- Home
- News
- India News
- 13 ಗಂಟೆಗಳಲ್ಲಿ 994 ಕಿಮೀ ಪ್ರಯಾಣ! ವಿಶೇಷ ಟ್ರೈನ್ ಟಿಕೆಟ್ ಬುಕಿಂಗ್ ಆರಂಭ, ಬೆಲೆ ಎಷ್ಟು ಗೊತ್ತಾ?
13 ಗಂಟೆಗಳಲ್ಲಿ 994 ಕಿಮೀ ಪ್ರಯಾಣ! ವಿಶೇಷ ಟ್ರೈನ್ ಟಿಕೆಟ್ ಬುಕಿಂಗ್ ಆರಂಭ, ಬೆಲೆ ಎಷ್ಟು ಗೊತ್ತಾ?
ದೀಪಾವಳಿ ಮತ್ತು ಛಾತ್ ಹಬ್ಬದ ಸಂದರ್ಭದಲ್ಲಿನ ಜನದಟ್ಟಣೆ ತಡೆಯಲು ಭಾರತೀಯ ರೈಲ್ವೆ ನವದೆಹಲಿ ಮತ್ತು ಪಾಟ್ನಾ ನಡುವೆ ವಂದೇ ಭಾರತ್ ಉತ್ಸವ ವಿಶೇಷ ರೈಲನ್ನು ಪ್ರಾರಂಭಿಸಿದೆ. 16 ಬೋಗಿಗಳ ಈ ರೈಲು 994 ಕಿ.ಮೀ ಪ್ರಯಾಣವನ್ನು ಕೇವಲ 13 ಗಂಟೆಗಳಲ್ಲಿ ಕ್ರಮಿಸಲಿದ್ದು, ಒಟ್ಟು 18 ಟ್ರಿಪ್ಗಳನ್ನು ಮಾಡಲಿದೆ.

ವಂದೇ ಭಾರತ್ ಉತ್ಸವ
ಹಬ್ಬದ ಸೀಸನ್ ಹಿನ್ನೆಲೆಯಲ್ಲಿ ಟ್ರೈನ್, ಬಸ್ಗಳ ಬುಕ್ಕಿಂಗ್ ತುಂಬಾನೇ ಕಷ್ಟ. ಇದೀಗ ದೊಡ್ಡ ದೊಡ್ಡ ನಗರದಿಂದ ಊರುಕಡೆ ಹೋಗುವ ಜನರಿಗೆ ಹಬ್ಬದ ಸಂದರ್ಭದಲ್ಲಿ ತುಂಬಾ ತೊಂದರೆ ಅನುಭವಿಸುತ್ತಾರೆ. ಇದೀಗ ಭಾರತೀಯ ರೈಲ್ವೆ ಇಲಾಖೆ ಹಬ್ಬದ ಸಂದರ್ಭದಲ್ಲಿನ ಜನದಟ್ಟಣೆ ತಡೆಯಲು ವಂದೇ ಭಾರತ್ ಉತ್ಸವ (Vande Bharat Festival Special Train) ವಿಶೇಷ ರೈಲನ್ನು ಪ್ರಾರಂಭಿಸಿದೆ.
18 ಟ್ರಿಪ್
ದೆಹಲಿಯಿಂದ ಬಿಹಾರಕ್ಕೆ ಹೋಗುವ ಸಾಮಾನ್ಯ ರೈಲುಗಳಲ್ಲಿ ಹೆಚ್ಚಿದ ದಟ್ಟಣೆಗೆ ಪ್ರತಿಕ್ರಿಯೆಯಾಗಿ, ರೈಲ್ವೆ ನವದೆಹಲಿ ಮತ್ತು ಪಾಟ್ನಾ ನಡುವೆ ವಂದೇ ಭಾರತ್ ಉತ್ಸವ ವಿಶೇಷ ರೈಲನ್ನು ಪ್ರಾರಂಭಿಸಿದೆ. ಈ ರೈಲು ಅಕ್ಟೋಬರ್ 16, 2026 ರಿಂದ ಕಾರ್ಯನಿರ್ವಹಿಸುತ್ತದೆ ಮತ್ತು ಪ್ರತಿ ದಿಕ್ಕಿನಲ್ಲಿ ಒಟ್ಟು 18 ಟ್ರಿಪ್ಗಳನ್ನು ಮಾಡುತ್ತದೆ ಎಂದು ವರದಿಯಾಗಿದೆ.
994 ಕಿಲೋ ಮೀಟರ್ ಪ್ರಯಾಣ
ದೀಪಾವಳಿ ಮತ್ತು ಛಾತ್ ಸಮಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸಲು ಈ ವಿಶೇಷ ರೈಲನ್ನು ಓಡಿಸಲಾಗುತ್ತಿದೆ. 16 ಬೋಗಿಗಳ ವಂದೇ ಭಾರತ್ ವಿಶೇಷ ರೈಲು ನವದೆಹಲಿ ಮತ್ತು ಪಾಟ್ನಾ ನಡುವೆ 994 ಕಿಲೋ ಮೀಟರ್ ಪ್ರಯಾಣವನ್ನು 13 ಗಂಟೆಯಲ್ಲಿ ತಲುಪಲಿದೆ.
ಬೇಗ ಬುಕ್ ಮಾಡಿದವ್ರಿಗೆ ಚಾನ್ಸ್
ಇನ್ನು ಈ ವಿಶೇಷ ಟ್ರೈನ್ ಬುಕಿಂಗ್ ಪ್ರಕ್ರಿಯೆ ಆರಂಭವಾಗಿದೆ. ಪ್ರಯಾಣಿಕರು ತಾವು ಪ್ರಯಾಣಿಸುವ ಹಾಗೂ ಸೀಟ್ ಲಭ್ಯತೆ ಬಗ್ಗೆ ಪರಿಶೀಲಿಸಬಹುದು. ಹಬ್ಬದ ದಿನ ಹಿನ್ನೆಲೆಯಲ್ಲಿ ಸೀಟುಗಳು ಅಷ್ಟು ಸುಲಭಕ್ಕೆ ಸಿಗೋದಿಲ್ಲ. ಆದಷ್ಟು ಬೇಗ ಬುಕ್ ಮಾಡಿಕೊಂಡರೆ, ನೀವು ಅಂದಿಕೊಂಡ ದಿನಾಂಕದಂದು ಪ್ರಯಾಣಿಸಬಹುದು.
ಬೆಲೆ ಎಷ್ಟು?
ಎಸಿ ಕೋಚ್ನ ದರ 2615 ರೂಪಾಯಿ ಆಗಿದೆ. ಊಟದ ವ್ಯವಸ್ಥೆ ಇರಲಿದೆ. ಎಕ್ಸಿಕ್ಯೂಟಿವ್ ಚೇರ್ ಕಾರಿನಲ್ಲಿ ಪ್ರಯಾಣಿಸಲು 4695 ರೂಪಾಯಿ ಪಾವತಿಸಬೇಕಾಗುತ್ತದೆ. ದೆಹಲಿಯಿಂದ 8.35ಕ್ಕೆ ಹೊರಟು ರಾತ್ರಿ 9.30ಕ್ಕೆ ತಲುಪಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ

