ವಿಲನ್ ಚಿತ್ರ ರಾಜ್ಯಾದ್ಯಂತ ಪ್ರದರ್ಶನ ಕಾಣುತ್ತಿದೆ. ಆದರೆ ವಿಲನ್ ಇಬ್ಬರು ಸ್ಟಾರ್ ನಟರ ಅಭಿಮಾನಿಗಳ ನಡುವಿನ ತಿಕ್ಕಾಟಕ್ಕೂ ವೇದಿಕೆ ಮಾಡಿದೆ. ಸ್ವತಃ ಸುದೀಪ್ ಈ ಕುರಿತು ಮಾತನಾಡಿದ್ದಾರೆ.

ದಾವಣಗೆರೆ(ಅ.19] ಶಿವಣ್ಣ ದಡ್ಡನಾ....?? ಹೀಗೆಂದು ಪ್ರಶ್ನೆ ಮಾಡಿದ್ದು ಕಿಚ್ಚ ಸುದೀಪ್. ಈ ಸಿನಿಮಾ ಕತೆ ಕೇಳಿಯೇ ಶಿವಣ್ಣ ಒಪ್ಪಿಕೊಂಡಿರುವುದು. ಶಿವಣ್ಣ 35, 40 ವರ್ಷದಿಂದ ಇಂಡಸ್ಟ್ರಿಯಲ್ಲಿ ಇದ್ದಾರೆ ಎಂದು ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಸಿನಿಮಾದಲ್ಲಿ ಸುದೀಪ್ ವಿಜೃಂಭಿಸಿದ್ದು ಹೊಡೆದಾಟದ ಸೀನ್ ಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ ಎಂಬ ಶಿವರಾಜ್ ಕುಮಾರ್ ಅಭಿಮಾನಿಗಳ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸುದೀಪ್, ಶಿವಣ್ಣ ಪ್ರೇಮ್ ಗೆ ಹೇಳಿ ಬೇಕಾದರೆ ಸೀಟನ್ ಕಟ್ ಮಾಡಿಸಲಿ. ಸಿನಿಮಾದಲ್ಲಿ ಸುದೀಪ್ ಶಿವಣ್ಣಗೆ ಹೊಡೆಯುವ ಸೀನ್ ಬೇಕಿದ್ದರೆ ತೆಗೆಸಲಿ. ಸಿನಿಮಾದಲ್ಲಿ ಸನ್ನಿವೇಶಕ್ಕೆ ತಕ್ಕಂತೆ ಪಾತ್ರ ಇರತ್ತೆ. ತಾಯಿಗೆ ಪ್ರಾಮಿಸ್ ಮಾಡಿರ್ತಾರೆ, ಹಾಗಾಗಿ ಶಿವಣ್ಣ ಕೈ ಎತ್ತೋದಲ್ಲ. ಅಭಿಮಾನಿಗಳು ಸಿನಿಮಾವನ್ನು ಸಿನಿಮಾವಾಗಿ ನೋಡಲಿ ಎಂದು ಮನವಿ ಮಾಡಿದ್ದಾರೆ.

'ಶಿವಣ್ಣ-ಸುದೀಪ್‌ಗೆ ನಿಜವಾದ ವಿಲನ್ ಜೋಗಿ ಪ್ರೇಮ್'

ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿ ಪೀಠದಲ್ಲಿ ಮಾತನಾಡಿದ ಸುದೀಪ್ ಈ ರೀತಿ ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿರುವ ಆರೋಪಗಳಿಗೆ ಈ ಮೂಲಕ ಉತ್ತರ ನೀಡುವ ಕೆಲಸ ಮಾಡಿದ್ದಾರೆ.