ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಮದರ್ ತೆರೆಸಾ ಮೆಮೊರಿಯಲ್ ಅವಾರ್ಡ್ ನೀಡಿ ಗೌರವಿಸಲಾಗಿದೆ.  

ಮುಂಬೈ(ಡಿ.12): ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಮದರ್ ತೆರೆಸಾ ಮೆಮೊರಿಯಲ್ ಅವಾರ್ಡ್ ನೀಡಿ ಗೌರವಿಸಲಾಗಿದೆ.

ಇತ್ತೀಚೆಗಷ್ಟೇ ಸಿರಿಯಾಗೆ ಭೇಟಿ ನೀಡಿದ್ದ ಪ್ರಿಯಾಂಕ ಅಲ್ಲಿನ ನಿರಾಶ್ರಿತ ಶಿಬಿರದಲ್ಲಿರುವ ಮಕ್ಕಳನ್ನು ಭೇಟಿಯಾಗಿ ಅವರೊಂದಿಗೆ ಸಂವಾದ ನಡೆಸಿದ್ದರು. ಅಲ್ಲದೇ ಯುನಿಸೆಫ್ ಗುಡ್’ವಿಲ್ ಅಂಬಾಸಿಡರ್ ಕೂಡ ಆಗಿದ್ದು, ಅನೇಕ ರೀತಿಯಾದ ಸಹಕಾರಿ ಚಟುವಟಿಕೆಗಳಿಗೆ ಅವರು ನೆರವು ನೀಡುತ್ತಿದ್ದಾರೆ.

ಈ ಬಗ್ಗೆ ಮಾತನಾಡಿರುವ ಪ್ರಿಯಾಂಕ ತಾಯಿ ಮಧು ಚೋಪ್ರಾ ಅತ್ಯಂತ ಕರುಣಾಮಯಿಯಾದ ಮಗಳನ್ನು ಪಡೆದಿರುವುದು ತಮ್ಮ ಪುಣ್ಯ, ಹೆಚ್ಚು ಹೆಚ್ಚು ಕೊಟ್ಟರೆ ನಾವು ಹೆಚ್ಚು ಪಡೆಯುತ್ತೇವೆ ಎನ್ನುವುದು ಆಕೆಯ ಸಿದ್ಧಾಂತವಾಗಿದೆ ಎಂದು ಹೇಳಿದ್ದಾರೆ.