ಅಜಯ್ ರಾವ್ ಅವರು ಹೆಚ್ಚಾಗಿ 'ಕೃಷ್ಣ' ಹೆಸರಿನ ಸಿನಿಮಾಗಳಲ್ಲಿ ನಟಿಸಿದ್ದರಿಂದ ಅವರಿಗೆ ‘ಕೃಷ್ಣ ಅಜಯ್ ರಾವ್’ ಎಂಬ ಮರುನಾಮಕರಣವೂ ಆಗಿದೆ. ಅದೆಷ್ಟೋ ಜನರಿಗೆ ಕೃಷ್ಣ ಆಜಯ್ ರಾವ್ ಎಂದರೇನೇ ಗೊತ್ತಾಗೋದು ಎಂಬಷ್ಟರ ಮಟ್ಟಿಗೆ ಅವರು ಕೃಷ್ಣನ ಪಾತ್ರದ ಮೂಲಕ ಪ್ರಸಿದ್ಧರಾಗಿದ್ದಾರೆ. ಇದೀಗ, ದಾಂಪತ್ಯದಲ್ಲಿ ಬಿರುಕು

ಸ್ಯಾಂಡಲ್‌ವುಡ್‌ ನಟ ಅಜಯ್ ರಾವ್ (Ajay Rao) ಮತ್ತು ಸ್ವಪ್ನ ರಾವ್ ದಂಪತಿ ವಿಚ್ಛೇದನದ ಬಗ್ಗೆ ಯೋಚಿಸಿ ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿ ಇಂದು ಹರಡಿದೆ. 11 ವರ್ಷಗಳ ದಾಂಪತ್ಯ ಜೀವನದ ನಂತರ ಬೇರೆಯಾಗಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ನಟ ಅಜಯ್ ರಾವ್ ಬೇರೆ ರೀತಿಯಲ್ಲಿ ಸ್ಪಷ್ಟೀಕರಣ ಕೊಟ್ಟಿದ್ದಾರೆ.

'ಇದು ನನ್ನ ಪರ್ಸನಲ್ ವಿಷ್ಯ, ನಾವು ಇದನ್ನ ಸಾಲ್ವ್ ಮಾಡಿಕೊಳ್ತೀವಿ.. ನಾನು ನನ್ನದೇ ಅದ ಡಿಗ್ನಿಫ್ಯ್ಡ್ ರೀತಿಯಲ್ಲಿ ಇದನ್ನ ಹ್ಯಾಂಡಲ್ ಮಾಡಿ ಸಾಲ್ವ್ ಮಾಡಿಕೊಳ್ತೀನಿ. ನಾನು ಈಗ ಈ ಬಗ್ಗೆ ರಿಯಾಕ್ಟ್ ಮಾಡಿ ನನ್ನ ಮಗಳ ಭವಿಷ್ಯಕ್ಕೆ ಇದು ತೊಂದರೆ ಆಗೋದು ಬೇಡ. ನಮ್ಮ ಪ್ರೈವಸಿಯನ್ನ ಗೌರವಿಸಿ' ಎಂದು ಅಜಯ್ ರಾವ್ ಹೇಳಿದ್ದಾರೆ. ಈ ಮೂಲಕ ಅವರು ಸುದ್ದಿಯನ್ನು ಅಲ್ಲಗಳೆಯದೇ, ದಯವಿಟ್ಟು ಇಲ್ಲಿಗೇ ನಿಲ್ಲಿಸಿಬಿಡಿ' ಎಂದು ವಿನಂತಿಸಿಕೊಂಡಿದ್ದಾರೆ.

ಇತ್ತೀಚೆಗೆ 'ಯುದ್ಧಕಾಂಡ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಅಜಯ್‌ ರಾವ್‌ ಹಾಗೂ ಪತ್ನಿ ಸ್ವಪ್ನ ರಾವ್‌ ಬೇರೆ ಬೇರೆ ಆಗುವ ನಿರ್ಧಾರ ಮಾಡಿದ್ದಾರೆ. ಯುದ್ಧಕಾಂಡ ಸಿನಿಮಾದಲ್ಲಿ ನಟರಾಗಿ ಮಾತ್ರವಲ್ಲ, ನಿರ್ಮಾಣವನ್ನೂ ಮಾಡಿದ್ದ ಅಜಯ್‌ ರಾವ್‌ ಅದರಲ್ಲಿ ಯಶಸ್ಸು ಕಂಡುಕೊಂಡಿರಲಿಲ್ಲ. ಆ ವೇಳೆ ನೀಡಿದ ಸಂದರ್ಶನದ ವೇಳೆ ತಮ್ಮ ಮದುವೆ-ಸಂಸಾರದ ಬಗ್ಗೆಯೂ ಮಾತನಾಡಿದ್ದರು. ತಮ್ಮ ಯಶಸ್ಸು ಹಾಗೂ ವೈಫಲ್ಯದ ಲೈಫ್ ಜರ್ನಿ ಬಗ್ಗೆ ಮಾತನಾಡಿದ್ದರು. ಮುಹೂರ್ತದ ನಂಬಿಕೆಗಳ ಬಗ್ಗೆ, ಆ ಬಗ್ಗೆ ತಮ್ಮ ದೃಷ್ಟಿಕೋನದ ಬಗ್ಗೆಯೂ ತಿಳಿಸಿದ್ದರು.

