Asianet Suvarna News Asianet Suvarna News

ಧೋನಿ ಸಿನಿಮಾದಲ್ಲಿ ತೆರೆ ಮೇಲಿನ ಕೊಹ್ಲಿಗಿಲ್ಲ ಬೆಲೆ!

ಕೊಹ್ಲಿಯಾಗಿ ನಟಿಸಿರೋದು ಆವದ್! ಆದರೆ, ಟ್ರೈಲರಲ್ಲಾಗಲೀ, ಚಿತ್ರದ ಪ್ರಚಾರದಲ್ಲಾಗಲೀ, ಎಲ್ಲೂ ಆವದ್ ಕಾಣಿಸುತ್ತಿಲ್ಲ.

no value to kohli in dholi film

ಮುಂಬೈ(ಸೆ.26): ಮಹೇಂದ್ರಸಿಂಗ್ ಧೋನಿಯ ಬಯೋಪಿಕ್ ಬಿಡುಗಡೆಗೆ ಇನ್ನು ಮೂರು ದಿನವಷ್ಟೇ ಬಾಕಿ. ಧೋನಿಯ ಬಯೋಪಿಕ್‌ನಲ್ಲಿ ಕೊಹ್ಲಿಯ ಪಾತ್ರ ಇದ್ದೇ ಇರುತ್ತೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಇಲ್ಲಿ ಕೊಹ್ಲಿಯಾಗಿ ನಟಿಸಿರೋದು ಆವದ್! ಆದರೆ, ಟ್ರೈಲರಲ್ಲಾಗಲೀ, ಚಿತ್ರದ ಪ್ರಚಾರದಲ್ಲಾಗಲೀ, ಎಲ್ಲೂ ಆವದ್ ಕಾಣಿಸುತ್ತಿಲ್ಲ. ಯಾಕೆ ಗೊತ್ತಾ?

ಪಾಕ್‌ನ ಹ್ಯಾಂಡ್ಸಮ್ ನಟ ಆವದ್ ಖಾನ್ ಇಕ್ಕಟ್ಟಿನಲ್ಲಿದ್ದಾರೆ. ಬಾಲಿವುಡ್‌ನಲ್ಲಿ ಅವರಿಗೆ ಸಣ್ಣಪುಟ್ಟವೇ ಆದರೂ ಗಮನ ಸೆಳೆಯುವಂಥ ಪಾತ್ರಗಳೇ ಸಿಗುತ್ತಿವೆ. ಆದರೆ, ಸಿನಿಮಾ ಬಿಡುಗಡೆ ವೇಳೆ ಯಾರೂ ತಮ್ಮನ್ನು ಪ್ರಮೋಶನ್‌ಗೆ ಕರೆಯೋದಿಲ್ಲ, ಈ ಚಿತ್ರದಲ್ಲಿ ಆವದ್ ನಟಿಸಿದ್ದಾನೆ ಅಂತ ಖುಷಿಯಿಂದ ಹೇಳಿಕೊಳ್ಳುವುದಿಲ್ಲ ಎಂಬುದು ಅವರ ಆರೋಪವಂತೆ.

ಮಹೇಂದ್ರಸಿಂಗ್ ಧೋನಿಯ ಬಯೋಪಿಕ್ ಬಿಡುಗಡೆಗೆ ಇನ್ನು ಮೂರು ದಿನವಷ್ಟೇ ಬಾಕಿ. ಧೋನಿಯ ಬಯೋಪಿಕ್‌ನಲ್ಲಿ ಕೊಹ್ಲಿಯ ಪಾತ್ರ ಇದ್ದೇ ಇರುತ್ತೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಇಲ್ಲಿ ಕೊಹ್ಲಿಯಾಗಿ ನಟಿಸಿರೋದು ಆವದ್! ಆದರೆ, ಟ್ರೈಲರಲ್ಲಾಗಲೀ, ಚಿತ್ರದ ಪ್ರಚಾರದಲ್ಲಾಗಲೀ, ಎಲ್ಲೂ ಆವದ್ ಕಾಣಿಸುತ್ತಿಲ್ಲ. ಇಲ್ಲಿ ಧೋನಿಗೆ ಕೊಹ್ಲಿ ಮೇಲೆ ಸಿಟ್ಟಿದೆ ಎಂಬುದನ್ನು ತೋರಿಸಲು ಚಿತ್ರತಂಡ ಹೊರಟಿಲ್ಲ. ಆದರೂ ಯಾಕೆ ಆವದ್‌ನ ಮಹತ್ವದ ಪಾತ್ರದ ಬಗ್ಗೆ ಹೇಳುತ್ತಿಲ್ಲ? ಟ್ರೈಲರ್‌ನಲ್ಲೂ ಯಾಕೆ ಅವರನ್ನು ತೋರಿಸಿಲ್ಲ?

ಇನ್ನು ಕರಣ್ ಜೋಹಾರ್ ನಿರ್ದೇಶನದ ‘ಯೇ ದಿಲ್ ಹೈ ಮುಷ್ಕಿಲ್’ ಕತೆ ಕೇಳಿ. ರಣಬೀರ್ ಕಪೂರ್, ಐಶ್ವರ್ಯಾ ರೈ, ಅನುಷ್ಕಾ ಶರ್ಮಾ ಜೊತೆಗೆ ಇಲ್ಲೂ ಆವದ್ ಇದ್ದಾರೆ! ಅಕ್ಟೋಬರ್ 28ರಂದು ಸಿನಿಮಾ ತೆರೆ ಕಾಣುತ್ತಿದೆ. ಆವದ್ ಇಲ್ಲಿ ಸಲಿಂಗ ಕಾಮಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಖತ್ ಸೌಂಡ್ ಮಾಡಿರುವ ಈ ಚಿತ್ರದ ಟ್ರೈಲರ್‌ನಲ್ಲಿ ಆವದ್‌ಖಾನ್ ಹೆಸರೇ ಇಲ್ಲ! ಹೋಗಲಿ, ಚಿತ್ರತಂಡ ಪ್ರಚಾರಕ್ಕಾದರೂ ಕರೆಯಿತಾ? ಅದೂ ಇಲ್ಲ ಎನ್ನುತ್ತಿದ್ದಾರಂತೆ ಆವದ್.

