ಸಾಮಾನ್ಯವಾಗಿ ಹೆಣ್ಣು ಮಕ್ಕಳು ಮತ್ತು ತಂದೆಯ ನಡುವೆ ಒಂದು ಭಾವನಾತ್ಮಕ ಕೊಂಡಿ ಗಟ್ಟಿಯಾಗಿ ಯಾವಾಗಲೂ ಇದ್ದೇ ಇರುತ್ತದೆ. ಅದರಲ್ಲೂ ಹೆಣ್ಣು ಮದುವೆಯಾಗಿ ಗಂಡನ ಮನೆಗೆ ಹೋಗುವ ವೇಳೆಯಲ್ಲಿ ಹೆಣ್ಣು ಯಾರನ್ನಾದರೂ ಹೆಚ್ಚಾಗಿ ಮಿಸ್‌ ಮಾಡಿಕೊಳ್ಳುತ್ತಿದ್ದರೆ ಅದು ತಂದೆಯೇ ಆಗಿರುತ್ತಾನೆ. ಹಾಗಾಗಿ ತಂದೆ ಕೊಡಿಸಿದ ವಸ್ತುಗಳ ಮೇಲೆ ಹೆಣ್ಣು ಮಕ್ಕಳಿಗೆ ಅಪಾರ ಪ್ರೀತಿ ಹಾಗೂ ಗೌರವ.

ಪ್ರಿಯಾಂಕ- ನಿಕ್ ಬೆಡ್‌ರೂಮ್ ಸೀಕ್ರೆಟ್ ರಿವೀಲ್!

ಗೌರಿ ಹಬ್ಬದ ಮುಂದೆ ನಿಂತು ಇದನ್ನೆಲ್ಲಾ ಹೇಳಿದ್ದು ಯಾಕೆ ಎಂದರೆ ಕಾರಣ ಪ್ರಿಯಾಂಕಾ ಚೋಪ್ರಾ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ತನ್ನ ಮತ್ತು ತಂದೆಯ ನಡುವಿನ ಭಾವನಾತ್ಮಕ ಸಂಬಂಧ, ತಂದೆ ಕೊಟ್ಟಉಡುಗೊರೆಯ ಬಗ್ಗೆ ಪ್ರಿಯಾಂಕಾ ಮನಸಾರೆ ಮಾತನಾಡಿದ್ದಾರೆ. ಅವುಗಳ ಆಯ್ದ ಪುಟ್ಟಭಾಗ ಇದು.

‘ಭಾರತೀಯ ಸಂಪ್ರದಾಯದಂತೆ ಮದುವೆಯಲ್ಲಿ ವರನು ವಧುವಿನ ಕೊರಳಿಗೆ ಮಂಗಳಸೂತ್ರ ಕಟ್ಟುತ್ತಾನೆ. ಕೈಗೆ ಉಂಗುರ ತೊಡಿಸುತ್ತಾನೆ. ಇವೆರಡೂ ಹೆಣ್ಣಿನ ಪಾಲಿಗೆ ಅಮೂಲ್ಯ. ನನ್ನ ಪಾಲಿಗೆ ಇವೆರಡನ್ನೂ ನನ್ನ ತಂದೆಯೇ ಉಡುಗೊರೆಯಾಗಿ ಕೊಟ್ಟಿದ್ದಾರೆ. ಹಾಗಾಗಿ ಮಂಗಳಸೂತ್ರ ಮತ್ತು ಡೈಮಂಡ್‌ ರಿಂಗ್‌ ಮೇಲೆ ನನಗೆ ಎಲ್ಲಿಲ್ಲದ ಪ್ರೀತಿ.

No way,48 ಕೋಟಿ ಬೇಡ; ಸಂಸಾರ ಮಾಡೋಕೆ 140 ಕೋಟಿನೇ ಬೇಕು!

ಅದನ್ನು ನೋಡಿದರೆ ನನಗೆ ನನ್ನ ತಂದೆ ಜೊತೆ ಇದ್ದಾರೆ ಎನ್ನುವ ಫೀಲ್‌ ಬರುತ್ತದೆ. ಅಲ್ಲದೆ ನಾನು ಎಲ್ಲಿಯೇ ಹೋದರು ನನ್ನ ಬಳಿ ಒಂದು ಚಿನ್ನದ ನಾಣ್ಯವಿರುತ್ತೆ. ಅದೂ ಸಹ ನನ್ನ ತಂದೆ ಕೊಟ್ಟಿದ್ದು. ನನ್ನ ಪಾಲಿಗದು ಲಕ್ಕಿ’ ಹೀಗೆ ಹೇಳುವ ಮೂಲಕ ಅಪ್ಪಾ ಐ ಲವ್‌ ಯೂ ಎಂದು ಭಾವುಕರಾಗಿದ್ದರು ಪ್ರಿಯಾಂಕಾ.