'ನಾನು ಮದುವೆ ಆಗಿದ್ದೇ ತಪ್ಪಾದ ಮಹೂರ್ತದಲ್ಲಿ ಎನ್ನಬೇಕು. ನನ್ನ ಪ್ರೊಡಕ್ಷನ್‌ ಮೂಲಕ ಬಂದ 'ಕೃಷ್ಣ ಲೀಲಾ' ಸಿನಿಮಾ ಮಾಡಿದ್ದು ಕೂಡ ತಪ್ಪಾದ ಮಹೂರ್ತದಲ್ಲಿ ಎಂದು ಹೇಳಿದ್ದರು. ನನ್ನ 'ಯುದ್ಧಕಾಂಡ' ಸಿನಿಮಾ ಮಾಡಿದ್ದು ಯಾವ ಮುಹೂರ್ತ ಅನ್ನೋದೇ ಗೊತ್ತಿಲ್ಲ. 'ಈ ಸಿನಿಮಾ ಡಿಸಾಸ್ಟರ್ ಕಣೋ.. ಕೆಟ್ಟ ಮಹೂರ್ತದಲ್ಲಿ ವಿವಾಹ ಆಗಿದ್ದೀಯಾ, ಆದರೆ ನಿನ್ನ ಮದುವೆ ಒಂದು ವರ್ಷ ಕೂಡ ಬರೋದಿಲ್ಲ, ಡಿವೋರ್ಸ್‌ ಆಗುತ್ತದೆ' ಎಂದು ಜ್ಯೋತಿಷಿಯೊಬ್ಬರು ಹಿಂದೆ ಹೇಳಿದ್ದರು ಎಂದು ಅಜಯ್‌ ರಾವ್‌ ಸಂದರ್ಶನದಲ್ಲಿ ತಿಳಿಸಿದ್ದರು.

2014ರಲ್ಲಿ ಪ್ರೀತಿಸಿ ಮದುವೆಯಾಗಿದ್ದ ಅಜಯ್‌ ರಾವ್‌ ಹಾಗೂ ಸ್ವಪ್ನ ರಾವ್‌ ಜೋಡಿ, 11 ವರ್ಷಗಳ ಕಾಲ ಜೊತೆಯಲ್ಲಿದ್ದರು. ಜ್ಯೋತಿಷಿ ಹೇಳಿದಂತೆ ಒಂದೇ ವರ್ಷಕ್ಕೆ ವಿಚ್ಛೇದನ ಆಗದೇ ಇದ್ದರೂ, ಈಗ ಸಂಸಾರದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿಯಂತೂ ಬಂದಿದೆ. ಆದರೆ, ಆ ಬಗ್ಗೆ ನಟ ಅಜಯ್ ರಾವ್, ಪತ್ನಿ ಸ್ವಪ್ನಾ ರಾವ್ ಅಥವಾ ಇಬ್ಬರು ಕುಟುಂಬಸ್ಥರು ಯಾವುದೇ ಕ್ಲಾರಿಟಿ ನೀಡಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.

'ನಾನು ಯಾವ ಮುಹೂರ್ತವನ್ನೂ ನೋಡೋದಿಲ್ಲ. ನನಗೆ ಜ್ಯೋತಿಷ್ಯ ಬರುತ್ತದೆ. ಕೆಲಸ ಮಾಡಿದ ಬಳಿಕ ನೋಡಿದಾಗ ಅದು ತಪ್ಪಾದ ಮುಹೂರ್ತ ಅಂತ ಗೊತ್ತಾಯ್ತು. 'ಕೃಷ್ಣಾರ್ಪಣಮಸ್ತು' ಅಂದೆ ಅಷ್ಟೇ. ಅವನೇ ಮಾಡಿಸ್ತಾ ಇದಾನೆ’ ಎಂದು ಅಜಯ್‌ ರಾವ್‌ ಹೇಳಿದ್ದರು. ಕೆಲ ವರ್ಷಗಳ ಕಾಲ ಪ್ರೀತಿಸಿದ್ದ ಜೋಡಿ 2014ರಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದರು. 11 ವರ್ಷಗಳ ಕಾಲ ನಡೆಸಿದ್ದ ಸಂಸಾರವೀಗ ಬೇರೆ ಬೇರೆ ಆಗುತ್ತಿದೆ ಎನ್ನಲಾಗ್ತಿದೆ. ಈ ಸುದ್ದಿ ಅದೆಷ್ಟು ನಿಜವೋ ಗೊತ್ತಾಗುತ್ತಿಲ್ಲ!

