ಮೀಟೂ ಇಂದ ಯಾವುದೇ ಬದಲಾವಣೆ ಆಗಲ್ಲ | ಮನಸ್ಥಿತಿ ಬದಲಾಗಬೇಕು | ಬಾಲಿವುಡ್ ನಟಿ ಮಲೈಕಾ ಅರೋರಾ ಪ್ರತಿಕ್ರಿಯೆ 

ನವದೆಹಲಿ (ಅ. 30): ಮೀಟೂ ಅಭಿಯಾನದಲ್ಲಿ ದಿನಕ್ಕೊಂದು ಪ್ರಕರಣಗಳು ಹೊರ ಬರುತ್ತಿವೆ. ಖ್ಯಾತ ನಿರ್ದೇಶಕರು, ನಟರು, ನಿರ್ಮಾಪಕರು, ರಾಜಕಾರಣಿಗಳ ಬಂಡವಾಳ ಬಯಲಾಗುತ್ತಿದೆ. ತಮಗಾದ ಕಿರುಕುಳದ ಬಗ್ಗೆ ಮಹಿಳೆಯರು ಹೇಳಿಕೊಳ್ಳುತ್ತಿದ್ದಾರೆ. ತನುಶ್ರೀ ದತ್ತಾ ನಾನಾ ಪಾಟೇಕರ್ ವಿರುದ್ಧ ಮೀಟೂ ಆರೋಪ ಮಾಡಿದ್ದೇ ತಡ, ಬೇರೆ ಬೇರೆ ಪ್ರಕರಣಗಳು ಬಿಚ್ಚಿಕೊಳ್ಳತೊಡಗಿದವು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೀಟೂ ಮೇಡಂ ಶ್ರುತಿ ಸಿನಿಮಾದಿಂದ ಔಟ್ ?

ಈ ಬಗ್ಗೆ ನಟಿ ಮಲೈಕಾ ಅರೋರಾ ಪ್ರತಿಕ್ರಿಯೆ ನೀಡಿದ್ದಾರೆ. ಮೀಟೂ ಆಂದೋಲನದಿಂದ ಬಹಳ ಬದಲಾವಣೆಯೇನೂ ಆಗಿಲ್ಲ. ಬದಲಾವಣೆಗಿಂತ ಹೆಚ್ಚು ಗದ್ದಲವನ್ನು ಮಾಡುತ್ತಿದೆ. ಸಿನಿಮಾ ರಂಗದಲ್ಲಿ ಇಂತಹ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಇದರ ಬಗ್ಗೆ ಆಂದೋಲನ ಮಾಡಿದ್ರೆ ಸಾಲದು. ಒಂದೆಡೆ ಕುಳಿತು ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಜನರ ಮನಸ್ಥಿತಿ ಬದಲಾಗಬೇಕು. ಇದು ಒಂದು ರಾತ್ರಿಯಲ್ಲಿ ಆಗುವಂತದ್ದಲ್ಲ ಎಂದು ಮಲೈಕಾ ಹೇಳಿದ್ದಾರೆ. 

ಸರ್ಜಾ ಬಂಧನವಾದ್ರೆ ಶಿಕ್ಷೆ ಏನು..? ಪ್ರಕರಣಕ್ಕೆ ಹೊಸ ಟ್ವಿಸ್ಟ್