ನವೆಂಬರ್ ಮೊದಲ ವಾರದಲ್ಲೇ ಒಟ್ಟಿಗೆ ಐದು ಸಿನಿಮಾಗಳು ತೆರೆಕಂಡಿವೆ. ಈ ಪೈಕಿ ಶರಣ್ ನಟನೆಯ ‘ವಿಕ್ಟರಿ 2’ ಹಾಗೂ ರಾಜ್ ಬಿ ಶೆಟ್ಟಿ ಅಭಿನಯದ, ಚಂಪಾ ಶೆಟ್ಟಿ ನಿರ್ದೇಶನದ ‘ಅಮ್ಮಚ್ಚಿಯೆಂಬ ನೆನಪು’ ಚಿತ್ರಗಳು ಭಾರಿ ಮೆಚ್ಚುಗೆ ಗಳಿಸಿವೆ.

ಇದೇ ಥರ ಪ್ರತಿ ವಾರ ಮೂರು, ನಾಲ್ಕರಂತೆ ನವೆಂಬರ್ ತಿಂಗಳೊಂದರಲ್ಲೇ 25ಕ್ಕೂ ಹೆಚ್ಚು ಸಿನಿಮಾಗಳು ತೆರೆಗೆ ಬರುತ್ತಿವೆ. ಬಿಡುಗಡೆ ದಿನಾಂಕ ಈಗಾಗಲೇ ಕನ್‌ಫರ್ಮ್ ಮಾಡಿರುವ ಚಿತ್ರಗಳ ಪೈಕಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡ ‘ಜೀರ್ಜಿಂಬೆ’ ಚಿತ್ರ ಕೂಡ ಸೇರಿಕೊಂಡಿದೆ. ಇದರ ಜತೆಗೆ ಅಜಯ್ ರಾವ್ ನಟನೆಯ ‘ತಾಯಿ ತಕ್ಕ ಮಗ’, ಜಗ್ಗೇಶ್ ಅಭಿನಯದ ‘8ಎಂಎಂ’, ರವಿಚಂದ್ರನ್ ಅವರ‘ದಶರಥ’, ವಿನಯ್ ರಾಜ್‌ಕುಮಾರ್ ಅವರ ‘ಅನಂತು ವರ್ಸಸ್ ನುಸ್ರತ್’, ಧನಂಜಯ್ ನಟನೆಯ ‘ಭೈರವಗೀತ’, ಜುಗಾರಿ ಅರವಿಂದ್ ನಿರ್ದೇಶನದ ‘ಮಟಾಶ್’ ಚಿತ್ರಗಳು ಸದ್ಯ ನಿರೀಕ್ಷೆಯ ಪಟ್ಟಿಯಲ್ಲಿವೆ. ಇವುಗಳ ಆಚೆಗೂ ಬಿಡುಗಡೆಯ ಸಾಲಿನಲ್ಲಿರುವ ಉಳಿದ ಸಿನಿಮಾಗಳೂ ಅವುಗಳ ಕತೆ ಅಥವಾ ಹೊಸತನದಿಂದ ಗಮನ ಸೆಳೆದರೂ ಅಚ್ಚರಿ ಇಲ್ಲ.

ಇದೇ ತಿಂಗಳು ಬಿಡುಗಡೆಯಾಗುತ್ತಿದ್ದರೂ ಇನ್ನೂ ದಿನಾಂಕ ನಿಗದಿ ಮಾಡಿಕೊಳ್ಳದ ಚಿತ್ರಗಳ ಸಾಲಿನಲ್ಲಿ ಗೋಸಿಗ್ಯಾಂಗ್, ಆ್ಯಪಲ್ ಕೇಕ್ ಹಾಗೂ ಪ್ರೀತಿ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ ಚಿತ್ರಗಳೂ ಇವೆ. ಒಂದೇ ತಿಂಗಳಲ್ಲಿ ಇಷ್ಟು ದೊಡ್ಡ ಸಂಖ್ಯೆಲ್ಲಿ ಸಿನಿಮಾಗಳು ತೆರೆಗೆ ಬರುತ್ತಿರುವುದು ಇದೇ ಮೊದಲು. ಆ ಮೂಲಕ ಗಾಂಧಿನಗರ ನವೆಂಬರ್ ತಿಂಗಳ ಕನ್ನಡ ಜಾತ್ರೆಯನ್ನು ಹೀಗೆ ಆಚರಿಸಲಿಕ್ಕೆ ಹೊರಟಿದೆ ಎಂದರೆ ಅದು ತಮಾಷೆ ಅಲ್ಲ ಬಿಡಿ! ಬಿಡುಗಡೆಯಾಗಲು ಕಾದು ಕೂತಿರುವ ಸಿನಿಮಾಗಳು

ನ.9

 • ಜಗತ್ ಕಿಲಾಡಿ
 • ಎಂಎಲ್‌ಎ
 • ಗಲ್ಲಿ ಬೇಕರಿ
 • ಚರಂತಿ
 • ಮನಸಿನ ಮರೆಯಲಿ

ನ. 16

 • ತಾಯಿಗೆ ತಕ್ಕ ಮಗ
 • 8 ಎಂಎಂ
 • 13 ಜೀರ್ಜಂಬೆ
 • 14 ಸುರ್ ಸುರ್ ಬತ್ತಿ

ನ.22

 • ಭೈರವಗೀತ

ನ.30

 • ದಶರಥ
 • ಪರದೇಶಿ ಕೇರಾಫ್ ಲಂಡನ್
 • ಪ್ರಸ್ಥ
 • ಅನಂತು ವರ್ಸಸ್ ನುಸ್ರತ್
 • ಮಟಾಶ್