ಗುಜರಾತ್ ಚುನಾವಣೆ ಬಳಿಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ವಿವಾದಿತ ‘ಪದ್ಮಾವತಿ’ ಚಿತ್ರಕ್ಕೆ ಸೆನ್ಸಾರ್ ಪ್ರಮಾಣ ಪತ್ರ ಶೀಘ್ರ ಲಭ್ಯವಾಗುತ್ತದೆ ಎಂಬ ಆಶಾಭಾವನೆಯಲ್ಲಿದ್ದ ಚಿತ್ರ ತಂಡಕ್ಕೆ ಭಾರಿ ನಿರಾಸೆಯಾಗಿದೆ.

ಮುಂಬೈ(ಡಿ.22): ಗುಜರಾತ್ ಚುನಾವಣೆ ಬಳಿಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ವಿವಾದಿತ ‘ಪದ್ಮಾವತಿ’ ಚಿತ್ರಕ್ಕೆ ಸೆನ್ಸಾರ್ ಪ್ರಮಾಣ ಪತ್ರ ಶೀಘ್ರ ಲಭ್ಯವಾಗುತ್ತದೆ ಎಂಬ ಆಶಾಭಾವನೆಯಲ್ಲಿದ್ದ ಚಿತ್ರ ತಂಡಕ್ಕೆ ಭಾರಿ ನಿರಾಸೆಯಾಗಿದೆ. ಸೆನ್ಸಾರ್ ಪ್ರಮಾಣ ಪತ್ರ ನೀಡುವ ಸಂಬಂಧವಾಗಿ ಸಿಬಿಎಫ್‌ಸಿ ‘ಪದ್ಮಾವತಿ’ ಚಿತ್ರ ವೀಕ್ಷಣೆಗೆ ಇತಿಹಾಸ ತಜ್ಞರ ಸಮಿತಿ ನೇಮಕ ಮಾಡುವ ಸಾಧ್ಯತೆಯಿದೆ.

ಇತಿಹಾಸ ಘಟನೆಗಳನ್ನಾಧರಿಸಿ ಪದ್ಮಾವತಿ ಚಿತ್ರ ನಿರ್ಮಿಸಲಾಗಿದೆ ಎಂದು ಚಿತ್ರ ತಂಡ ಪ್ರಮಾಣ ಪತ್ರ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಇತಿಹಾಸ ತಜ್ಞರ ಸಮಿತಿ ರಚನೆ ಮಾಡಲು ಸಿಬಿಎಫ್‌ಸಿ ತೀರ್ಮಾನಿಸಿದೆ ಎಂದು ಹೇಳಲಾಗಿದೆ. ಹಾಗಾಗಿ ಮಾರ್ಚ್ ಅಥವಾ ಏಪ್ರಿಲ್ ನಲ್ಲಿ ಪದ್ಮಾವತಿ ಚಿತ್ರ ಬಿಡುಗಡೆಯಾಗಬಹುದು ಎಂದು ಮೂಲಗಳು ತಿಳಿಸಿವೆ.