ಬೆಂಗಳೂರು (ಜ. 02): ಹೆಣ್ಣಿನ ಕಣ್ಣೋಟಕ್ಕೆ ಮಾರು ಹೋಗದವರು ಯಾರಿದ್ದಾರೆ ಹೇಳಿ. ಹುಡುಗರ ಎದೆಯಲ್ಲಿ ಪ್ರೀತಿಯನ್ನು ಹುಟ್ಟಿಸುವ ತಾಕತ್ತಿರೋದು ಆ ಕುಡಿ ನೋಟಕ್ಕೆ ಮಾತ್ರ. ತಮ್ಮ ಕಣ್ಸನ್ನೆ ಮೂಲಕವೇ ಹುಡುಗರ ಎದೆಗೆ ಲಗ್ಗೆ ಇಟ್ಟ, ಭಾರೀ ಸುದ್ದಿಯಾದ ಹುಡುಗಿ ಪ್ರಿಯಾ ವಾರಿಯರ್.

ಯಶ್- ರಾಧಿಕಾ ಮಗಳ ಹೆಸರು ಇದೇ ಅಂತೆ! 

ಇವರ ಕಣ್ಸನ್ನೆ ಹುಡುಗರ ನಿದ್ದೆಗೆಡಿಸಿತ್ತು. ಈಗ ಪ್ರಿಯಾ ವಾರಿಯರ್ ಸ್ಯಾಂಡಲ್‌ವುಡ್‌ನಲ್ಲೂ ಮೋಡಿ ಮಾಡಲು ಬರಲಿದ್ದಾರೆ. ಪ್ರಿಯಾ ವಾರಿಯರ್ ಮಲಯಾಳಂನಲ್ಲಿ ’ಒರು ಅಡಾರು ಲವ್’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಟೀಸರ್ ಕೂಡಾ ರಿಲೀಸಾಗಿದೆ. ಈ ಚಿತ್ರ ಕನ್ನಡಕ್ಕೆ ’ಕಿರಿಕ್ ಲವ್ ಸ್ಟೋರಿ’ ಎಂಬ ಹೆಸರಿನಲ್ಲಿ ಬರುತ್ತಿದೆ. 

ಹೊಸ ವರ್ಷವನ್ನು ಸೆಲಬ್ರಿಟಿಗಳು ವೆಲ್‌ಕಮ್ ಮಾಡಿದ್ದು ಹೀಗೆ

ಇದುವರೆಗೂ ಕೇವಲ ತೆಲುಗು, ತಮಿಳು ಸಿನಿಮಾಗಳು ಕನ್ನಡಕ್ಕೆ ಡಬ್ ಆಗುತ್ತಿತ್ತು. ಆದರೆ ಮಲಯಾಳಂ ಚಿತ್ರವೊಂದು ಕನ್ನಡಕ್ಕೆ ಬರ್ತಾ ಇರೋದು ಬಹಳ ಅಪರೂಪ. 

ಅಂದಹಾಗೆ ’ಒರು ಅಡಾರು ಲವ್’ ಚಿತ್ರವನ್ನು ಒಮರ್ ಲುಲು ನಿರ್ದೇಶಿಸಿದ್ದು ವ್ಯಾಲಂಟೈನ್ಸ್ ಡೇ ದಿನ ಪ್ರೇಮಿಗಳಿಗೆ ಗಿಫ್ಟ್ ಕೊಡಲು ನಿರ್ಧರಿಸಿದ್ದಾರೆ.