ಪ್ರಶಾಂತ್‌ ನೀಲ್‌ ಹಾಗೂ ಜೂ.ಎನ್‌ಟಿಆರ್‌ ಕಾಂಬಿನೇಶನ್‌ನ ‘ಡ್ರ್ಯಾಗನ್‌’ ಚಿತ್ರದ ಕತೆ ಲೀಕ್‌ ಆಗಿದೆ ಎನ್ನಲಾಗುತ್ತಿದೆ. ಈ ಚಿತ್ರವನ್ನು ಏಕಕಾಲದಲ್ಲಿ 40 ದೇಶಗಳಲ್ಲಿ ಬಿಡುಗಡೆ ಮಾಡಲು ಮೈತ್ರಿ ಮೂವೀ ಮೇಕರ್ಸ್‌ ನಿರ್ಮಾಣ ಸಂಸ್ಥೆ ನಿರ್ಧರಿಸಿದೆ.

ನಿರ್ದೇಶಕ ಪ್ರಶಾಂತ್‌ ನೀಲ್‌ ಹಾಗೂ ಜೂ.ಎನ್‌ಟಿಆರ್‌ ಕಾಂಬಿನೇಶನ್‌ನ ‘ಡ್ರ್ಯಾಗನ್‌’ ಚಿತ್ರದ ಕತೆ ಲೀಕ್‌ ಆಗಿದೆ ಎನ್ನಲಾಗುತ್ತಿದೆ. ಸದ್ಯಕ್ಕೆ ಹೊರಗೆ ಬಂದಿರುವ ಮಾಹಿತಿ ಪ್ರಕಾರ ಈ ಚಿತ್ರದಲ್ಲಿ ಜೂ.ಎನ್‌ಟಿಆರ್‌ ಅಂತಾರಾಷ್ಟ್ರೀಯ ಅಂಡರ್‌ ವರ್ಲ್ಡ್ ಮಾಫಿಯಾ ಡಾನ್‌ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ.

Add Asianetnews Kannada as a Preferred SourcegooglePreferred

ಚೈನಾಗೆ ಸೇರಿದ ಗ್ಯಾಂಗ್‌ಸ್ಟರ್‌ ಒಬ್ಬನ ಜೀವನ ಆಧರಿಸಿದ ಈ ಚಿತ್ರವನ್ನು ರೂಪಿಸಲಾಗುತ್ತಿದೆ ಎನ್ನುವ ಮಾಹಿತಿ. ಈ ಕಾರಣಕ್ಕೆ ಚಿತ್ರಕ್ಕೆ ‘ಡ್ರ್ಯಾಗನ್‌’ ಎನ್ನುವ ಹೆಸರು ಇಡಲಾಗಿದೆಯಂತೆ. ಸಾಮಾನ್ಯ ವ್ಯಕ್ತಿಯೊಬ್ಬ ದೊಡ್ಡ ಶಕ್ತಿಯಾಗಿ ಒಂದು ಸಾಮ್ರಾಜ್ಯವನ್ನು ಸ್ಥಾಪಿಸುವುದು ಹೇಗೆ ಎನ್ನುವುದು ಎನ್‌ಟಿಆರ್‌ ಪಾತ್ರದಲ್ಲಿ ನೋಡಬಹುದಂತೆ.

ಜೂ.ಎನ್‌ಟಿಆರ್‌ ಪಾತ್ರದ ಚಿತ್ರೀಕರಣಕ್ಕೆ ರಾಮೋಜಿ ಫಿಲಮ್‌ ಸಿಟಿಯಲ್ಲಿ 15 ಕೋಟಿ ರು. ವೆಚ್ಚದಲ್ಲಿ ಅದ್ದೂರಿ ಮನೆ ಸೆಟ್‌ ನಿರ್ಮಾಣ ಮಾಡಿರುವುದು ಚಿತ್ರದ ಮತ್ತೊಂದು ಹೈಲೈಟ್‌. ಮುಂದಿನ ವರ್ಷ ತೆರೆಗೆ ಬರಲಿರುವ ಈ ಚಿತ್ರವನ್ನು ಏಕಕಾಲದಲ್ಲಿ 40 ದೇಶಗಳಲ್ಲಿ ಬಿಡುಗಡೆ ಮಾಡಲು ಮೈತ್ರಿ ಮೂವೀ ಮೇಕರ್ಸ್‌ ನಿರ್ಮಾಣ ಸಂಸ್ಥೆ ನಿರ್ಧರಿಸಿದೆ.

ಸಿನಿಮಾದಿಂದ ಹೊರ ನಡೆದ ಮಲಯಾಳಂ ನಟ ಟೊವಿನೋ ಥಾಮಸ್

ಪ್ರಶಾಂತ್‌ ನೀಲ್‌, ಜೂನಿಯರ್‌ ಎನ್‌ಟಿಆರ್‌ ಕಾಂಬಿನೇಶನ್‌ನ ‘ಡ್ರ್ಯಾಗನ್‌’ ಸಿನಿಮಾದಿಂದ ಖ್ಯಾತ ಮಲಯಾಳಂ ನಟ ಟೊವಿನೋ ಥಾಮಸ್‌ ಹೊರನಡೆದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಈ ಒಂದು ಸಿನಿಮಾಕ್ಕೇ ಒಂದು ವರ್ಷ ಕೊಟ್ಟರೆ ನನ್ನ ನಾಲ್ಕೈದು ಬೇರೆ ಪ್ರಾಜೆಕ್ಟ್‌ಗಳು ನಿಂತುಬಿಡುತ್ತವೆ. ಒಂದು ಸಿನಿಮಾಕ್ಕೆ 3 ತಿಂಗಳ ಡೇಟ್ಸ್‌ ಅಷ್ಟೇ ಕೊಡುತ್ತೇನೆ.

ಅದಕ್ಕಿಂತ ವಿಳಂಬವಾದರೆ ಹೊರಬರೋದು ಅನಿವಾರ್ಯವಾಗುತ್ತದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ದುಬೈನಲ್ಲಿ ನಡೆಯುತ್ತಿದ್ದ ‘ಡ್ರ್ಯಾಗನ್‌’ ಸಿನಿಮಾ ಶೂಟಿಂಗ್‌ ಯುದ್ಧದ ಕಾರಣ ಅರ್ಧಕ್ಕೆ ನಿಂತಿತ್ತು. ಇನ್ನೊಂದೆಡೆ ದುಬೈನಲ್ಲಿ ನಿಗದಿಯಾಗಿದ್ದ ಶಾರೂಕ್‌ ಖಾನ್‌ ನಟನೆಯ ‘ಕಿಂಗ್‌’ ಸಿನಿಮಾ ಶೂಟಿಂಗ್‌ ಮುಂಬೈಗೆ ಶಿಫ್ಟ್‌ ಆಗಿದೆ.