ಶ್ರುತಿ ಹರಿಹರನ್ ಅವರ ಮುಂದಿನ ಸಿನಿಮಾಗಳು ಯಾವುವು ಎನ್ನುವ ಪಟ್ಟಿ ನೋಡಿದರೆ ಅವರ ಖಾತೆ ಖಾಲಿ ಇರುವುದು ಗೊತ್ತಾಗುತ್ತದೆ

ನೃತ್ಯಗಾರ್ತಿಯಾಗಿ ಬಂದ ಶ್ರುತಿ ಲೂಸಿಯಾ ಚಿತ್ರದ ಮೂಲಕ ನಾಯಕಿಯಾಗಿ ಅತಿಥಿ ಪಾತ್ರ, ನಾಯಕಿಯಾಗಿ ನಟಿಸಿದ ಒಟ್ಟು ಕನ್ನಡ ಸಿನಿಮಾಗಳು 18. ಪವನ್ ಕುಮಾರ್ ನಿರ್ದೇಶನದ ‘ಲೂಸಿಯಾ’ದಿಂದ ಶುರುವಾಗಿ ಗುರುದತ್ತ ಗಾಣಿಗ ನಿರ್ದೇಶನದ ‘ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರದವರೆಗೂ 18 ಚಿತ್ರಗಳಲ್ಲಿ ನಟಿಸಿರುವ ಶ್ರುತಿ ಹರಿಹರನ್‌ಗೆ ನಾಯಕಿಯಾಗಿ ಗೆಲುವು ಸಿಕ್ಕಿದ್ದು ಮಾತ್ರ ಮೂರು- ನಾಲ್ಕು ಚಿತ್ರದಲ್ಲಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸದ್ಯ ಮೀಟೂ ಹೆಸರಿನಲ್ಲಿ ಸುದ್ದಿಯಾಗುತ್ತಿರುವ ಶ್ರುತಿ ಹರಿಹರನ್ ಅವರಿಗೆ ಕನ್ನಡದಲ್ಲಿ ಯಾವ ಚಿತ್ರವೂ ಇಲ್ಲ ಎನ್ನುತ್ತದೆ ಅವರ ಸಿನಿಮಾ ಪ್ರೊಪೈಲ್. ಈಗ ಬಿಡುಗಡೆಯಾಗಬೇಕಿರುವ ಸಿನಿಮಾಗಳ ಪೈಕಿ ಎರಡು ಚಿತ್ರ ಬಾಕಿ ಇದೆ. ಅದು ಮನ್ಸೋರೆ ನಿರ್ದೇಶನದ ‘ನಾತಿಚರಾಮಿ’ ಮತ್ತು ‘ಟೆಸ್ಲಾ’. ಭವಿಷ್ಯದಲ್ಲಿ ಬಿಎಸ್ ಲಿಂಗದೇವರು ನಿರ್ದೇಶನದ ‘ದಾರಿ ತಪ್ಪಿಸು ದೇವರೇ’ ಚಿತ್ರದಲ್ಲಿ ನಟಿಸುತ್ತಾರೆ ಎನ್ನಲಾಗಿತ್ತು. ರಿಷಿ ಈ ಚಿತ್ರದ ನಾಯಕ ನಟನಾಗಿ ಆಯ್ಕೆಯಾಗಿದ್ದರು. ಆದರೆ, ಇದೀಗ ಬಂದಿರುವ ಮಾಹಿತಿ ಪ್ರಕಾರ ಲಿಂಗದೇವರು ಚಿತ್ರದಲ್ಲಿ ಶ್ರುತಿ ಹರಿಹರನ್ ನಟಿಸುತ್ತಿಲ್ಲ ಎನ್ನಲಾಗಿದೆ.

ಇದು ಮೀಟೂ ಎಫೆಕ್ಟಾ ಎಂದರೆ ನಿರ್ದೇಶಕರು ಹೇಳುವುದೇ ಬೇರೆ. ‘ನಮ್ಮ ಚಿತ್ರಕ್ಕೆ ಶ್ರುತಿ ಹರಿಹರನ್ ಅವರೇ ನಾಯಕಿ ಅಂತ ನಾನು ಎಲ್ಲೂ ಹೇಳಿಲ್ಲ. ಎರಡು ಕಡೆ ಮಾತುಕತೆ ಮಾಡಲಾಗುತ್ತಿತ್ತು. ಆದರೆ, ಅದು ಖಚಿತಮಾಡಿಕೊಂಡಿರಲಿಲ್ಲ. ಡೇಟ್ಸ್ ವಿಚಾರಗಳ ಸುತ್ತ ಮಾತುಕತೆ ಮಾಡಿದ್ದಷ್ಟೇ. ಹೀಗಾಗಿ ನಮ್ಮ ಚಿತ್ರಕ್ಕೆ ಶ್ರುತಿ ಅವರೇ ನಾಯಕಿ ಅಂತ ಹೇಳಲಾಗದು’ ಎನ್ನುತ್ತಾರೆ ನಿರ್ದೇಶಕ ಬಿಎಸ್ ಲಿಂಗದೇವರು.

ಮೀಟೂ ಮುಗಿಸಿ ಅಮೆರಿಕಗೆ?

ನಟಿ ಶ್ರುತಿ ಹರಿಹರನ್ ಅಮೆರಿಕಗೆ ಹೊರಡಲಿದ್ದಾರೆಂಬ ಸುದ್ದಿಯೂ ಇದೆ. ಮೀಟೂ ಗಲಾಟೆ ಮುಗಿಸಿಕೊಂಡು ಜನವರಿ ತಿಂಗಳ ಹೊತ್ತಿಗೆ ಅಮೆರಿಕಗೆ ಹೊರಡುವ ತಯಾರಿ ಮಾಡಿಕೊಳ್ಳುತ್ತಿದ್ದಾರಂತೆ ಲೂಸಿಯಾ ಬೆಡಗಿ. ಯಾಕೆ ಅಮೆರಿಕ ಎಂದು ಕೇಳಿದವರಿಗೆ ‘ನಾನು ಅಧ್ಯಯನಕ್ಕೆ ತೆರಳುತ್ತಿದ್ದೇನೆ. ಕೋರ್ಸ್ ಮಾಡಬೇಕು’ ಎನ್ನುತ್ತಿದ್ದಾರೆ ಎನ್ನಲಾಗಿದೆ. ಯಾವ ಕೋರ್ಸು ಎಂದರೆ ಉತ್ತರವಿಲ್ಲ. 

ನಟಿಸಿರುವ ಒಟ್ಟು ಕನ್ನಡ ಸಿನಿಮಾಗಳು- 18

ಬಿಡುಗಡೆಗೆ ರೆಡಿ ಆಗಿದ್ದು - 1 (ನಾತಿಚರಾಮಿ)

ಚಿತ್ರೀಕರಣ ಮುಗಿಸಿ ಕೊಂಡಿದ್ದು- 1 (ಟೆಸ್ಲಾ)

ಬೇರೆ ಒಪ್ಪಿಕೊಂಡ ಚಿತ್ರಗಳು- 0 (ಯಾವುದೂ ಇಲ್ಲ)