ಇದೇ ಉತ್ಸಾಹದಲ್ಲಿ ಅವರು ಮತ್ತೊಂದಷ್ಟುಬೇಟೆ ಕತೆಗಳನ್ನು ಬರೆದರು. ಮತ್ತೊಂದೆರಡು ಬೇಟೆ ಕತೆಗಳ ಸಂಕಲನವನ್ನು ಹೊರತಂದು ಕಾರಂತರಿಗೆ ಕಳಿಸಿಕೊಟ್ಟರು. ಕಾರಂತರಿಂದ ಮತ್ತೆ ಒಂದು ಅಂಚೆ ಕಾರ್ಡು ಬಂತು. ಸತ್ತ ಹುಲಿಯನ್ನು ಎಷ್ಟುಸಲ ಹೊಡೆಯುತ್ತೀರಿ? ಅನ್ನೋ ಒಂದೇ ಒಂದು ಸಾಲು. ಆಮೇಲಿಂದ ಕತೆಗಾರರು ಅಂಚೆಕಾರ್ಡು ತೋರಿಸುವ ಸಾಹಸಕ್ಕೆ ಹೋಗಲಿಲ್ಲ.

ಒಬ್ಬರು ಬೇಟೆ ಕತೆಗಾರರಿದ್ದರು. ಅವರ ಬೇಟೆಕತೆಗಳ ಮೊದಲ ಸಂಕಲನವನ್ನು ಅವರು ಶಿವರಾಮ ಕಾರಂತರಿಗೆ ಕಳಿಸಿಕೊಟ್ಟಿದ್ದರು. ಕಾರಂತರು ಬಹಳ ಚೆನ್ನಾಗಿದೆ ಅಂತ ಒಂದು ಅಂಚೆಕಾರ್ಡಲ್ಲಿ ಬರೆದು ಕಳಿಸಿದ್ದರು. ಆಮೇಲೆ ಆ ಬೇಟೆ ಕತೆಗಾರರು ದಿನಾ ಆ ಅಂಚೆಕಾರ್ಡನ್ನು ಎಲ್ಲರಿಗೂ ತೋರಿಸಿಕೊಂಡು ಬರುತ್ತಿದ್ದರು. ಹೆಂಗೆ ಕಾರಂತರು ಚೆನ್ನಾಗಿದ್ದಾರೆ ಅಂದಿದ್ದಾರೆ ಅಂತ ಖುಷಿಯೋ ಖುಷಿ. ಒಂದು ಸಲ ತೋರಿಸಿದವರಿಗೆ ಹತ್ತು ಸಲ ತೋರಿಸುತ್ತಿದ್ದರು.

ಇದೇ ಉತ್ಸಾಹದಲ್ಲಿ ಅವರು ಮತ್ತೊಂದಷ್ಟುಬೇಟೆ ಕತೆಗಳನ್ನು ಬರೆದರು. ಮತ್ತೊಂದೆರಡು ಬೇಟೆ ಕತೆಗಳ ಸಂಕಲನವನ್ನು ಹೊರತಂದು ಕಾರಂತರಿಗೆ ಕಳಿಸಿಕೊಟ್ಟರು. ಕಾರಂತರಿಂದ ಮತ್ತೆ ಒಂದು ಅಂಚೆ ಕಾರ್ಡು ಬಂತು. ಸತ್ತ ಹುಲಿಯನ್ನು ಎಷ್ಟುಸಲ ಹೊಡೆಯುತ್ತೀರಿ? ಅನ್ನೋ ಒಂದೇ ಒಂದು ಸಾಲು. ಆಮೇಲಿಂದ ಕತೆಗಾರರು ಅಂಚೆಕಾರ್ಡು ತೋರಿಸುವ ಸಾಹಸಕ್ಕೆ ಹೋಗಲಿಲ್ಲ.
ಪಾರ್ಟ್‌ 2 ಸಿನಿಮಾದ ಬಗ್ಗೆ ಹೇಳುವಾಗಲೂ ಕಾರಂತರ ಮಾತನ್ನು ನೆನಪಿಸಿಕೊಳ್ಳಬಹುದು. ಇದೊಂದು ದೆವ್ವದ ಕತೆ. ನೀವು ಈಗಾಗಲೇ ಕಾಡಲ್ಲಿ, ಹುಣಿಸೆ ಮರದಲ್ಲಿ ನೋಡಿರಬಹುದಾದ ಒಂದು ದೆವ್ವ ಇಲ್ಲೂ ಇದೆ. ವರ್ಷಗಳ ಹಿಂದೆ 6​-5=2 ಸಿನಿಮಾ ಬಂದಾಗ ಜನ ಬೆಚ್ಚಿ ಬಿದ್ದಿದ್ದರು. ಕಾಡಲ್ಲೊಂದು ವೀಡಿಯೋ ಫೋಟೇಜ್‌ ಸಿಕ್ಕಿತ್ತಂತೆ ಅನ್ನೋದೇ ಜನರ ಕುತೂಹಲಕ್ಕೆ ಕಾರಣವಾಗಿತ್ತು. ಈ ಪಾರ್ಟ್‌ 2 ಸಿನಿಮಾ ಕೂಡ ಅದೇ ಥರದ ಸಿನಿಮಾ ಅನ್ನೋ ಊಹೆ ಕೆಲವರಲ್ಲಿತ್ತು.

