ಆಗ ಹುಟ್ಟಿದ್ದೇ ಶ್ರೀ ವಜ್ರೇಶ್ವರಿ ಕಂಬೈನ್ಸ್ ಇದೀಗ 50 ವರ್ಷ ಪೂರೈಸಿದೆ. ಬರೋಬ್ಬರಿ 86 ಸಿನಿಮಾಗಳನ್ನು ಕೊಟ್ಟ ಶ್ರೀ ವಜ್ರೇಶ್ವರಿ ಕಂಬೈನ್ಸ್ ಸಹೋದರ ಸಂಸ್ಥೆ 'ಪಿಆರ್‌ಕೆ ಪ್ರೊಡಕ್ಷನ್' 8 ವರ್ಷಗಳ ಹಿಂದೆ ಹುಟ್ಟಿತ್ತು. ಪುನೀತ್ ರಾಜ್‌ಕುಮಾರ್ ಸಂಸ್ಥೆ ಹುಟ್ಟುಹಾಕಿ ಚಿತ್ರ ನಿರ್ಮಾಣ ಆರಂಭಿಸಿದ್ದರು.
ಪಾರ್ವತಮ್ಮ ರಾಜ್‌ಕುಮಾರ್ (Parvathamma Rajkumar) ಅವರು ಕನ್ನಡ ಚಿತ್ರರಂಗ ಕಂಡ ಅಪ್ರತಿಮ ನಿರ್ಮಾಪಕರಲ್ಲಿ ಒಬ್ಬರು. ಅವರು 1975 ರಲ್ಲಿ 'ಶ್ರೀ ವಜ್ರೇಶ್ವರಿ ಕಂಬೈನ್ಸ್' ಹೆಸರಿನ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿದರು. ಡಾ ರಾಜ್‌ಕುಮಾರ್ (Dr Rajkumar) ಸಿನಿಮಾಗಳ ಮೂಲಕ ಹಿತಶತ್ರುಗಳಿಂದ ಆಗುತ್ತಿರುವ ಮೋಸದಿಂದ ತಪ್ಪಿಸಿಕೊಳ್ಳಲು ನಿರ್ಧರಿಸಿದ ಪಾರ್ವತಮ್ಮ ರಾಜ್‌ಕುಮಾರ್ ಅವರು ಈ ಸಂಸ್ಥೆಯನ್ನು ಪ್ರಾರಂಭಿಸಿ ತಾವೇ ತಮ್ಮ ಪತಿಯ ಸಿನಿಮಾವನ್ನು ಮಾಡಲು ಪ್ರಾರಂಭಿಸಿದರು.
ಮೂಲತಃ ಈ ಶ್ರೀ ವಜ್ರೇಶ್ವರಿ ಸಂಸ್ಥೆ ಶುರುವಾಗಿದ್ದು ಹುಬ್ಬಳ್ಳಿಯಲ್ಲಿ. ಬಳಿಕ ಅದು ಬೆಂಗಳೂರಿನ ಗಾಂಧಿನಗರಕ್ಕೆ ಬಂದು ದೊಡ್ಡದಾಗಿ ಬೆಳೆಯಿತು. ಬೆಂಗಳೂರಿನ 6ನೇ ಕ್ರಾಸ್‌ನಲ್ಲಿ ವಜ್ರೇಶ್ವರಿ ಸಂಸ್ಥೆ ಇದ್ದ ಕಾರಣ ಆ ರಸ್ತೆಗೆ 'ಶ್ರೀ ವಜ್ರೇಶ್ವರಿ ರಸ್ತೆ' ಎಂದು ಮರುನಾಮಕರಣ ಮಾಡಲಾಯ್ತು. ಬಳಿಕ ಈ ಸಂಸ್ಥೆ ತುಂಬಾ ದೊಡ್ಡಮಟ್ಟದಲ್ಲಿ ಬೆಳೆಯಿತು.
