ಪ್ರಥಮ್‌ ಅವರನ್ನು ಹತ್ತಿರದಿಂದ ಬಲ್ಲವರಿಗೂ ಇದರ ರಹಸ್ಯ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಅದನ್ನು ಪ್ರಥಮ್‌ ಕೂಡ ಹೇಳಿಕೊಳ್ಳುವುದಕ್ಕೆ ರೆಡಿಯಿಲ್ಲ. ಏನಾಗುತ್ತೆ ಕಾದು ನೋಡಿ ಅಂತಾರೆ ಪ್ರಥಮ್‌.
ಬಿಗ್'ಬಾಸ್ ಸೀಸನ್ 4ರ ವಿನ್ನರ್ ಪ್ರಥಮ್ ಸ್ಟಾರ್ ಆಗಿದ್ದೇ ತಾನು ಒಳ್ಳೆ ಹುಡ್ಗ ಅಂತ ಹೇಳಿಕೊಳ್ಳುತ್ತಾ. ಬಿಗ್'ಬಾಸ್'ನಲ್ಲಿ ಗೆದ್ದು ನಗು ಬೀರಿದರು. ಇದೆಲ್ಲ ಹಳೇ ಸುದ್ದಿ. ಪ್ರಥಮ್ ಕುರಿತಂತೆ ಈಗ ಲೇಟೆಸ್ಟ್ ಸುದ್ದಿಯೊಂದು ಬಂದಿದೆ. ಒಳ್ಳೆ ಹುಡ್ಗ ಪ್ರಥಮ್'ಗೆ ‘ದೇವ್ರಂಥ ಮನುಷ್ಯ' ಎನ್ನುವ ಪಟ್ಟಬೇರೆ ಸಿಕ್ಕಿದೆ.
ಅಂದಹಾಗೆ ಬಿಗ್'ಬಾಸ್ ಸೀಸನ್ 4 ರಲ್ಲಿ ಪ್ರಥಮ್ ಗೆಲುವಿನ ನಗೆ ಬೀರಿದ ನಂತರ ಸ್ಟಾರ್ ಆಗಿದ್ದಾರೆ. ಒಂದೇ ಅವರು ನಾಲ್ಕು ಚಿತ್ರಗಳಿಗೆ ಸಹಿ ಹಾಕಿದರು. ಮತ್ತೆರೆಡು ಚಿತ್ರಗಳಿಗೆ ಅವರು ನಾಯಕ. ಒಟ್ಟು ಈಗ ಅವರು ಆರು ಚಿತ್ರಗಳಿಗೆ ಹೀರೋ ಆಗಿ ಫಿಕ್ಸ್ ಆಗಿದ್ದಾರಂತೆ. ಹೀಗೆ ಪ್ರಥಮ್ ಸುತ್ತ ಸಾಕಷ್ಟುಸುದ್ದಿಗಳಿದ್ದವು. ಆ ಚಿತ್ರಗಳಾದರೂ ಯಾವುವು? ಪ್ರಥಮ್ ಮೇಲೆ ಬಂಡವಾಳ ಹಾಕುತ್ತಿರುವ ನಿರ್ಮಾಪಕರಾದರು ಯಾರು? ಎಂಬಿತ್ಯಾದಿ ಸುದ್ದಿಗಳು ಈ ತನಕ ತೆರೆಮರೆಯಲ್ಲಿಯೇ ಉಳಿದಿದ್ದವು. ಆ ಪೈಕಿ ಈಗ ಪ್ರಥಮ್ ಹೀರೋ ಆಗಿ ಅಭಿನಯಿಸುತ್ತಿರುವ ಒಂದು ಚಿತ್ರದ ಟೈಟಲ್ ಲಾಂಚ್ ಆಗಿದೆ. ಆ ಚಿತ್ರದ ಹೆಸರೇ ‘ದೇವ್ರಂಥ ಮನುಷ್ಯ'. ಇಲ್ಲಿ ಕುತೂಹಲ ಹುಟ್ಟಿಸಿದ್ದು ಸಂಜೆ ಮೇಲೆ ಸಿಗ್ಬೇಡಿ ಎನ್ನುವ ಟ್ಯಾಗ್ಲೈನ್! ಪ್ರಥಮ್ ಒಳ್ಳೆ ಹುಡ್ಗ ಅಂದ್ಮೇಲೆ ದ್ರೇವಂಥ ಮನುಷ್ಯ ಅನ್ನುವುದ್ರಲ್ಲೇನು ವಿಶೇಷವಿಲ್ಲ. ಆದ್ರೆ ಈ ದ್ರೇವಂಥ ಮನುಷ್ಯನ ಕೈಗೆ ಸಂಜೆ ಮೇಲೆ ಸಿಕ್ಕರೆ ಏನಾಗುತ್ತೆ ಅನ್ನುವುದೇ ಇಲ್ಲಿ ಕುತೂಹಲದ ಸಂಗತಿ. ಪ್ರಥಮ್ ಅವರನ್ನು ಹತ್ತಿರದಿಂದ ಬಲ್ಲವರಿಗೂ ಇದರ ರಹಸ್ಯ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಅದನ್ನು ಪ್ರಥಮ್ ಕೂಡ ಹೇಳಿಕೊಳ್ಳುವುದಕ್ಕೆ ರೆಡಿಯಿಲ್ಲ. ಏನಾಗುತ್ತೆ ಕಾದು ನೋಡಿ ಅಂತಾರೆ ಪ್ರಥಮ್. ವೆಂಕಟ್ ನಾರಾಯಣ್, ಮಂಜುನಾಥ್, ಹಾಗೂ ಸುರೇಶ್ ಈ ಚಿತ್ರದ ನಿರ್ಮಾಪಕರು. ಕಿರಣ್ ಶೆಟ್ಟಿಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಕನ್ನಡಪ್ರಭ ಸಿನಿವಾರ್ತೆ
epaper.kannadaprabha.in
