ಅಮೆರಿಕಾದ ಖ್ಯಾತ ನಟ ಹಾಗೂ ಗಾಯಕ ನಿಕ್‌ ಜೋನಾಸ್ ಹಾಗೂ ಪ್ರಿಯಾಂಕಾ ಚೋಪ್ರಾ ಡಿಸೆಂಬರ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಂತೆ ಲಾಸ್‌ ಏಂಜಲಿಸ್‌ನಲ್ಲಿ ದುಬಾರಿ ಮನೆಯನ್ನು ಖರೀದಿಸಿದ್ದರು.

ಪ್ರಿಯಾಂಕ ಬರ್ತಡೇ ಕೇಕ್ ಬೆಲೆ ಏನ್ ದುಬಾರಿ ರೀ!

ಐಷಾರಾಮಿ ಬಂಗಲೆಯಲ್ಲಿ ಸ್ವಿಮ್ಮಿಂಗ್ ಪೂಲ್ , 5 ಬೆಡ್‌ ರೂಂ ಹಾಗೂ ವೆಲ್‌ ಬಿಲ್ಟ್‌ ಇಂಟೀರಿಯರ್ ಇದ್ದು ಕೆಲದಿನಗಳ ಹಿಂದೆ 6.8 ಮಿಲಿಯನ್ ಡಾಲರ್ ಅಂದರೆ 48 ಕೋಟಿಗೆ ಮಾರಾಟ ಮಾಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ನೋಡ್ರಪ್ಪಾ! ಒಂದು ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ಸಿಗುತ್ತೆ ಕೋಟಿ ಹಣ!

ಅದಕ್ಕಿಂತ ದೊಡ್ಡ ಮನೆಯನ್ನು ಪ್ರಿಯಾಂಕಾ ಲಾಸ್ ಏಂಜಲಿಸ್‌ನಲ್ಲಿ 20 ಮಿಲಿಯನ್ ಅಂದರೆ 140 ಕೋಟಿಗೆ ಖರೀದಿ ಮಾಡಿದ್ದಾರೆ ಎಂದು ಖಾಸಗಿ ವಾಹಿನಿವೊಂದರಲ್ಲಿ ಬಿತ್ತರಿಸಲಾಗಿದೆ. ದೇಶದ ಬೇರೆ ಬೇರೆ ಭಾಗಗಳಲ್ಲಿ ವರುಣನ ಅಬ್ಬರ ಹೆಚ್ಚಾಗಿದ್ದು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರವಾಹದ ಭೀತಿ ಎದುರಿಸುತ್ತಿದ್ದಾರೆ. ಮನೆ, ಜಮೀನು, ಊರುಗಳಿಗೆ ನೀರು ನುಗ್ಗಿ ಜನರು ಊರನ್ನೇ ಬಿಡುವ ಸ್ಥಿತಿ ನಿರ್ಮಾಣವಾಗಿದೆ. ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ಪ್ರಿಯಾಂಕ ಚೋಪ್ರಾ ಅಸ್ಸಾಂ ಪ್ರವಾಸೋದ್ಯಮ ರಾಯಭಾರಿ. ಹಾಗಾಗಿ ಸಾಮಾಜಿಕ ಜವಾಬ್ದಾರಿ ಹೆಚ್ಚಾಗಿರುತ್ತದೆ. ಇಂತಹ ಸ್ಥಿತಿಯಲ್ಲಿ ಜನರ ನೆರವಿಗೆ ಧಾವಿಸಿ ಮಾನವೀಯತೆ ಮೆರೆಯುವ ಬದಲು ಐಶಾರಾಮಿ ಬಂಗಲೆ ತೆಗೆದುಕೊಂಡು ಅನಗತ್ಯ ಖರ್ಚು ಮಾಡುವುದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಿಗ್ಗಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.