ಅಂದು, 1975ಕ್ಕೂ ಮೊದಲು ಡಾ ರಾಜ್‌ಕುಮಾರ್ ನಟಿಸಿರುವ ಬಹಳಷ್ಟು ಸಿನಿಮಾಗಳಿಂದ ಲಾಭ ಬರುತ್ತಿದ್ದರೂ ಕೂಡ ನಿರ್ಮಾಪಕರು ನಷ್ಟವನ್ನು ತೋರಿಸುತ್ತಿದ್ದರಂತೆ. ಸಿನಿಮಾ ಹೌಸ್‌ಫುಲ್ ಆಗಿ ನೂರು, ಇನ್ನೂರು ದಿನಗಳ ಪ್ರದರ್ಶನ ಕಂಡರೂ ಕೂಡ ನಿರ್ಮಾಪಕರಿಂದ ಡಾ ರಾಜ್ಕುಮಾರ್ ಅವರಿಗೆ ಹೆಚ್ಚಿನ ಸಂಭಾವನೆಯಾಗಲೀ ಅಥವಾ ಲಾಭಾಂಶವಾಗಲೀ ಬರುತ್ತಿರಲಿಲ್ಲ. ಅಷ್ಟೇ ಅಲ್ಲ, ನಿಮ್ಮ ಸಿನಿಮಾಗಳಿಂದ ನಷ್ಟ ಆಗಿದೆ ಎಂದು ಹೇಳಿ ಮತ್ತೆಮತ್ತೆ ಕಡಿಮೆ ಸಂಭಾವನೆಗೆ ರಾಜ್‌ಕುಮಾರ್ ಡೇಟ್ಸ್ ತೆಗೆದುಕೊಳ್ಳಲಾಗುತ್ತಿತ್ತು.
ಆದರೆ, ಪಾರ್ವತಮ್ಮ ರಾಜ್‌ಕುಮಾರ್ ಅವರಿಗೆ ಅವರ ಮಾತುಗಳಲ್ಲಿ ನಂಬಿಕೆ ಕಾಣಿಸುತ್ತಿರಲಿಲ್ಲ. ಸಿನಿಮಾಗಳು ಸೂಪರ್ ಹಿಟ್ ಆಗುತ್ತಿದೆ, ಚಿತ್ರಮಂದಿರಗಳು ತುಂಬಿ ತುಳುಕುತ್ತಿವೆ. ಆದರೂ ಕೂಡ ನಿರ್ಮಾಪಕರು ನಷ್ಟವಾಯ್ತು ಅಂತಿರೋದ್ಯಾಕೆ ಎಂಬ ಪ್ರಶ್ನೆ ಪಾರ್ವತಮ್ಮ ಅವರಿಗೆ ಕಾಡಿತು. ಆಗ ಈ ಸಮಸ್ಯೆಗೆ ಉತ್ತರ ಕಂಡುಕೊಳ್ಳಲು ಅವರು ತಮ್ಮದೇ ಸ್ವಂತ ನಿರ್ಮಾಣ ಸಂಸ್ಥೆ ಪ್ರಾರಂಭಿಸಿದರು. ಶ್ರೀ ವಜ್ರೇಶ್ವರಿ ಕಂಬೈನ್ಸ್ ಮೂಲಕ ಡಾ ರಾಜ್‌ಕುಮಾರ್ ನಟನೆಯಲ್ಲಿ ಮೊಟ್ಟಮೊದಲು ಮೂಡಿಬಂದ ಸಿನಿಮಾ 'ತ್ರಿಮೂರ್ತಿ'
ಡಾ ರಾಜ್‌ಕುಮಾರ್ ನಟನೆಯ ತ್ರಿಮೂರ್ತಿ ಸಿನಿಮಾ ಅಷ್ಟಾಗಿ ಓಡಲಿಲ್ಲ. ಆದರೆ 1978ರಲ್ಲಿ ತೆರೆಗೆ ಬಂದಿದ್ದ 'ಶಂಕರ್ ಗುರು' ಚಿತ್ರವು ಸಿಕ್ಕಾಪಟ್ಟೆ ಹಿಟ್ ಆಯ್ತು. ಅಂದಿನಿಂದ ಶ್ರ ವಜ್ರೇಶ್ವರಿ ಸಂಸ್ಥೆಯ ಯಶಸ್ಸನಿ ಓಟ ಶುರುವಾಗಿ ಅದು ಇಂದು ಬರೋಬ್ಬರು 50 ವರ್ಷಗಳನ್ನು ಪೂರೈಸಿದೆ. ಶ್ರೀ ದಾಕ್ಷಾಯಣಿ ಕಂಬೈನ್ಸ್, ಶ್ರೀ ಪೂರ್ಣಿಮಾ ಎಂಟರ್‌ಪ್ರೈಸಸ್ ಎಂಬ ಇನ್ನೆರಡು ಹೆಸರುಗಳಿಂದಲೂ ಪಾರ್ವತಮ್ಮ ರಾಜ್‌ಕುಮಾರ್ ಅವರು ಸಿನಿಮಾ ನಿರ್ಮಾಣ ಮಾಡಿದ್ದರು.
