ಮೋಮಟವಲ್ಲಿ ಅನಿಲ್ ಕುಮಾರ್ ಮೃತನು. ಈತ ಜಿಮ್ ತರಬೇತುದಾರನಾಗಿದ್ದು ಪವನ್ ಕಲ್ಯಾಣ್ ಅವರ ಅಪ್ಪಟ ಅಭಿಮಾನಿಯಾಗಿದ್ದು ತನ್ನ ಜೀವನದಲ್ಲಿ ಅವರನ್ನು ಭೇಟಿಯಾಗದ ಕಾರಣ ನೇಣಿಗೆ ಶರಣಾಗಿದ್ದಾನೆ.
ವಿಜಯವಾಡ[ಸೆ.04]: ತನ್ನ ನೆಚ್ಚಿನ ನಟ ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರನ್ನು ಭೇಟಿಯಾಗಲಿಲ್ಲವೆಂದು ನೊಂದ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯವಾಡದಲ್ಲಿ ನಡೆದಿದೆ.
ಮೋಮಟವಲ್ಲಿ ಅನಿಲ್ ಕುಮಾರ್ ಮೃತನು. ಈತ ಜಿಮ್ ತರಬೇತುದಾರನಾಗಿದ್ದು ಪವನ್ ಕಲ್ಯಾಣ್ ಅವರ ಅಪ್ಪಟ ಅಭಿಮಾನಿಯಾಗಿದ್ದು ತನ್ನ ಜೀವನದಲ್ಲಿ ಅವರನ್ನು ಭೇಟಿಯಾಗದ ಕಾರಣ ನೇಣಿಗೆ ಶರಣಾಗಿದ್ದಾನೆ. ತಾನು ಮೃತಪಟ್ಟ ನಂತರ ತನ್ನ ಅಂತಿಮ ಸಂಸ್ಕಾರಕ್ಕೆ ಪವನ್ ಅವರು ಬರಬೇಕೆಂದು ಡೆತ್ ನೋಟ್'ನಲ್ಲಿ ಮನವಿ ಮಾಡಿಕೊಂಡಿದ್ದಾನೆ.
ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಈತನನ್ನು ನೆರೆಮನೆಯವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳೀಯ ಠಾಣೆಯಲ್ಲಿ 174 ಸೆಕ್ಷನ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು ಮೃತದೇಹವನ್ನು ಸರ್ಕಾರಿ ಅಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

