ಪ್ರಧಾನಿ ನರೇಂದ್ರ ಮೋದಿ ಬಾಲಿವುಡ್ ಮಂದಿಯೊಂದಿಗೆ ಇರುವ ಫೋಟೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ ಈ ವರ್ಷದ ಸೆಲ್ಫಿ ಎಂಬ ಹೆಗ್ಗಳಿಕೆಯನ್ನು ನೆಟ್ಟಿಗರು ನೀಡಿದ್ದಾರೆ.
ನವದೆಹಲಿ[ಜ.10] ರಣಬೀರ್ ಕಪೂರ್, ರಣವೀರ್ ಸಿಂಗ್, ಆಲಿಯಾ ಭಟ್ ಸೇರಿದಂತೆ ಅನೇಕ ಕಲಾವಿದರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ದೇಶ ಕಟ್ಟುವ ಕುರಿತು ಮಾತನಾಡಿದ್ದಾರೆ.
'ಆ್ಯಕ್ಸಿಡೆಂಟಲ್ ಪಿಎಂ’ ಖೇರ್ ಸೇರಿ 13 ಜನರಿಗೆ ಸಂಕಷ್ಟ!
ರಣವೀರ್ ಸಿಂಗ್, ರಣಬೀರ್ ಕಪೂರ್, ಆಲಿಯಾ ಭಟ್, ರಾಜಕುಮಾರ್ ರಾವ್, ಆಯುಷ್ಯಮಾನ್ ಖುರಾನಾ, ವರುಣ್ ಧವನ್, ಸಿದ್ಧಾರ್ಥ ಮಲ್ಹೋತ್ರಾ, ನಿರ್ದೇಶಕರಾದ ರೋಹಿತ್ ಶೆಟ್ಟಿ, ಕರಣ್ ಜೋಹರ್, ನಿರ್ಮಾಪಕರಾದ ಏಕ್ತಾ ಕಪೂರ್ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಪ್ರಧಾನಿ ಮೋದಿ ಸಹ ಎಲ್ಲರನ್ನು ಒಳಗೊಂಡಿರುವ ಸೆಲ್ಫಿಯನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

Last Updated 10, Jan 2019, 11:27 PM IST