ಮತ್ತೋರ್ವ ಕರಾವಳಿ ಬೆಡಗಿಯೊಂದಿಗೆ ಪ್ರಭಾಸ್ ರೊಮ್ಯಾನ್ಸ್

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 6, Sep 2018, 3:44 PM IST
Prabhas Romance With Pooja Hegde
Highlights

ಬಾಹುಬಲಿ ಸ್ಟಾರ್ ಪ್ರಭಾಸ್ ಇದೀಗ ಹೊಸ ಸುದ್ದಿಯೊಂದನ್ನು ನೀಡಿದ್ದಾರೆ. ಮತ್ತೋರ್ವ ಕರ್ನಾಟಕದ ಕರಾವಳಿ ಚೆಲುವೆಯೊಂದಿಗೆ ರೊಮ್ಯಾನ್ಸ್ ಮಾಡಲಿದ್ದು ಈ ಬಗ್ಗೆ ಸ್ವತಃ ಅವರೇ ತಮ್ಮ ಫೇಸ್ ಬುಕ್ ಖಾತೆ ಮೂಲಕ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. 

ಹೈದ್ರಾಬಾದ್ : ಬಾಹುಬಲಿ ಸ್ಟಾರ್ ಪ್ರಭಾಸ್ ಇದೀಗ ಹೊಸ ಸುದ್ದಿಯೊಂದನ್ನು ನೀಡಿದ್ದಾರೆ.  ಭಾರೀ ಬಜೆಟ್ ನಲ್ಲಿ ಪ್ರಭಾಸ್ ಸಾಹೋ ಚಿತ್ರವನ್ನು ಪೂರ್ಣಗೊಳಿಸಿ ಇನ್ನೇನು ಬಿಡುಗಡೆಗೆ ಸಿದ್ಧವಾಗಿದ್ದು ಇದೇ ಟೈಮ್ ನಲ್ಲಿ ಬಾಲಿವುಡ್ ಬೆಡಗಿಯೊಂದಿಗೆ ಮತ್ತೊಂದು ಚಿತ್ರ ಮಾಡುತ್ತಿರುವುದಾಗಿ ಹೇಳಿದ್ದಾರೆ. 

ಮೆಹೆಂಜೋದಾರೋ ನಟಿ ಪೂಜಾ ಹೆಗ್ಡೆ ಜೊತೆಗೆ ಇನ್ನೊಂದು ಚಿತ್ರವನ್ನು ಮಾಡುತ್ತಿರುವ ವಿಚಾರವನ್ನು ಪ್ರಭಾಸ್ ಇದೀಗ ರಿವೀಲ್ ಮಾಡಿದ್ದಾರೆ.  

ತಮ್ಮ ಫೇಸ್ ಬುಕ್ ಖಾತೆಯಲ್ಲಿ ಈ ಬಗ್ಗೆ ಸುದ್ದಿಯನ್ನು ಸ್ವತಃ ಪ್ರಭಾಸ್ ಅವರೇ ಹಂಚಿಕೊಂಡಿದ್ದಾರೆ.  

ಈ ಚಿತ್ರವನ್ನು ಕೆಕೆ ರಾಧಾ ಕೃಷ್ಣ  ಅವರು ನಿರ್ದೇಶನ ಮಾಡುತ್ತಿದ್ದು ಯುವಿ ಕ್ರಿಯೇಷನ್ ಬ್ಯಾನರ್ ಅಡಿಯಲ್ಲಿ ಚಿತ್ರ ತಯಾರಾಗುತ್ತಿದೆ. 

 

 

loader