ಬೆಂಗಳೂರು : ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಹೋದಲ್ಲೆಲ್ಲಾ ಏನೋ ಮಾತಾಡೋಕೆ ಹೋಗಿ ಇನ್ನೇನೋ ಆಗಿ ಎಡವಟ್ಟಾಗುವುದೇ ಜಾಸ್ತಿ. ದರ್ಶನ್ ವಿಚಾರವಾಗಿ ಹೀಗೆ ಎಡವಟ್ಟು ಮಾಡಿಕೊಂಡಿದ್ದಾರೆ. 

ಪ್ರಥಮ್ ಹಾಗೂ ದರ್ಶನ್ ಆತ್ಮೀಯ ಸ್ನೇಹಿತರು. ಪ್ರಥಮ್ ಅಭಿನಯದ ’ಎಂಎಲ್ ಎ’ಚಿತ್ರದ ಆಡಿಯೋವನ್ನು ಪ್ರಥಮ್ ಲಾಂಚ್ ಮಾಡಿದ್ದರು. ಇದೀಗ ’ನಟ ಭಯಂಕರ’ ಚಿತ್ರದ ಪೋಸ್ಟರ್ ರಿಲೀಸ್ ಮಾಡಲು ದರ್ಶನ್ ಗಿಂತ ದೊಡ್ಡ ಸ್ಟಾರ್ ಬರ್ತಾರೆ ಎಂದು ಹೇಳಿ ಡಿ ಬಾಸ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 

 

ಪ್ರಚಾರಕ್ಕಾಗಿ ಪ್ರಥಮ್ ಗಿಮಿಕ್ ಮಾಡೋದ್ರಲ್ಲಿ ಎತ್ತಿದ ಕೈ. ದರ್ಶನ್ ಗಿಂತ ದೊಡ್ಡ ಸ್ಟಾರ್ ಯಾರು ಎಂಬುದು ಕುತೂಹಲ ಮೂಡಿಸಿದೆ. ಅಂದಹಾಗೆ ’ನಟ ಭಯಂಕರ’ ಪೋಸ್ಟರ್ ನಾಳೆ ರಿಲೀಸಾಗುತ್ತಿದೆ.