ಕ್ಯೂಟೆಸ್ಟ್ ಗರ್ಲ್ ನಿವೇದಿತಾ ಗೌಡ ಅಪ್ಸರೆಯಂತೆ ಕಂಗೊಳಿಸುತ್ತಿದ್ದಾರೆ. ಲಲಿತ ಮಹಲ್’ನಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಅವರ ಲುಕ್ ಬದಲಾಗಿದೆ. ಯಾವುದಾದ್ರು ಸಿನಿಮಾ ಮಾಡ್ತಾ ಇದ್ದಾರಾ? 

ಬೆಂಗಳೂರು (ಜು. 16): ಬಿಗ್‌'ಬಾಸ್ ಖ್ಯಾತಿಯ ನಿವೇದಿತಾ ಗೌಡ ಲುಕ್ ಬದಲಾಗಿದೆ. ಬಾರ್ಬಿ ಡಾಲ್ ಥರ ಕಾಣಿಸುತ್ತಿದ್ದ ಈ ಹುಡುಗಿ ಈಗ ಯಾವುದೋ ಚಿತ್ರದ ನಾಯಕಿಯಂತೆ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

ಯಾವ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಕುತೂಹಲದಿಂದ ಅವರಿಗೆ ಫೋನ್ ಮಾಡಿದರೆ ಅವರ ತಾಯಿ ಹೇಮಾ, ‘ಸದ್ಯಕ್ಕೆ ಚಿತ್ರದಲ್ಲಿ ನಟಿಸುವ ಯಾವುದೇ ಆಲೋಚನೆ ಇಲ್ಲ. ಸಂದೀಪ್ ಫೋಟೋಶೂಟ್ ಮಾಡಿದ್ದಾರೆ. ನಿವೇದಿತಾ ಬಿಸಿಎ ಪದವಿ ಕಲಿಯುತ್ತಿದ್ದು, ಜೊತೆಗೆ ಏವಿಯೇಷನ್ ಮ್ಯಾನೇಜ್‌ಮೆಂಟ್ ಕಲಿಯುತ್ತಿದ್ದಾರೆ’ ಎಂದಿದ್ದಾರೆ. ಹಾಗಾಗಿ ಸದ್ಯಕ್ಕೆ ನಿವೇದಿತಾ ಯಾವುದೇ ಚಿತ್ರದಲ್ಲಿ ನಟಿಸುತ್ತಿಲ್ಲ. ಏನಕ್ಕೂ ಕಾಯ್ತಾ ಇರಿ ’ ಎಂದಿದ್ದಾರೆ.

ಲಲಿತ ಮಹಲ್’ನಲ್ಲಿ ನಿವೇದಿತಾ ಗೌಡ ಫೋಟೋ ಶೂಟ್ ನೋಡಿ. 

ದೇವಲೋಕದ ಅಪ್ಸರೆ ಧರೆಗಿಳಿದಂತಿದೆ ನಿವೇದಿತಾ ಗೌಡರ ಈ ಫೋಟೋ ಶೂಟ್!