1975ರ ಬಳಿಕ ಡಾ ರಾಜ್‌ಕುಮಾರ್ ಹಾಗೂಅವರ ಮಕ್ಕಳಾದ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಸಿನಿಮಾಗಳು ಅವರ ಸ್ವಂತ ನಿರ್ಮಾಣದಿಂದಲೇ ಬಂದಿವೆ ಎಂಬುದು ಗಮನಿಸಬೇಕಾದ ಅಂಶ. ಡಾ. ರಾಜ್‌ಕುಮಾರ್ ನಟನೆಯ 'ಸಂಪತ್ತಿಗೆ ಸವಾಲ್' ಸಿನಿಮಾ ರಾಜ್ಯಾದ್ಯಂತ ಭರ್ಜರಿ ಯಶಸ್ಸು ಗಳಿಸಿತ್ತು. ಆದರೂ ನಿರ್ಮಾಪಕರು ತಮಗೆ ನಷ್ಟವಾಗಿದೆ ಎಂದು ಹೇಳಿಕೊಂಡು ಓಡಾಡುತ್ತಿದ್ದರು. ಇದರಿಂದ ನೊಂದ ಪಾರ್ವತಮ್ಮ ರಾಜ್‌ಕುಮಾರ್ ಅವರು, 'ತಾವೇ ಸ್ವತಃ ಸಿನಿಮಾ ನಿರ್ಮಾಣ ಮಾಡೋಣ, ಲಾಭ, ನಷ್ಟ ನಮಗೆ ಇರಲಿ' ಎಂದು ನಿರ್ಧರಿಸಿದ್ದರು.
ಆಗ ಹುಟ್ಟಿದ್ದೇ ಶ್ರೀ ವಜ್ರೇಶ್ವರಿ ಕಂಬೈನ್ಸ್ ಇದೀಗ 50 ವರ್ಷ ಪೂರೈಸಿದೆ. ಬರೋಬ್ಬರಿ 86 ಸಿನಿಮಾಗಳನ್ನು ಕೊಟ್ಟ ಶ್ರೀ ವಜ್ರೇಶ್ವರಿ ಕಂಬೈನ್ಸ್ ಸಹೋದರ ಸಂಸ್ಥೆ 'ಪಿಆರ್‌ಕೆ ಪ್ರೊಡಕ್ಷನ್' 8 ವರ್ಷಗಳ ಹಿಂದೆ ಹುಟ್ಟಿತ್ತು. ಪುನೀತ್ ರಾಜ್‌ಕುಮಾರ್ ಸಂಸ್ಥೆ ಹುಟ್ಟುಹಾಕಿ ಚಿತ್ರ ನಿರ್ಮಾಣ ಆರಂಭಿಸಿದ್ದರು. ಪಾರ್ವತಮ್ಮ ರಾಜ್‌ಕುಮಾರ್ ನಿಧನದ ಬಳಿಕ ಈಗ ಪಿಆರ್‌ಕೆ ಸಂಸ್ಥೆಯ ಮೂಲಕ ರಾಜ್‌ಕುಮಾರ್ ಕುಟುಂಬದ ಸಿನಿಮಾಗಳು ಮೂಡಿಬರುತ್ತಿವೆ.


