ರಣ್ ವೀರ್ ಮತ್ತು ದೀಪಿಕಾ ಮದುವೆ ಮಾಡಿಕೊಂಡು  ಸುದ್ದಿ ಮಾಡಿದ್ದರೆ ಮದುವೆಯ ಹೊಸ್ತಿಲಿನಲ್ಲಿ ಇರುವ ಇನ್ನೊಂದು ತಾರಾ ಜೋಡಿ ಪ್ರಿಯಾಂಕಾ ಛೋಪ್ರಾ ಮತ್ತು ನಿಕ್ ಜೋನಾಸ್ ಸಹ ಸುದ್ದಿ ಮಾಡಿದ್ದಾರೆ. ಹಾಗಾದರೆ ಇವರು ಮಾಡಿದ ಕತೆ ಏನು?

ಅಕ್ಟೋಬರ್ ತಿಂಗಳಿನಲ್ಲೇ ಪ್ರಿಯಾಂಕಾ -ನಿಕ್ ವಿವಾಹ ನಡೆಯಲಿದೆ ಎಂದು ಹೇಳಲಾಗಿತ್ತು. ಆದರೆ ಮದುವೆ ಇದೀಗ ನವೆಂಬರ್ ಅಂತ್ಯಕ್ಕೆ ಹೋಗಿದೆ. ಮದುವೆಗೂ ಮುನ್ನ ಪ್ರಿಯಾಂಕಾ ಛೋಪ್ರಾ ತಾಯಿ ಹಾಗೂ ಗೆಳೆತಿಯರೊಂದಿಗೆ ನ್ಯೂಯಾರ್ಕ್ ನಲ್ಲಿ ಭರ್ಜರಿ ಪಾರ್ಟಿ ಮಾಡಿ ಮುಗಿಸಿದ್ದರು. ದುಬಾರಿ ಆಭರಣ ಧರಿಸಿ ಮಿಂಚಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೀಗ ಇಸ್ಟಾಗ್ರಾಮ್ ನಲ್ಲಿ ನಿಕ್ ಮೂರು ಫೋಟೋ ಅಪ್ ಲೋಡ್ ಮಾಡಿದ್ದು ಬರೆದ ತಲೆಬರಹ ವಿಶೇಷವಾಗಿದೆ. ಪ್ರಿಯಾಂಕಾ ನನ್ನ ಪೃಷ್ಠದ ಭಾಗಕ್ಕೆ ಬಲವಾಗಿ ಹೊಡೆದಿದ್ದಾಳೆ..ನನ್ನೊಂದಿಗೆ ಯುದ್ಧ ಕಲೆ ಅಭ್ಯಾಸ ಮಾಡುತ್ತಿದ್ದಾರೆ.. ಇಂಥ ಸ್ಪರ್ಧೆಗಳು ಖುಷಿ ಕೊಡುತ್ತವೆ ಎಂದು ಬರೆದುಕೊಂಡಿದ್ದಾರೆ.

View post on Instagram