ಕೆಲ ತಿಂಗಳ ಹಿಂದ ಬಿಡುಗಡೆಯಾಗಿದ್ದ ಯುದ್ಧಕಾಂಡ ಸಿನಿಮಾದ ಮೇಲೆ ಅಜಯ್‌ ರಾವ್‌ ಭಾರೀ ನಿರೀಕ್ಷೆ ಇರಿಸಿಕೊಂಡಿದ್ದರು. ಆದರೆ, ಸಿನಿಮಾ ನಿರೀಕ್ಷೆಗೆ ತಕ್ಕಂತೆ ಗಲ್ಲಾಪೆಟ್ಟಿಗೆಯಲ್ಲಿ ಸದ್ಧು ಮಾಡಿರಲಿಲ್ಲ. ಈ ಸಿನಿಮಾಕ್ಕೆ ಸಾಕಷ್ಟು ಹಣ ಸುರಿದಿದ್ದಾಗಿ ಅಜಯ್‌ ರಾವ್‌ ಹೇಳಿದ್ದರು. ಅಲ್ಲದೆ, ತಮ್ಮ ಇಷ್ಟದ ಬಿಎಂಡಬ್ಲ್ಯು ಕಾರು ಕೂಡ ಮಾರಾಟ ಮಾಡಿದ್ದರು. ಆ ಸುದ್ದಿ ಭಾರೀ ವೈರಲ್‌ ಆಗಿತ್ತು.

'ಎಕ್ಸ್‌ಕ್ಯೂಸ್ ಮಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟ ಅಜಯ್ ರಾವ್ ಅವರು ಬಳಿಕ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟಿ ಪೂಜಾ ಗಾಧಿಯ ಜೊತೆ ‘ತಾಜ್‌ ಮಹಲ್’ ಚಿತ್ರದಲ್ಲಿ ಸಹ ಅಜಯ್ ರಾವ್ ಅವರು ನಾಯಕನಟರಾಗಿದ್ದರು. ಈ ಚಿತ್ರ ಸೂಪರ್ ಹಿಟ್ ಆಗಿದೆ. ಕೃಷ್ಣ ಸೇರಿದಂತೆ ಅಜಯ್ ರಾವ್ ಅಚರ ನಟಿಸಿದ ಕನ್ನಡ ಚಿತ್ರಗಳ ಲಿಸ್ಟ್ ಸಾಕಷ್ಟು ದೊಡ್ಡದಿದೆ. ಇತ್ತೀಚೆಗಷ್ಟೇ ಅಜಯ್ ರಾವ್ ನಿರ್ಮಾಣ ಹಾಗೂ ನಟನೆಯ ‘ಯುದ್ಧಕಾಂಡ’ ಸಿನಿಮಾ ಬಿಡುಗಡೆ ಆಗಿತ್ತು.

ನಟ-ನಿರ್ಮಾಪಕ ಅಜಯ್ ರಾವ್ ಅವರು ಹೆಚ್ಚಾಗಿ 'ಕೃಷ್ಣ' ಹೆಸರಿನ ಸಿನಿಮಾಗಳಲ್ಲಿ ನಟಿಸಿದ್ದರಿಂದ ಅವರಿಗೆ ‘ಕೃಷ್ಣ ಅಜಯ್ ರಾವ್’ ಎಂಬ ಮರುನಾಮಕರಣವೂ ಸಿಕ್ಕಿತ್ತು. ಅದೆಷ್ಟೋ ಜನರಿಗೆ ಕೃಷ್ಣ ಆಜಯ್ ರಾವ್ ಎಂದರೇನೇ ಗೊತ್ತಾಗೋದು ಎಂಬಷ್ಟರ ಮಟ್ಟಿಗೆ ನಟ ಅಜಯ್ ರಾವ್ ಅವರು ಕೃಷ್ಣನ ಪಾತ್ರದ ಮೂಲಕ ಪ್ರಸಿದ್ಧರಾಗಿದ್ದಾರೆ. ಇದೀಗ, ದಾಂಪತ್ಯದಲ್ಲಿ ಮೂಡಿದ ಬಿರುಕು ಮೂಡಿದೆ ಎಂಬಸುದ್ದಿ ಹಬ್ಬಿದೆ. ಅದಕ್ಕೆ ಸ್ಪಷ್ಟೀಕರಣವನ್ನು ಅವರೇ ಕೊಡಬೇಕಿದೆ.