ಪಂಚ ಭಾಷೆಯಲ್ಲಿ ತೆರೆ ಕಂಡ KGF ಚಿತ್ರ ಭಾರತದಲ್ಲಿ ಮಾತ್ರವಲ್ಲದೇ ಬೇರೆ ಬೇರೆ ದೇಶಗಳಲ್ಲೂ ರಿಲೀಸ್ ಆಗಿ ಲಕ್ಷಾಂತರ ಫ್ಯಾನ್‌ಗಳನ್ನು ಸೃಷ್ಟಿಸಿಕೊಂಡಿದೆ.

 

ಈ ಚಿತ್ರ ಉತ್ತರ ಆಫ್ರಿಕಾದ ಹುಡುಗನನ್ನೂ ಮೋಡಿ ಮಾಡುವಲ್ಲಿ ಯಶಸ್ವಿಯಾಗಿದೆ ಎಂದರೆ ಚಿತ್ರ ಅದೆಷ್ಟರ ಮಟ್ಟಿಗೆ ಕಮಾಲ್ ಮಾಡಿರಬಹುದು ಎಂಬುದನ್ನು ಊಹಿಸಬಹುದು. ಉತ್ತರ ಆಫ್ರಿಕಾದ ಮೊರೊಕ್ಕೂದಲ್ಲಿಯೂ ಯಶ್‌ಗೆ ಅಭಿಮಾನಿ ಹುಟ್ಟಿಕೊಂಡಿದ್ದಾನೆ. ತನ್ನ ರೂಮಿನಲ್ಲಿಯೇ ಕೆಜಿಎಫ್‌ ಯಶ್ ಲುಕ್ ಫೋಟೋ ಅಂಟಿಸಿಕೊಂಡು ಸೆಲ್ಫೀ ತೆಗೆದುಕೊಂಡಿದ್ದಾನೆ. ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಈ ಪೋಟೋ ವೈರಲ್ ಆಗುತ್ತಿದೆ.

ಕೆಜಿಎಫ್-2 ರಿಲೀಸ್ ಬಗ್ಗೆ ಏನಂತಾರೆ ಪ್ರಶಾಂತ್ ನೀಲ್?

ಇನ್ನು ಸಿನಿಮಾ ಬಿಡುಗಡೆಯಾದ ನಂತರ ಮೊದಲ ಭಾರಿ ಮಾಧ್ಯಮಗಳ ಮುಂದೆ ಎದುರಾದ ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಗಂದೂರ್, ಸಿನಿ ರಂಗದ ಖ್ಯಾತ ನಟ ಅನಂತ್‌ನಾಗ್ ಹಾಗೂ ನಾಯಕ ಯಶ್ ಮತ್ತು ನಾಯಕಿ ಶ್ರೀನಿಧಿ ಶೆಟ್ಟಿ ಚಿತ್ರದ ಯಶಸ್ನಿನ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ.

ಯಶ್ ನಾಯಕ ನಟನಾಗಿ ಅಭಿನಯಿಸಿರುವ ಕೆಜಿಎಫ್ ರಿಲೀಸ್ ಆಗಿ ಸುಮಾರು ತಿಂಗಳಾಗುತ್ತಿದ್ದು, ಅತ್ಯುತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಪಂಚ ಭಾಷೆಗಳಲ್ಲಿ ತೆರೆ ಕಂಡ ಮೊದಲ ಕನ್ನಡ ಚಿತ್ರ ಎಂಬ ಸಂಭ್ರಮ ಕನ್ನಡಿಗರಿಗೆ ಈ ಚಿತ್ರದ ಮೂಲಕ ದೊರಕಿದೆ.

ಟೀಂ ಇಂಡಿಯಾದಲ್ಲೂ KGF ಹವಾ-ಯಶ್ ಭೇಟಿಯಾದ ಬ್ಯಾಟ್ಸ್‌ಮನ್!