ಶೀಘ್ರದಲ್ಲೇ ಪ್ರಿಯಾಂಕ- ನಿಕ್ ಜೋನ್ಸ್ ವಿವಾಹ | ವಿವಾಹಕ್ಕೂ ಮುನ್ನವೇ ಹೊರಬಿತ್ತು ಶಾಕಿಂಗ್ ನ್ಯೂಸ್ ! ಇದು ಪ್ರಿಯಾಂಕ ಮದುವೆ ಮೇಲೆ ಪರಿಣಾಮ ಬೀರುತ್ತಾ?
ಮುಂಬೈ (ಸೆ. 03): ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಶೀಘ್ರವೇ ಅಮೆರಿಕ ಮೂಲದ ತಮ್ಮ ಗೆಳೆಯ ನಿಕ್ ಜೋನಾಸ್ ಅವರನ್ನು ವಿವಾಹವಾಗಲಿದ್ದಾರೆ ಎಂಬ ಸುದ್ದಿಗಳ ಬೆನ್ನಲ್ಲೇ, ಪ್ರಿಯಾಂಕಾರ ಭಾವಿ ಮಾವ ದಿವಾಳಿಯಾಗಿರುವ ಸುದ್ದಿ ಹೊರಬಿದ್ದಿದೆ.
ನಿಕ್‌ರ ತಂದೆ ಪೌಲ್ ಜೋನ್ಸ್ ಅಮೆರಿಕದಲ್ಲಿ ರಿಯಲ್ ಎಸ್ಟೇಟ್ ಕಂಪನಿಯೊಂದನ್ನು ನಡೆಸುತ್ತಿದ್ದು, ಅದೀಗ ಭಾರೀ ಸಾಲದ ಸುಳಿಗೆ ಸಿಲುಕಿದೆ. ಕಂಪನಿ ಅಂದಾಜು 71 ಕೋಟಿ ರು. ನಷ್ಟದಲ್ಲಿರುವ ಕಾರಣ, ದಿವಾಳಿ ಕೋರಿ ನ್ಯಾಯಾಲಯದ ಮೊರೆ ಹೋಗಿದೆ. ಇಷ್ಟೆಲ್ಲಾ ಆದರೂ, ಪ್ರಿಯಾಂಕರನ್ನು ವರಿಸುತ್ತಿರುವ ನಿಕ್ ಅಂದಾಜು 177 ಕೋಟಿ ರು. ಮೌಲ್ಯದ ಆಸ್ತಿ ಹೊಂದಿರುವ ಕಾರಣ, ಇಬ್ಬರ ಸಂಬಂಧಕ್ಕೆ ಧಕ್ಕೆ ಬರುವ ಯಾವುದೇ ಸಾಧ್ಯತೆ ಇಲ್ಲ ಎನ್ನಲಾಗಿದೆ.
