ಪ್ರಿಯಾಂಕ ಚೋಪ್ರಾ- ನಿಕ್ ಜೋನಸ್ ಲವ್ ಸ್ಟೋರಿ ಎಷ್ಟು ಹೇಳಿದರೂ ಮುಗಿಯುವಂತದ್ದೇ ಅಲ್ಲ ಎನಿಸುತ್ತದೆ. ದಿನಾ ಏನಾದರೊಂದು ಹೊಸ ವಿಚಾರವನ್ನು ಬಹಿರಂಗಪಡಿಸುತ್ತಿರುತ್ತಾರೆ. ಇದೀಗ ತಮ್ಮ ಬೆಡ್ ರೂಮ್ ಸೀಕ್ರೆಟೊಂದನ್ನು ರಿವೀಲ್ ಮಾಡಿದ್ದಾರೆ. 

No way,48 ಕೋಟಿ ಬೇಡ; ಸಂಸಾರ ಮಾಡೋಕೆ 140 ಕೋಟಿನೇ ಬೇಕು!

‘ಪ್ರತಿದಿನ ಬೆಳಿಗ್ಗೆ ಎದ್ದಾಗಲೂ ನಿಕ್ ಗೆ ನನ್ನ ಮುಖವನ್ನು ನೋಡುವುದೆಂದರೆ ಸಿಕ್ಕಾಪಟ್ಟೆ ಇಷ್ಟ! ಆಗ ನಾನು, ಒಂದು ನಿಮಿಷ ಇರು , ಮಸ್ಕರಾ, ಮಾಯಿಶ್ಚರೈಸರ್ ಹಾಕಿಕೊಳ್ಳುತ್ತೇನೆ ಎಂದರೆ ಅವನು ಬೇಡ ಎನ್ನುತ್ತಾನೆ. ಹಾಗೆಯೇ ನೋಡಲು ಇಷ್ಟಪಡುತ್ತಾನೆ. ನಿಕ್ ಹಾಗೆ ನೋಡುವಾಗಲೆಲ್ಲಾ ನನಗೆ ಪ್ರಜ್ಞೆಯೇ ಇಲ್ಲದಂತಾಗುತ್ತದೆ. ನಾನು ಜೋಕ್ ಮಾಡುತ್ತಿಲ್ಲ. ನಿಜವಾಗಿಯೂ ಇದೊಂದು ಅದ್ಭುತ ಅನುಭವ’ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.  

ಪ್ರಿಯಾಂಕ ಬರ್ತಡೇ ಕೇಕ್ ಬೆಲೆ ಏನ್ ದುಬಾರಿ ರೀ!

ಪ್ರಿಯಂಕ ಪ್ರಕಾರ ನಿಕ್ ತುಂಬಾ ಅಟ್ರಾಕ್ಟೀವ್ ಪರ್ಸನ್. ಇವರಿಬ್ಬರೂ ವಾರಕ್ಕೊಮ್ಮೆ ಕ್ವಾಲಿಟೇಟಿವ್ ಸಮಯ ಕಳೆಯುತ್ತಾರೆ. ಸದ್ಯ ಇಬ್ಬರೂ ಮಿಯಾಮಿ ಬೀಚ್ ನಲ್ಲಿ ಸಮಯ ಕಳೆಯುತ್ತಿದ್ದಾರೆ. 

ಜುಲೈ 18 ರಂದು ಮಿಯಾಮಿಯಲ್ಲಿ 37 ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ ಪಿಗ್ಗಿ. ಬರ್ತಡೇ ಕೇಕ್ ಸಿಕ್ಕಾಪಟ್ಟೆ ಗಮನ ಸೆಳೆದಿದೆ. ಚಾಕಲೇಟ್ ಹಾಗೂ ವೆನಿಲ್ಲಾ ಕೇಕ್ ಬೆಲೆ ಬರೋಬ್ಬರಿ 3.45 ರೂ.