ಬೆಂಗಳೂರು[ಡಿ.02]  ಜೋಧಪುರದ ಉಮೈದ್ ಭವನದಲ್ಲಿ ಪ್ರಿಯಾಂಕ-ನಿಕ್ ಜೋನಸ್ ವಿವಾಹ ಕ್ರಿಶ್ಚಿಯನ್ ಸಂಪ್ರದಾಯದಂತೆ ಮುಗಿದಿದೆ. ಆದರೆ ಟ್ವಿಟಿಗರು ಮಾತ್ರ ಪ್ರಿಯಾಂಕಾ ವಿರುದ್ಧ ಕೆಂಡಾಮಂಡಲವಾಗಿದ್ದು ಪ್ರಶ್ನೆಗಳ ಸುರಿಮಳೆ ಹರಿಸಿದ್ದಾರೆ. ಹಾಗಾದರೆ ಏನು ಕಾರಣ?

ದೀಪಾವಳಿ ಸಂದರ್ಭ ಪಟಾಕಿ ಸಿಡಿಸುವುದಕ್ಕೆ ಸುಪ್ರೀಂ ಕೋರ್ಟ್ ಕಾಲಾವಧಿ ನಿಗದಿ ಮಾಡಿತ್ತು. ನಟಿ ಪ್ರಿಯಾಂಕಾ ಛೋಪ್ರಾ ಸಹ ಪಟಾಕಿ ಸಿಡಿಸುವುದರಿಂದ ಆರೋಗ್ಯದ ಮೇಲೆ ಯಾಔ ರೀತಿ ದುಷ್ಪರಿಣಾಮ ಆಗಲಿದೆ ಎಂದು ಜಾಗೃತಿ ಮೂಡಿಸಿದ್ದರು. ಉಸಿರಾಟದ ಸಮಸ್ಯೆ ಇರುವವರು ಮತ್ತಷ್ಟು ಸಂಕಷ್ಟ ಪಡಬೇಕಾಗುತ್ತದೆ ಎಂದು ಸ್ವತಃ ಆಸ್ತಮಾ  ಎದುರಿಸುತ್ತಿರುವ ಪ್ರಿಯಾಂಕಾ ಪಟಾಕಿ ಬೇಡ ಎಂದು ಮನವಿ ಮಾಡಿಕೊಂಡಿದ್ದರು.

ಅಬ್ಬಬ್ಬಾ... ನಿಕ್ ಪೃಷ್ಠದ ಮೇಲೆ ಬಾರಿಸಿದ ಪ್ರಿಯಾಂಕಾ!

ಆದರೆ ಮದುವೆ ಸಂಭ್ರದಲ್ಲಿ ಇರುವ ಪ್ರಿಯಾಂಕಾ ಅದೇ ಖುಷಿಯಲ್ಲಿ ಹಲವು ನಿಮಿಷಗಳ ಕಾಲ ಪಟಾಕಿ ಸಿಡಿಸಿದ್ದಾರೆ ಎನ್ನುವುದಕ್ಕಿಂತ ಅವರ ಕುಟುಂಬ ಮತ್ತು ಸ್ನೇಹಿತರು ಲಕ್ಷಾಂತರ ರೂ. ಪಟಾಕಿ ಸಿಡಿಸಿದ್ದಾರೆ. ಇದೇ ವಿಚಾರ ಇಟ್ಟುಕೊಂಡ ಸಾಮಾಜಿಕ ಜಾಲತಾಣಿಗರು ಪ್ರಿಯಾಂಕಾ ಕಿವಿ ಹಿಂಡಿದ್ದಾರೆ.