ಯಾಕೆ ಹೀಗೆ ಎನ್ನುವುದಕ್ಕೆ ನೇರ ಕಾರಣ ಮಹಾರಾಷ್ಟ್ರ ನವನಿರ್ಮಾಣ ಸೇನೆ! ಹೌದು, ಎಂಎನ್‌ಎಸ್‌ನ ಅಧ್ಯಕ್ಷ ಅಮೇ ಖೋಪ್ಕರ್ ಅವರ ವಿಡಿಯೋ ಈಗ ಮುಂಬೈನ ಎಲ್ಲೆಡೆ ವೈರಲ್ ಆಗಿದೆ. ಕಾಶ್ಮೀರದ ಉರಿಯಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸುತ್ತಾ, ‘ಇನ್ನು 24 ಗಂಟೆಗಳಲ್ಲಿ ಪಾಕ್ ನಟರು ಭಾರತದಿಂದ ಜಾಗ ಖಾಲಿ ಮಾಡಬೇಕು. ಅವರ ನಟಿಸಿರುವ ಚಿತ್ರಗಳನ್ನು ಮಹಾರಾಷ್ಟ್ರದಲ್ಲಿ ತೆರೆಕಾಣಲು ಬಿಡೋದಿಲ್ಲ’ ಎಂದಿದ್ದರು. ಬಾಲಿವುಡ್‌ನ ಪಾಲಿಗೆ ಮುಂಬೈ ಬಹುದೊಡ್ಡ ಮಾರುಕಟ್ಟೆ. ಇಲ್ಲಿ ಎರಡು ವಾರ ಸಿನಿಮಾ ಓಡಿದರೂ ಹಾಕಿದ ಬಂಡವಾಳ ವಾಪಸ್ಸಾಗುತ್ತೆ. ಬಾಲಿವುಡ್‌ನ ಹೃದಯ ಭಾಗದಲ್ಲಿಯೇ ಸಿನಿಮಾಕ್ಕೆ ಹೊಡೆತ ಬೀಳಬಾರದೆನ್ನುವ ಕಾರಣಕ್ಕೆ ತಮ್ಮ ಚಿತ್ರಗಳಲ್ಲಿ ನಟಿಸಿರುವ ಆವದ್‌ನ ಹೆಸರನ್ನು ಬಹಿರಂಗಪಡಿಸುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಗಾಸಿಪ್ ಆವದ್‌ಗೂ ತಲುಪಿ ನಿರಾಶೆ ಮೂಡಿಸಿದೆ.

ಶಾರುಖ್‌ಖಾನ್ ನಟನೆಯ ರಯೀಸ್ ಚಿತ್ರಕ್ಕೂ ಎಂಎನ್‌ಎಸ್‌ನ ಬೆದರಿಕೆಯಿದೆ. 2017ರಲ್ಲಿ ತೆರೆಕಾಣಲಿರುವ ಈ ಚಿತ್ರಕ್ಕೆ ಪಾಕ್ ನಟಿ ಮಹಿರಾ ಖಾನ್ ನಾಯಕಿ. ಇದೇ ಕಾರಣ ಇಟ್ಟುಕೊಂಡು ‘ರಯೀಸ್’ ತಡೆಗೆ ಎಂಎನ್‌ಎಸ್ ಅಭಿಯಾನ ನಡೆಸುತ್ತಿದೆ. ಮಹಿರಾ ಕೂಡ ಯಾರ ಮಾತಿಗೂ ಸಿಗುತ್ತಿಲ್ಲ. ಅಂದಹಾಗೆ, ಈ ಆವದ್ ಕೈಯಲ್ಲಿ ಇನ್ನೂ ಎರಡು ಹಿಂದಿ ಚಿತ್ರಗಳಿವೆ. ಇವೆಲ್ಲ ಕಹಿಗಳನ್ನು ಮರೆತು ಕೇವಲ ಕಲಾವಿದರನಾಗಿ ಅವರು ನಟನೆಗೆ ತಮ್ಮನ್ನು ಅರ್ಪಿಸಿಕೊಳ್ಳುತ್ತಿದ್ದಾರೆ.

 

ಎಂಎಸ್ ಧೋನಿ ಚಿತ್ರತಂಡ, ಯೇ ದಿಲ್ ಹೈ ಮುಷ್ಕಿಲ್ ಬಳಗ ಇನ್ನಾದರೂ ಆವದ್ ಬೆನ್ನಿಗೆ ನಿಲ್ಲುತ್ತಾ? ‘ನಮ್ಮ ಸಿನಿಮಾದಲ್ಲಿ ಆವದ್ ಇದ್ದಾನೆ, ಒಳ್ಳೆಯ ನಟನೆ ತೋರಿದ್ದಾನೆ’ ಅಂತ ಹೇಳಿಕೊಳ್ಳುತ್ತಾ? ಕಾದು ನೋಡಬೇಕಷ್ಟೇ!