ಒಂದು ಹಾಡಿನ ವಿಡಿಯೋದಿಂದಾಗಿ ರಾತ್ರೋರಾತ್ರಿ ಸ್ಟಾರ್ ಆದವರು ಮಲಯಾಳಂ ನಟಿ ಪ್ರಿಯಾ ವಾರಿಯರ್. ‘ಒರು ಅಡಾರ್ ಲವ್’ ಚಿತ್ರದ ಈ ನಟಿ ಈಗ ಕನ್ನಡ ಚಿತ್ರವೊಂದರಲ್ಲಿ ನಟಿಸಲು ಒಪ್ಪಿಕೊಂಡಿದ್ದಾಳೆಂಬುದುಸದ್ಯದ ಹಾಟ್ ನ್ಯೂಸ್!
ಬೆಂಗಳೂರು (ಫೆ.21): ಒಂದು ಹಾಡಿನ ವಿಡಿಯೋದಿಂದಾಗಿ ರಾತ್ರೋರಾತ್ರಿ ಸ್ಟಾರ್ ಆದವರು ಮಲಯಾಳಂ ನಟಿ ಪ್ರಿಯಾ ವಾರಿಯರ್. ‘ಒರು ಅಡಾರ್ ಲವ್’ ಚಿತ್ರದ ಈ ನಟಿ ಈಗ ಕನ್ನಡ ಚಿತ್ರವೊಂದರಲ್ಲಿ ನಟಿಸಲು ಒಪ್ಪಿಕೊಂಡಿದ್ದಾಳೆಂಬುದು
ಸದ್ಯದ ಹಾಟ್ ನ್ಯೂಸ್!
ಇನ್ನಷ್ಟೇ ಚಿತ್ರೀಕರಣ ಶುರುವಾಗಬೇಕಿರುವ ‘ಯೋಗಿ ಲವ್ಸ್ ಸುಪ್ರಿಯಾ’ ಚಿತ್ರದಲ್ಲಿ ನಟಿಸಲು ಪ್ರಿಯಾ ವಾರಿಯರ್ ಒಪ್ಪಿಕೊಂಡಿದ್ದಾಳಂತೆ. ಹಾಗಂತ ಆ ಚಿತ್ರದ ನಿರ್ದೇಶಕ ಯೋಗಿ ಹೇಳಿದ್ದಾರೆ. ಏಳೆಂಟು ವರ್ಷಗಳಿಂದ ಚಿತ್ರೋದ್ಯಮದಲ್ಲಿ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ಯೋಗಿ, ಈಗ ತಾವೇ ನಿರ್ದೇಶಿಸಿ, ನಾಯಕನಾಗಿ ಅಭಿನಯಿಸುತ್ತಿರುವ ಚಿತ್ರಕ್ಕೆ ಪ್ರಿಯಾ ವಾರಿಯರ್ ಅವರನ್ನು ಕರೆ ತರಲು ಮುಂದಾಗಿದ್ದಾರೆ. ‘ಚಿತ್ರಕ್ಕೆ ನಾಯಕಿ ಹುಡುಕಾಟ
ನಡೆದಿತ್ತು. ಅದೇ ವೇಳೆಗೆ ಪ್ರಿಯಾ ಹುಬ್ಬು ಹಾರಿಸಿ ದೊಡ್ಡ ಸುದ್ದಿ ಆಗಿದ್ದನ್ನು ನೋಡಿದೆ. ಪಾತ್ರಕ್ಕೆ ಅವರೇ ಸೂಕ್ತವಾಗುತ್ತಾರೆಂದು ನಿರ್ಧರಿಸಿ, ಅವರ ದೂರವಾಣಿಗೆ ಕರೆ ಮಾಡಿದೆ. ಆದರೆ ಆಗ ಅವರ ಮೊಬೈಲ್ ಸ್ವಿಚಾಫ್ ಆಗಿತ್ತು.
ಮತ್ತೆ ‘ಒರು ಅಡಾರ್ ಲವ್’ ಚಿತ್ರದ ನಿರ್ದೇಶಕರ ಮೂಲಕ ಪ್ರಿಯಾ ಅವರನ್ನು ಸಂಪರ್ಕಿಸಿ, ಭೇಟಿ ಮಾಡಲು ಸಮಯ ನಿಗದಿ ಮಾಡಿಕೊಂಡಿದ್ದೆ. ಅಂತೆಯೇ ತ್ರಿಶೂರ್‌ಗೆ ತೆರಳಿ ಪ್ರಿಯಾ ಅವರನ್ನು ಭೇಟಿ ಮಾಡಿ, ಪಾತ್ರದ ಬಗ್ಗೆ ಹೇಳಿದ್ದೇನೆ.
ಅದಕ್ಕವರು ಅಭಿನಯಿಸಲು ಖುಷಿಯಿಂದಲೇ ಒಪ್ಪಿಕೊಂಡಿದ್ದಾರೆ’ ಎನ್ನುತ್ತಾರೆ ಯೋಗಿ.
