2026ರಲ್ಲಿ ಭರ್ಜರಿ ಸೌಂಡ್ ಮಾಡಿದ್ದ ಹಾರಾರ್ ಸಿನಿಮಾ ಒಂದು ಒಟಿಟಿಗೆ ಬರುತ್ತಿದೆ. ಜಿಯೋ ಹಾಟ್‌ ಸ್ಟಾರ್ ಈ ಎಕ್ಸೈಟಿಂಗ್ ಬ್ರೇಕಿಂಗ್ ನ್ಯೂಸ್ ನೀಡಿದೆ. ಸಿನಿಮಾ ರಸಿಕರು ಆ ದಿನಕ್ಕಾಗಿ ಕಾಯುತ್ತಿದ್ದಾರೆ.

ನೀವು ಏನಾದರೂ ಹಾರರ್ ಸಿನಿಮಾ ಇಷ್ಟಪಡೋರಾಗಿದ್ದಾರೆ ನಿಜಕ್ಕೂ ಇದು ಗುಡ್‌ನ್ಯೂಸ್. 2026ರಲ್ಲಿ ಭರ್ಜರಿ ಕಲೆಕ್ಷನ ಮಾಡಿದ್ದ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ಒಂದು ಒಟಿಟಿಗೆ ಬರುತ್ತಿದೆ. ಥ್ರಿಲ್ಲಿಂಗ್ ಆಗಿರುವ ಸಿನಿಮಾ ಹೆಸರು ಕೇಳುತ್ತಿದ್ದಂತೆಯೇ ಸಿನಿಮಾ ರಸಿಕರು ಎಕ್ಸೈಟ್ ಆಗಿದ್ದಾರೆ.

ಯಾವುದು ಸಿನಿಮಾ?

ಅಂದ್ಹಾಗೆ ಅದು ಅಮೆರಿಕ ಖ್ಯಾತ ನಿರ್ದೇಶಕ ಕರಿ ಬಾರ್ಕರ್ ಅವರ ಚಿತ್ರವಾಗಿದೆ. ಇವರು ಖ್ಯಾತ ಬರಹಗಾರ, ಯೂಟ್ಯೂಬರ್ ಮತ್ತು ಸಾಹಿತಿ ಕೂಡ ಹೌದು. ಇದೇ ಕರಿ ಬಾರ್ಕರ್ ಆಕ್ಷನ್ ಕಟ್ ಹೇಳಿರುವ ಸೈಕಲಾಜಿಕಲ್ ಥ್ರಿಲ್ಲರ್ 'ಒಬ್ಸೆಷನ್' OTT ಪ್ಲಾಟ್‌ಫಾರ್ಮ್‌ಗೆ ಬರುತ್ತಿದ್ದಾರೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ಹೆದರಿಸಿದ್ದ ಈ ಸಿನಿಮಾ ಈಗ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸ್ಟ್ರೀಮ್ ಮಾಡಲು ಸಿದ್ಧವಾಗಿದೆ.

ಚಿತ್ರದ ವಿಶೇಷತೆ ಏನು ಅಂತಾ ನೋಡೋದಾದ್ರೆ.. ಒಬ್ಸೆಷನ್ ಮೇ 2026 ರಲ್ಲಿ ರಿಲೀಸ್ ಆಯಿತು. ರಿಲೀಸ್ ಬೆನ್ನಲ್ಲೇ ಪ್ರಪಂಚದಾದ್ಯಂತ ಸಂಚಲನ ಸೃಷ್ಟಿಸಿತು. 2026ರಲ್ಲಿ ಹಿಟ್ ಕಂಡ ಕಮರ್ಷಿಯಲ್ ಸಿನಿಮಾಗಳಲ್ಲಿ ಅತ್ಯಧಿಕ ಹಣ ಬಾಚಿದ ಸಿನಿಮಾಗಳಲ್ಲಿ ಇದೂ ಒಂದಾಗಿದೆ. ಇದು ಕೇವಲ ಅಮೆರಿಕ ಮಾತ್ರವಲ್ಲ ಭಾರತ ಸೇರಿದಂತೆ ಜಗತ್ತಿನಾದ್ಯಂತ ತುಂಬಾ ಪ್ರಭಾವ ಬೀರಿತ್ತು. ಅದೇ ಸಿನಿಮಾ ಈ ಒಟಿಟಿಗೆ ಬರುತ್ತಿದೆ.

