ಬಿಗ್‌ಬಾಸ್ ಚೆಲುವೆ ನಿವೇದಿತಾ ಗೌಡ ಮೊದಲು ಟಿಕ್‌ಟಾಕ್‌ನಲ್ಲಿ ಫೇಮಸ್ ಇದ್ರು. ಈಗ ಟಿಕ್‌ಟಾಕ್ ಬ್ಯಾನ್ ಆದ ಮೇಲೆ ಈಕೆ ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ವಿಡಿಯೋಗಳನ್ನು ಮಾಡ್ತಾರೆ.

ಇತ್ತೀಚೆಗೆ ನಿವೇದಿತಾ ಹಾಕಿದ ಕ್ಯೂಟ್‌ ಡ್ಯಾನ್ಸ್ ವಿಡಿಯೋ ಈಗ ವೈರಲ್ ಆಗಿದೆ, ಶ್ಯಾಡೋ ತರ ಇರೋ ತ್ರೀಡಿ ಲೈಟ್‌ ರೀತಿಯ ಫೀಚರ್ ಬಳಸಿ ಚಂದದ ವಿಡಿಯೋ ಮಾಡಿದ್ದಾರೆ ನಿವೇದಿತಾ.

ಜ್ಯೂಸ್ ಸ್ಟ್ರಾನಲ್ಲಿ ಮ್ಯೂಸಿಕ್ ಬೀಟ್ಸ್: ವೈಫ್ ಜೊತೆ ರಸಂ ಮಾಡ್ಕೊಂಡ್ ಕೂತಿದ್ಯಾ ಎಂದವನಿಗೆ ಚಂದನ್ ಖಡಕ್ ಆನ್ಸರ್

ವಿಡಿಯೋ ನೋಡಿ ಫ್ಯಾನ್ಸ್ ಲೈಕ್ ಮಾಡಿ ಕಮೆಂಟ್ ಮಾಡಿದ್ದಾರೆ. ಅಭಿಮಾನಿಯೊಬ್ಬ ಪ್ಲೀಸ್ ಚಂದನ್ ಆಕೆಯನ್ನು ಪ್ರೆಗ್ನೆಂಟ್ ಮಾಡು, ಆಕೆ ಈಗಲೂ ಮಗುವಿನಂತೆ ಬಿಹೇವ್ ಮಾಡ್ತಾಳೆ ಎಂದು ಬರೆದಿದ್ದಾರೆ.

ಇನ್ನೊಬ್ಬ ಅಭಿಮಾನಿ ನೋಡಿ ನಿಮ್ಮ ಆತ್ಮಾನೂ ಕುಣಿತಾ ಇದೆ ಎಂದು ಕಮೆಂಟ್ ಮಾಡಿದ್ದಾರೆ. ಅಂತೂ ಚಂದನ್ ಮತ್ತು ನಿವೇದಿತಾ ಏನು ಫೋಟೋ ವಿಡಿಯೋ ಹಾಕಿದ್ರು ಒಂದಷ್ಟು ಜನ ಕಾಲೆಳೆಯೋದು ಮಾತ್ರ ತಪ್ಪುತ್ತಿಲ್ಲ