'ಕಣ್' ಸನ್ನೆ ಹುಡುಗಿ ಪ್ರಿಯಾ ಕನ್ನಡಕ್ಕೆ!

First Published 20, Feb 2018, 5:02 PM IST
Priya varrier to act in Kannada movie
Highlights

ಹುಬ್ಬೇರಿಸಿ, ಕಣ್ ಹೊಡೆದು, ಕೈಯಲ್ಲೇ ಶೂಟ್ ಮಾಡಿ, ಪಡ್ಡೆ ಹುಡುಗರ ಹೃದಯ ಕದ್ದ ಮಲೆಯಾಳಿ ನಟಿ ಕನ್ನಡಕ್ಕೆ ಬರುತ್ತಿದ್ದಾರೆ.

ಬೆಂಗಳೂರು: ಹುಬ್ಬೇರಿಸಿ, ಕಣ್ ಹೊಡೆದು, ಕೈಯಲ್ಲೇ ಶೂಟ್ ಮಾಡಿ, ಪಡ್ಡೆ ಹುಡುಗರ ಹೃದಯ ಕದ್ದ ಮಲೆಯಾಳಿ ನಟಿ  ಪ್ರಿಯಾ ಪ್ರಕಾಶ್ ವಾರಿಯರ್ ಕನ್ನಡಕ್ಕೆ ಬರುತ್ತಿದ್ದಾರೆ.

ಯೆಸ್,, ಕುಂತ್ರೂ, ನಿಂತ್ರೂ, ಎಲ್ಲಿ ನೋಡಿದ್ರೂ ಕಣ್ಣಲೇ ಸೆಳೆಯೋ ಈ ಮಾಲಿವುಡ್ ಬ್ಯೂಟಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್, ನ್ಯಾಷನಲ್ ಕ್ರಶ್ ಜತೆಗೆ ವಿಶ್ವದ ಮೂರನೇ ಟಾಪ್ ಸೆಲಬ್ರಿಟಿಯಾಗಿ ಗುರುತಿಸಿಕೊಂಡ ಈ ನಟಿ ರಾತ್ರಿ ಬೆಳಗಾಗುವುದರಲ್ಲಿ ಲಕ್ಷಾಂತರ ಅಭಿಮಾನಗಳನ್ನು ಗಿಟ್ಟಿಸಿಕೊಂಡಿರುವುದು ಇದೀಗ ಇತಿಹಾಸ.

ಈ ಹಾಡು ಭಾರತದ ಲೇಟೆಸ್ಟ್ ಇಂಟರ್ನೆಟ್ ಸೆನ್ಸೇಷನ್, ನೀವೂ ಒಮ್ಮೆ ನೋಡಿ

ಪ್ರಿಯಾಗೆ ಫಿದಾ ಆದ ಬಾಲಿವುಡ್ ನಟ ರಿಶಿ ಕಪೂರ್..!

 

ಇಂಟರ್ನೆಟ್ ಸೆನ್ಸೇಷನ್ ಆಗಿರುವ ಪ್ರಿಯಾ ಪ್ರಕಾಶ್ ಯಾರು?

ತನ್ನ ಭಾವಾಭಿನಯದಿಂದಲೇ ಸುದ್ದಿಯಾದ ನಟಿ ಪ್ರಿಯಾ, ಯೋಗಿ ಪ್ರೊಡಕ್ಷನ್‌ನಲ್ಲಿ ನಿರ್ಮಾಣವಾಗ್ತಿರೋ ಹೊಸ ಚಿತ್ರ 'ಯೋಗಿ ಲವ್ಸ್  ಸುಪ್ರಿಯಾ' ಅನ್ನೋ ಕನ್ನಡದ  ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸದ್ಯ ಚಿತ್ರದ ಕಥೆ ಕೇಳಿ ಒಂದು ಸುತ್ತಿನ ಮಾತುಕತೆ ಮುಗಿಸಿರೋ ಪ್ರಿಯಾ, ಕನ್ನಡ ಚಿತ್ರದಲ್ಲಿ ನಟಿಸುವುದು ಬಹುತೇಕ ಖಚಿತವಾಗಿದೆ.
 

loader