ಮುಂಬೈ (ಆ. 19): ಪ್ರಿಯಾಂಕಾ ಚೋಪ್ರಾ ಅವರು ಅಮೆರಿಕ ಮೂಲದ ಸ್ನೇಹಿತ ಹಾಗೂ ಹಾಡುಗಾರ ನಿಕ್ ಜಾನ್ಸ್ ಅವರೊಂದಿಗೆ ಶನಿವಾರ ವಿವಾಹ ನಿಶ್ಚಯ ನೆರವೇರಿಸಿಕೊಂಡರು.

ಚೋಪ್ರಾ ನಿವಾಸದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಪೂಜೆ ಬಳಿಕ ತಮ್ಮ ನಡುವೆ ಆಗಿರುವ ನಿಶ್ಚಿತಾರ್ಥ ವಿಚಾರವನ್ನು ನಿಕ್ ಮತ್ತು ನಟಿ ಚೋಪ್ರಾ ಅವರು ಇನ್ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ. ಅಲ್ಲದೆ, ಪ್ರಿಯಾಂಕಾ
ಅವರು ನಿಕ್ ಅವರನ್ನು ಅಪ್ಪಿಕೊಂಡಿರುವ ಫೋಟೊವನ್ನು ಸಹ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

 

ಇದೇ ಫೋಟೊವನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಜಾನ್ಸ್, ‘ಪ್ರಿಯಾಂಕಾ ಭವಿಷ್ಯದ ಮಿಸ್ ಜಾನ್ಸ್. ನನ್ನ ಹೃದಯ ಹಾಗೂ ನನ್ನ ಪ್ರೀತಿ,’ ಎಂಬ ಕ್ಯಾಪ್ಶನ್ ಸಹ ಬರೆದಿದ್ದಾರೆ. ಆದಾಗ್ಯೂ, ತಾವು ಯಾವಾಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತೇವೆ ಎಂಬ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ. 
 

 

Future Mrs. Jonas. My heart. My love.

A post shared by Nick Jonas (@nickjonas) on Aug 18, 2018 at 2:45am PDT