ಇತ್ತೀಚಿಗೆ ಡಿಪ್ರೇಶನ್ ಬಗ್ಗೆ ಸೆಲಬ್ರಿಟಿಗಳು ಮಾತನಾಡುವುದು ಹೆಚ್ಚುತ್ತಿದೆ. ದೀಪಿಕಾ ಪಡುಕೋಣೆ, ಅನುಷ್ಕಾ ಶರ್ಮಾ, ಕರಣ್ ಜೋಹರ್, ಟೈಗರ್ ಶ್ರಾಫ್, ಶಾರೂಕ್ ಖಾನ್ , ವರುಣ್ ಧವನ್ ತಮ್ಮ ಡಿಪ್ರೆಶನ್ ಬಗ್ಗೆ ಹೇಳಿಕೊಂಡಿದ್ದಾರೆ. 

ಕನ್ಫ್ಯೂಸ್ ಆಗಿ ಗಂಡಸರ ಬಾತ್ ರೂಮ್ ಒಳಹೊಕ್ಕ ’ಡ್ರೀಮ್ ಗರ್ಲ್’

ಇದೀಗ ಡ್ರೀಮ್ ಗರ್ಲ್ ನಟಿ ನುಶ್ರತ್ ಭರುಚಾ ತಾವೂ ಕೂಡಾ ಡಿಪ್ರೆಶನ್ ಗೆ ಒಳಗಾಗಿರುವ ಬಗ್ಗೆ, ಅದರಿಂದ ಓವರ್ ಕಮ್ ಆದ ಬಗ್ಗೆ ಮಾತನಾಡಿದ್ದಾರೆ. 

ಸಿನಿ ಕರಿಯರ್ ಶುರು ಮಾಡಿದ ಆರಂಭದಲ್ಲಿ ಡಿಪ್ರೇಶನ್ ಗೆ ಒಳಗಾಗಿದ್ದೆ. ನಿಧಾನಕ್ಕೆ ನನ್ನ ಸಾಮರ್ಥ್ಯದ ಬಗ್ಗೆಯೇ ಅನುಮಾನ ಶುರುವಾಯಿತು. ನನ್ನ ಫ್ಯಾಮಿಲಿ, ಸ್ನೇಹಿತರು, ಹಿತೈಶಿಗಳ ಸಾಂತ್ವನದ ಮಾತುಗಳಿಂದ ಹೊರ ಬರಲು ಸಾಧ್ಯವಾಯಿತು. ನಾಳೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆಯನ್ನು ಬೆಳೆಸಿಕೊಳ್ಳ ತೊಡಗಿದೆ. ಆ ನಂಬಿಕೆಯೇ ನನ್ನನ್ನು ಈ ಮಟ್ಟಕ್ಕೆ ಬೆಳೆಸಿತು’ ಎಂದಿದ್ದಾರೆ. 

ಕೊಡಗಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ; ಪ್ರತಾಪ್ ಸಿಂಹಗೆ ಮಾಹಿತಿ ಕೇಳಿದ ರಶ್ಮಿಕಾ

ನುಶ್ರತ್ ಭರುಚಾ ಡ್ರೀಮ್ ಗರ್ಲ್ ಸಿನಿಮಾದಲ್ಲಿ ಆಯುಶ್ಮಾನ್ ಖುರಾನಾ ಜೊತೆ ನಟಿಸಿದ್ದಾರೆ. ಸೆಪ್ಟೆಂಬರ್ 13 ರಂದು ತೆರೆಗೆ ಬರಲಿದೆ.