ಅದಕ್ಕೆ ತಕ್ಕಂತೆ ಸಿನಿಮಾದ ಪೋಸ್ಟರ್‌ಗಳಲ್ಲೂ 6​-5=2 ಸಿನಿಮಾದ ಹೆಸರಿತ್ತು. ಹಾಗಾಗಿ ಅದನ್ನೇ ನಂಬಿ­­ಕೊಂಡು ದೆವ್ವವನ್ನು ಹುಡುಕಿಕೊಂಡು ಪಾರ್ಟ್‌2 ಸಿನಿಮಾದಲ್ಲಿರುವ ಕಾಡಿಗೆ ಹೋದಿರೋ ನಿಮಗೆ ದೆವ್ವ ಸಿಗುವುದು ಸ್ವಲ್ಪ ಲೇಟು. ಅದರ ಬದಲು ಕಾಡಿನಲ್ಲಿರುವ ಭರಪೂರ ಪೊದೆ, ಗಿಡ, ಬಳ್ಳಿಯನ್ನು ರಾತ್ರಿ ಹೊತ್ತಲ್ಲಿ ನೋಡ­ಬಹುದು. ಕಾಡು ರಾತ್ರಿ ಹೊತ್ತಲ್ಲಿ ಹೇಗೆ ಕಾಣಿಸುತ್ತದೆ ಅನ್ನೋದರ ಬಗ್ಗೆ ಡೀಟೇಲಾಗಿ ಅಧ್ಯಯನ ನಡೆಸ­ಬಹುದು. ಅಷ್ಟುಸಲ ನಟ, ನಟಿಯ­ರನ್ನು ಕಾಡಿನ ಸುತ್ತಲೂ ಓಡಾಡಿಸುತ್ತಾರೆ ನಿರ್ದೇಶಕ ಬುದ್ಧದೇವ್‌. ಇಲ್ಲಿ ಸೌಂಡು ಬಂದರೆ ಅಲ್ಲಿಗೆ. ಅಲ್ಲಿ ಸೌಂಡು ಬಂದರೆ ಇಲ್ಲಿಗೆ. ಹಾಗಾಗಿ ಈ ಕಾಡಿಗೆ ಹೋಗುವವರು ನಟರ ಜೊತೆ ಆಚೀಚೆ ಓಡಾಡಲು ಜತೆಯಲ್ಲಿ ಸ್ವಲ್ಪ ಗ್ಲುಕೋಸ್‌ ಇಟ್ಟುಕೊಂಡಿರುವುದು ಒಳ್ಳೆಯದು. 

ಮುಖ್ಯವಾದ ವಿಷಯವೆಂದರೆ ಈ ಓಡಾಟದಲ್ಲಿ ನಿರ್ದೇಶಕ ಮತ್ತು ಚಿತ್ರತಂಡದ ಶ್ರಮ ಎದ್ದು ಕಾಣುತ್ತದೆ. ಅವರ ಕಷ್ಟಗಳು ಎಷ್ಟುಮನಸ್ಸಿಗೆ ತಾಕುತ್ತದೆ ಎಂದರೆ ಕಡೆಗೆ ದೆವ್ವ ಪ್ರತ್ಯಕ್ಷವಾದರೂ ಭಯವಾಗುವುದೇ ಇಲ್ಲ. ಅಂದಹಾಗೆ ಈ ದೆವ್ವದ ಸಿನಿಮಾದಲ್ಲಿ ನಟಿಸಿದ ನಟರ ಧೈರ್ಯವನ್ನು ಮೆಚ್ಚಲೇಬೇಕು.

-ರಾಜೇಶ್ ಶೆಟ್ಟಿ, ಕನ್ನಡಪ್ರಭ