ಬಿಗ್‌ಬಾಸ್ ಚೆಲುವೆ ನಿವೇದಿತಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಮನೆಯಲ್ಲೇ ಇರೋ ನಿವೇದಿತಾ ವಿಡಿಯೋ ಮಾಡ್ತಾ, ಫೋಟೋ ಶೂಟ್ ಮಾಡ್ತಾ ಇರ್ತಾರೆ. ಅದನ್ನು ಫ್ಯಾನ್ಸ್ ಜೊತೆ ಶೇರ್ ಮಾಡ್ತಾರೆ.

ಚಂದ ಚಂದದ ವಿಡಿಯೋ ಮಾಡಿ ಶೇರ್ ಮಾಡೋ ನಿವೇದಿತಾ ಈ ಸಲ ಜಲೇಬಿ ಬೇಬಿ ಅಂತ ಹಾಡಿದ್ದಾರೆ. ಸೂಪರ್ ಆಗಿರೋ ಹಾಡಿಗೆ ಸೂಪರ್ ಆಗಿ ಸ್ಟೆಪ್ ಹಾಕಿದ್ದಾರೆ ಬಿಗ್‌ಬಾಸ್ ಬ್ಯೂಟಿ.

ನಿವೇದಿತಾ ಸಖತ್ ಡ್ಯಾನ್ಸ್ ಮಾಡಿದ್ರೆ ಹಿಂಗ್ ಹೇಳೋದಾ ಫ್ಯಾನ್ಸ್?

ಶಾರ್ಟ್ ಬ್ಲಾಕ್‌ ಫ್ರಾಕ್ ಹಾಕಿದ ನಿವೇದಿತಾ ವೈಟ್ ಜಾಕೆಟ್ ಹಾಕಿದ್ದಾರೆ. ಒಂದು ಕ್ಯಾಪ್ ಕೂಡಾ ಧರಿಸಿ ಸೊಂಟ ಬಳುಕಿಸಿದ್ದಾರೆ ನಿವೇದಿತಾ. ಸದ್ಯ ನಿವೇದಿತಾ ಗೌಡ ಫಾಲೋವರ್ಸ್ ಸಂಖ್ಯೆ 1 ಮಿಲಿಯನ್ ಇದೆ. ಗಂಡ ಚಂದನ್‌ ಶೆಟ್ಟಿಯನ್ನು ಮಾತ್ರ ಫಾಲೋ ಮಾಡ್ತಿದ್ದಾರೆ ನಿವೇದಿತಾ.