ದರ್ಶನ್ ಅಭಿಮಾನಿಗಳ ಕೋಪ ತಣ್ಣಗಾಗಿಸಿದ ಪ್ರಥಮ್ | ನಟ ಭಯಂಕರ ಪೋಸ್ಟರ್ ರಿಲೀಸ್ | ದರ್ಶನ್‌ಗಿಂತ ದೊಡ್ಡ ಸ್ಟಾರ್‌ರಿಂದ ಬಿಡುಗಡೆ 

ಬೆಂಗಳೂರು (ಫೆ. 15): ಬಿಗ್ ಬಾಸ್ ಖ್ಯಾತಿಯ ಪ್ರಥಮ್ ತಮ್ಮ ನಟ ಭಯಂಕರ ಚಿತ್ರದ ಪೋಸ್ಟರನ್ನು ದರ್ಶನ್ ಗಿಂತ ದೊಡ್ಡಸ್ಟಾರ್ ಬಂದು ರಿಲೀಸ್ ಮಾಡ್ತಾರೆಂದು ಹೇಳಿ ಡಿ ಬಾಸ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದು ಗೊತ್ತೇ ಇದೆ. ಇದೀಗ ತಮ್ಮ ಮಾತಿನಂತೆ ದರ್ಶನ್ ಗಿಂತ ದೊಡ್ಡ ಸ್ಟಾರ್ ಕರೆದುಕೊಂಡು ಬಂದು ಡಿ ಬಾಸ್ ಅಭಿಮಾನಿಗಳ ಕೋಪವನ್ನು ತಣ್ಣಗೆ ಮಾಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದರ್ಶನ್‌ಗೆ ಅವಮಾನ ಮಾಡಿದ್ರಾ ಬಿಗ್‌ಬಾಸ್ ಪ್ರಥಮ್ ?

ದರ್ಶನ್ ತಾಯಿ ಮೀನಾ ತೂಗುದೀಪ್ ರವರನ್ನು ಕರೆದುಕೊಂಡು ಬಂದು ನಟಭಯಂಕರ ಪೋಸ್ಟರನ್ನು ರಿಲೀಸ್ ಮಾಡಿದ್ದಾರೆ. ಪ್ರಥಮ್ ನನ್ನ ಮಗನಿದ್ದಂತೆ ಎಂದು ಮೀನಾ ತೂಗುದೀಪ್ ಆಶೀರ್ವಾದ ಮಾಡಿದ್ದಾರೆ. 

ನಟಭಯಂಕರ ಚಿತ್ರದಲ್ಲಿ ಪ್ರಥಮ್ ನಾಯಕನಾಗಿ ನಟಿಸಿದ್ದಾರೆ. ನಿರ್ದೇಶನವನ್ನೂ ಇವರೇ ಮಾಡಿದ್ದಾರೆ.