ಯಾವಾಗ ಬರುತ್ತಿದೆ?

ಸಿನಿಮಾ ರಸಿಕರು ಈ ಚಿತ್ರವನ್ನು ವೀಕ್ಷಿಸಲು ಹೆಚ್ಚು ದಿನ ಕಾಯಬೇಕಾಗಿಲ್ಲ. ಅಕ್ಟೋಬರ್ 30 ರಿಂದ ಡಿಜಿಟಲ್ ಫ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಾಗಲಿದೆ. ಸಂಜೆ 7 ಗಂಟೆಗೆ ಜಿಯೋ ಹಾಟ್‌ಸ್ಟಾರ್ ಸ್ಟ್ರೀಮಿಂಗ್ ಮಾಡಲಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕೊನೆಗೂ ಕಾಯುವಿಕೆ ಮುಗಿದಿದೆ. ಈ ಹ್ಯಾಲೋವೀನ್‌ನಲ್ಲಿ ಒಂದು ಆಸೆ ಎಲ್ಲವನ್ನೂ ಬದಲಾಯಿಸುತ್ತದೆ. ಆಬ್ಸೇಷನ್‌ನ ಮೂಲ ಕತ್ತರಿಸದ ಆವೃತ್ತಿಯು ಅಕ್ಟೋಬರ್ 30 ರಿಂದ ನಿಮ್ಮ ಜಿಯೋ ಹಾಟ್‌ಸ್ಟಾರ್‍‌ನಲ್ಲಿ ವೀಕ್ಷಿಸಬಹುದಾಗಿದೆ ಎಂದು ಹೇಳಿದೆ. ಅಂದಹಾಗೆ ಈ ಸಿನಿಮಾವನ್ನು ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ವೀಕ್ಷಿಸಬಹುದಾಗಿದೆ. ಈ ಹಿಂದೆ ಅಮೇಜಾನ್ ಫ್ರೈಮ್‌ನಲ್ಲಿ ರೆಂಟ್‌ಗೆ ಸಿಗುತ್ತಿತ್ತು.

Scroll to load tweet…

ವಿಶೇಷ ಅಂದ್ರೆ ಈ ಸಿನಿಮಾವನ್ನು 8 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ವಿಶ್ವದಾದ್ಯಂತ 4000 ಕೋಟಿಗೂ ಹೆಚ್ಚು ಹಣ ಗಳಿಸಿದೆ. ಅಂದರೆ 522 ಮಿಲಿಯನ್ ಡಾಲರ್ ಹಣಗಳಿಸಿತ್ತು. ಭಾರತೀಯ ಕರೆನ್ಸಿಯಲ್ಲಿ ನಾವು ನೋಡೋದಾದರೆ ಅದರ ಒಟ್ಟು ಮೌಲ್ಯ 4795 ಕೋಟಿ ರೂಪಾಯಿ ಆಗಿದೆ. ಈ ಚಿತ್ರವು ಪ್ರೇಕ್ಷಕರಿಂದಲೂ ಅದ್ಭುತ ಪ್ರತಿಕ್ರಿಯೆ ಪಡೆದಿತ್ತು. ಇನ್ನು, ಈ ಚಿತ್ರ ಭಾರತ ಒಂದರಲ್ಲೇ 99.25 ಕೋಟಿ ರೂಪಾಯಿ ಹಣ ಗಳಿಸಿತ್ತು.