬರು. ಪವನ್ ಒಡೆಯರ್ ನಿರ್ದೇಶನದ ಈ ಚಿತ್ರವನ್ನು ನಿರ್ಮಿಸುತ್ತಿರುವುದು ರಾಕ್‌ಲೈನ್ ವೆಂಕಟೇಶ್.

ಬೆಂಗಳೂರು (ಮಾ. 01): ಆಕೆಯ ಹೆಸರು ಪ್ರಿಯಾಂಕ ಜವಾಲ್‌ಕರ್. ಪುನೀತ್ ರಾಜ್‌ಕುಮಾರ್ ಅಭಿನಯದ ಹೊಸ ಚಿತ್ರದ ಇಬ್ಬರು ನಾಯಕಿಯರಲ್ಲಿ ಒಬ್ಬರು. ಪವನ್ ಒಡೆಯರ್ ನಿರ್ದೇಶನದ ಈ ಚಿತ್ರವನ್ನು ನಿರ್ಮಿಸುತ್ತಿರುವುದು ರಾಕ್‌ಲೈನ್ ವೆಂಕಟೇಶ್.

ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕರಲ್ಲಿ  ಒಬ್ಬರಾದ ರಾಕ್‌ಲೈನ್ ವೆಂಕಟೇಶ್ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಲು ನಿರ್ಧರಿಸಿದ್ದಾರೆ. ಹಾಗಾಗಿ ಚಿತ್ರಕ್ಕೆ ಇಬ್ಬರು ಪರಭಾಷಾ ನಾಯಕಿಯರನ್ನು ಕರೆ ತರಲಾಗುತ್ತಿದೆ. ಆ ಇಬ್ಬರಲ್ಲಿ ಒಬ್ಬರು ಪ್ರಿಯಾಂಕ ಜವಾಲ್‌ಕರ್. ಇನ್ನೊಬ್ಬ ನಾಯಕಿ ಬಾಲಿವುಡ್‌ನಿಂದ ಬರುತ್ತಿದ್ದಾರೆ.

ಇದೊಂದು ಹಾರರ್ ಮತ್ತು ಸೈಕಲಾಜಿಕಲ್ ಥ್ರಿಲ್ಲರ್ ಕತೆ ಎನ್ನಲಾಗಿದೆ. ಅದರಲ್ಲೂ ಪ್ರಿಯಾಂಕ ಅವರದು ದೈವಭಕ್ತ ಹುಡುಗಿಯ ಪಾತ್ರ. ಇವರಲ್ಲದೇ ರವಿಶಂಕರ್, ಪ್ರಕಾಶ್ ರೈ, ಚಿಕ್ಕಣ್ಣ, ಸಾಧು  ಕೋಕಿಲ ತಾರಾಗಣದಲ್ಲಿದ್ದಾರೆ. ಇದೇ ಮಾರ್ಚ್ 8 ರಿಂದ ಏಪ್ರಿಲ್  8 ರವರೆಗೆ ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ. ಎರಡನೇ ಹಂತದ ಚಿತ್ರೀಕರಣಕ್ಕಾಗಿ ತಂಡ ಕೋಲ್ಕತಾಗೆ ತೆರಳಲಿದೆ

Comments 0
Add Comment

    ಹೇಗಿದೆ ಇಂದು ತೆರೆಕಂಡ "ಅಬ್ಬೆ ತುಮಕೂರ ಸಿದ್ಧಿಪುರುಷ ವಿಶ್ವಾರಾಧ್ಯರು"?

    video | Friday, April 13th, 2018